2025ರ ಬಳಿಕ ದೇಶದಲ್ಲಿ ವಿದ್ಯುತ್ ಚಾಲಿತ ಬೈಕ್ ಮಾತ್ರ ಮಾರಾಟ?
2025ರ ಬಳಿಕ ದೇಶದಲ್ಲಿ ವಿದ್ಯುತ್ ಚಾಲಿತ ಬೈಕ್ ಮಾತ್ರ ಮಾರಾಟ?| ನೀತಿ ಆಯೋಗ ಪ್ರತಿಪಾದನೆ
ನವದೆಹಲಿ[ಜು.12]: ಪರಿಸರ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ 2025ರ ಮಾಚ್‌ರ್ 31ರ ಬಳಿಕ 150 ಸಿಸಿಗಳಿಗಿಂತ ಕಡಿಮೆ ಸಾಮರ್ಥ್ಯದ ಎಲ್ಲಾ ಬೈಕ್‌ಗಳು ವಿದ್ಯುತ್ ಚಾಲಿತ ಮಾತ್ರವೇ ಆಗಿರಬೇಕು ಎಂದು ನೀತಿ ಆಯೋಗ ಪ್ರತಿಪಾದಿಸಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಈ ಬಗ್ಗೆ ಗುರುವಾರ ಲೋಕಸಭೆ ಕಲಾಪಕ್ಕೆ ಲಿಖಿತ ಉತ್ತರ ನೀಡಿದ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ‘2023ರ ಮಾಚ್‌ರ್ 31ರ ಬಳಿಕ ದೇಶಾದ್ಯಂತ ವಿದ್ಯುತ್ ಚಾಲಿತವಾದ ಮೂರು ಚಕ್ರದ ವಾಹನಗಳನ್ನು ಮಾತ್ರವೇ ಮಾರಾಟಬೇಕು ಎಂದು ನೀತಿ ಆಯೋಗ ಪ್ರಸ್ತಾಪಿಸಿದೆ’ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ನೂತನ ಮಾದರಿಯ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಇದೇ ವೇಳೆ ಗಡ್ಕರಿ ತಿಳಿಸಿದರು.