ಮುಂದಿನ 10-15 ವರ್ಷ ಎಲೆಕ್ಟ್ರಿಕ್ ವಾಹನ ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ: ಮಾರುತಿ ಮುಖ್ಯಸ್ಥ ಆರ್‌ಸಿ ಭಾರ್ಗವ್

ಮಾರುತಿ ಸುಜುಕಿ ಬಹಳ ಹಿಂದಿನಿಂದಲೂ ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳನ್ನು ಬೆಂಬಲಿಸುತ್ತಿದೆ ಎಂದು  ಮಾರುತಿ ಮುಖ್ಯಸ್ಥ ಆರ್‌ಸಿ ಭಾರ್ಗವ್ ಹೇಳಿದ್ದಾರೆ 

Electric vehicles wont give the intended results for the next 15 years Maruti chief RC Bhargava mnj

ನವದೆಹಲಿ (ಮಾ. 16): ಭಾರತದಂತಹ ದೇಶದಲ್ಲಿ, ತಲಾ ಆದಾಯವು ಯುರೋಪ್ ಮತ್ತು ಯುಎಸ್‌ ತಲಾ ಆದಾಯಕ್ಕೆ ಹೋಲಿಸಿದರೆ ಅತಿ ಕಡಿಮೆಯಿದ್ದು ಕಲ್ಲಿದ್ದಲು ವಿದ್ಯುತ್‌ನ ಪ್ರಮುಖ ಮೂಲವಾಗಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳು (ಇವಿ) ಮುಂದಿನ 10-15 ವರ್ಷಗಳವರೆಗೆ ಇಂಗಾಲದ ಹೊರಸೂಸುವಿಕೆಯಲ್ಲಿ ಉದ್ದೇಶಿತ ಫಲಿತಾಂಶವನ್ನು ನೀಡುವುದಿಲ್ಲ ಎಂದು  ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿಯ ಅಧ್ಯಕ್ಷ  ಮಂಗಳವಾರ ಹೇಳಿದ್ದಾರೆ.

ಎಕಾನಾಮಿಕಲ್ಸ್‌ ಟೈಮ್ಸ್ ಆಟೋ ಇವಿ ಕಾನ್ಕ್ಲೇವ್ 2022 ರಲ್ಲಿ ಮಾತನಾಡಿದ ಆರ್‌ಸಿ ಭಾರ್ಗವ "ಸಂಕುಚಿತ ನೈಸರ್ಗಿಕ ಅನಿಲ (CNG), ಬಯೋ-ಸಿಎನ್‌ಜಿ, ಎಥೆನಾಲ್ ಮತ್ತು ಹೈಬ್ರಿಡ್ ವಾಹನಗಳಂತಹ ಪರ್ಯಾಯ ತಂತ್ರಜ್ಞಾನಗಳನ್ನು ಉತ್ತೇಜಿಸಬೇಕು ಎಂದು ಹೇಳಿದರು. ಕಾರುಗಳು ಕಡಿಮೆ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ ಮತ್ತು ಭಾರತವು ತನ್ನ ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಹೇಳಿದ್ದಾರೆ.

ಅತ್ಯಧಿಕ ತೆರಿಗೆ: ಭಾರ್ಗವ ಅವರು ಸಿಎನ್‌ಜಿ ಚಾಲಿತ ಕಾರುಗಳಿಗೆ ಹೆಚ್ಚು ಮಾಲಿನ್ಯಕಾರಕ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಂತೆಯೇ ತೆರಿಗೆ ವಿಧಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಭಾರತದಲ್ಲಿನ ವಾಹನಗಳು 28%ನ ಅತ್ಯಧಿಕ ತೆರಿಗೆ ಸ್ಲ್ಯಾಬನ್ನು ಹೊಂದಿದ್ದು  ಅದರ ಮೇಲೆ ಹೆಚ್ಚುವರಿ ಸೆಸ್ ಸಹ ಹೊಂದಿದೆ. ಈ ಮಧ್ಯೆ ಎಲೆಕ್ಟ್ರಿಕ್ ಕಾರುಗಳು 5% ಜಿಎಸ್ಟಿ ಹೊಂದಿವೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಸುಜುಕಿ ಇಂಡಿಯಾ ಮೈಲಿಗಲ್ಲು; 10 ಲಕ್ಷ ಸಿಎನ್‌ಜಿ ಕಾರು ಮಾರಾಟ

ಸಿಎನ್‌ಜಿ ಮತ್ತು ಹೈಬ್ರಿಡ್ ವಾಹನಗಳಿಗೆ ಕಡಿಮೆ ತೆರಿಗೆ ವಿಧಿಸುವಂತೆ ಮನವಿ ಮಾಡಿದ ಭಾರ್ಗವ "ಕೃಷಿ ತ್ಯಾಜ್ಯದಿಂದ ದೇಶದಲ್ಲಿ ಜೈವಿಕ-ಸಿಎನ್‌ಜಿ ಉತ್ಪಾದನೆಯ ಉತ್ತೇಜಿಸಬೇಕು, ಇದು ಕಾರ್ಬನ್ ನೆಗೆಟಿವ್" ಎಂದು ಹೇಳಿದರು.

"ಯುಎಸ್ ಮತ್ತು ಯುರೋಪ್ ಅನುಸರಿಸುತ್ತಿರುವ ತಂತ್ರಗಳನ್ನು ನಾವು ಅಳವಡಿಸಿಕೊಂಡರೆ, ನಾವು ಭಾರತದಲ್ಲಿ ಏನು ಮಾಡಬೇಕೋ ಅದಕ್ಕೆ ನಾವು ನ್ಯಾಯ ಸಲ್ಲಿಸುತ್ತೇವೆ ಎಂದು ನಾನು ಭಾವಿಸುವುದಿಲ್ಲ" ಎಂದು ಅವರು ಹೇಳಿದರು.

2025ರ ಮೊದಲು ಎಲೆಕ್ಟ್ರಿಕ್ ಕಾರು ಪ್ರಾರಂಭಿಸುವುದಿಲ್ಲ: ಖಚಿತವಾಗಿ ಹೇಳಬೇಕೆಂದರೆ, ಮಾರುತಿ ಸುಜುಕಿ ಬಹಳ ಹಿಂದಿನಿಂದಲೂ ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳನ್ನು ಬೆಂಬಲಿಸುತ್ತಿದೆ. ಕಂಪನಿಯು 2025 ರ ಮೊದಲು ಎಲೆಕ್ಟ್ರಿಕ್ ಕಾರನ್ನು ಪ್ರಾರಂಭಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಭಾರ್ಗವ ಅವರು ಭಾರತೀಯರ ತಲಾ ಆದಾಯವು ಯುರೋಪಿಯನ್ನರ ತಲಾ ಆದಾಯದ ಕೇವಲ 5% ಮತ್ತು ಅಮೆರಿಕನ್ನರ 3% ಎಂದು ಹೇಳಿದ್ದಾರೆ.  ಹೀಗಾಗಿ ಭಾರತದಲ್ಲಿ ವೈಯಕ್ತಿಕ ಸಾರಿಗೆಗೆ ಕೈಗೆಟುಕುವ ಬೆಲೆ ತುಂಬಾ ಕಡಿಮೆಯಾಗಿದೆ. ಅದಕ್ಕಾಗಿಯೇ ಹೆಚ್ಚಿನ ಭಾರತೀಯರು ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಮತ್ತು ಸಣ್ಣ ಕಾರುಗಳನ್ನು ಬಯಸುತ್ತಾರೆ.

ಇದನ್ನೂ ಓದಿbattery swapping ಭಾರತದಲ್ಲಿ ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸಲು ಹೋಂಡಾ, HPCL ಒಪ್ಪಂದ!

ಎಲೆಕ್ಟ್ರಿಕ್ ವಾಹನಗಳು ಹೋಲಿಸಬಹುದಾದ ಕಂಬಷನ್-ಎಂಜಿನ್ ವಾಹನಗಳಿಗಿಂತ ಗಮನಾರ್ಹವಾಗಿ ಹೆಚ್ಚು ದುಬಾರಿಯಾಗಿದೆ. "ಬಹುಪಾಲು ಭಾರತೀಯರು ದ್ವಿಚಕ್ರ ವಾಹನಗಳ ಬಳಕೆದಾರರಾಗಿ ಉಳಿಯಬೇಕು ಎಂಬುದು ನಮ್ಮ ಉದ್ದೇಶವೇ?" ಎಂದು  ಪ್ರಶ್ನಿಸಿದರು.

ಇದಲ್ಲದೆ, ಭಾರತವು ತನ್ನ 75% ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲಿನಿಂದ ಪಡೆಯುತ್ತದೆ ಮತ್ತು ಆದ್ದರಿಂದ ಇವಿಗಳು ತಮ್ಮ ಹೊರಸೂಸುವಿಕೆಯನ್ನು ಟೈಲ್ ಪೈಪ್‌ನಿಂದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ವರ್ಗಾಯಿಸುತ್ತಿವೆ ಎಂದು ಅವರು ಹೇಳಿದರು. 

ಭಾರತವು ಇವಿ ಬ್ಯಾಟರಿಗಳನ್ನು ತಯಾರಿಸಲು ಅಗತ್ಯವಾದ ಅಂಶಗಳಾದಾ ಲಿಥಿಯಂ ಅಥವಾ ಕೋಬಾಲ್ಟ್‌ನ ಮೀಸಲು ಹೊಂದಿಲ್ಲ.  ಆದ್ದರಿಂದ ಇವಿಗಳಿಗೆ ಪರಿವರ್ತನೆಯು ಭಾರತದ ಕಚ್ಚಾ ತೈಲ ಆಮದು ಲಿಥಿಯಂ ಮತ್ತು ಕೋಬಾಲ್ಟ್‌ಗೆ ಬದಲಾಯಿಸಬೇಕಾಗುತ್ತದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios