Asianet Suvarna News Asianet Suvarna News

ದೀಪಾವಳಿ ಆಫರ್: ಮಾರುತಿ ಕಾರುಗಳ ಮೇಲೆ 75 ಸಾವಿರ ಡಿಸ್ಕೌಂಟ್!

ದೀಪಾವಳಿ ಹಬ್ಬಕ್ಕೆ ಗರಿಷ್ಠ ಕಾರು ಮಾರಾಟ ಮಾಡಲು ಮುಂದಾಗಿರುವ ಮಾರುತಿ ಸುಜುಕಿ ಇದೀಗ ವಿಶೇಷ ಆಫರ್ ಘೋಷಿಸಿದೆ. ಮಾರುತಿ ಸುಜುಕಿ ಪ್ರಮುಖ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಇಲ್ಲಿದೆ ಡಿಸ್ಕೌಂಟ್ ಮಾಹಿತಿ.
 

Diwali 2018 Maruti Suzuki Offering Upto Rs 75000 Discounts For Festive Seasons
Author
Bengaluru, First Published Oct 30, 2018, 7:08 PM IST

ಬೆಂಗಳೂರು(ಅ.30): ಭಾರತದ ಗರಿಷ್ಠ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಇದೀಗ ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್ ಘೋಷಿಸಿದೆ. ಈ ಮೂಲಕ ಮಾರಾಟ ಮತ್ತೆ ದಾಖಲೆ ಬರೆಯಲು ಮುಂದಾಗಿದೆ.

Diwali 2018 Maruti Suzuki Offering Upto Rs 75000 Discounts For Festive Seasons

ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ಕಾರು ಖರೀದಿಸುವ ಗ್ರಾಹಕರಿಗೆ ಆಫರ್ ನೀಡಿದೆ. 7 ಸಾವಿರದಿಂದ 75 ಸಾವಿರದ ವರೆಗೆ ಮಾರುತಿ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಿದೆ.  ಆಲ್ಟೋ ಕಾರಿನಿಂದ ಹಿಡಿದು ನೂತನ ಸ್ಪಿಫ್ಟ್, ಡಿಸೈರ್ ಕಾರುಗಳಿಗೂ ಆಫರ್ ನೀಡಲಾಗಿದೆ.

Diwali 2018 Maruti Suzuki Offering Upto Rs 75000 Discounts For Festive Seasons

ಆಲ್ಟೋ 800 ಕಾರಿಗೆ ಗರಿಷ್ಠ 45,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಜೊತೆಗೆ ಎಕ್ಸ್‌ಚೇಂಜ್ ಬೋನಸ್ ಕೂಡ ನೀಡಲಾಗಿದೆ. ಆಲ್ಟೋ ಕೆ10 ಕಾರಿಗೆ 50,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಆಲ್ಟೋ ಕೆ10 AMT ವೆರಿಯೆಂಟ್ ಕಾರಿಗೆ 55,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ.

Diwali 2018 Maruti Suzuki Offering Upto Rs 75000 Discounts For Festive Seasons

ವ್ಯಾಗನ್ಆರ್ ಪೆಟ್ರೋಲ್ ಕಾರಿಗೆ 55,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ವ್ಯಾಗನ್ಆರ್  CNG ಕಾರಿಗೆ 60,000 ಹಾಗೂ AMT ಕಾರಿಗೆ 65,000 ರೂಪಾಯಿ ಆಫರ್ ಘೋಷಿಸಲಾಗಿದೆ. ಇನ್ನು ಎಕ್ಸ್‌ಚೇಂಜ್ ಬೋನಸ್ ಕೂಡ ನೀಡಲಾಗಿದೆ.

Diwali 2018 Maruti Suzuki Offering Upto Rs 75000 Discounts For Festive Seasons

ಸೆಲೆರಿಯೋ ಕಾರಿಗೆ ಗರಿಷ್ಠ 60,000 ರೂಪಾಯಿ ಡಿಸ್ಕೌಂಟ್, ಮಾರುತಿ ಸುಜುಕಿ ಇಕೋ ಕಾರಿಗೆ 7000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಮಾರುತಿ ಸ್ಪಿಫ್ಟ್ ಹಾಗೂ ಡಿಸೈರ್ ಪೆಟ್ರೋಲ್ ಕಾರಿಗೆ 25,000 ರೂಪಾಯಿ ಹಾಗೂ ಡೀಸೆಲ್ ಕಾರಿಗೆ 40,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಮಾರುತಿ ಸುಜುಕಿ ಆಫರ್ ಕೇವಲ  ದೀಪಾವಳಿ ಹಬ್ಬಕ್ಕೆ ಮಾತ್ರ. ಇಷ್ಟೇ ಅಲ್ಲ ಷರತ್ತುಗಳು ಅನ್ವಯ. 

Follow Us:
Download App:
  • android
  • ios