ಧಾರವಾಡದಲ್ಲಿ ಉತ್ಪಾದನೆಯಾದ ಟಾಟಾ ಎಲೆಕ್ಟ್ರಿಕ್ ಬಸ್ ಇಂದೋರ್‌ಗೆ!

ಮಾಲಿನ್ಯ ನಿಯಂತ್ರಿಸಲು ಹಾಗೂ ವೆಚ್ಚ ಕಡಿಮೆ ಮಾಡಲು ಸರ್ಕಾರ ಇದೀಗ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡುತ್ತಿದೆ. ನಗರಗಳಲ್ಲಿ ಸಾರಿಗೆ ವ್ಯವಸ್ಥೆ ಕೂಡ ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಗುತ್ತಿದೆ. ಇದೀಗ ಇಂದೋರ್ ನಗರ ಕೂಡ ಎಲೆಕ್ಟ್ರಿಕ್ ಬಸ್ ಸೇವೆ ಬಳಸಿಕೊಳ್ಳುತ್ತಿದೆ. ಇದಕ್ಕೆ ಕರ್ನಾಕದಲ್ಲಿ ತಯಾರಾದ ಬಸ್‌ಗಳನ್ನು ಖರೀದಿಸಿದೆ.

Dharwad tata motors plant supplies 40 electric buses to indore city

ಧಾರವಾಡ(ಮಾ.09): ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೆಹಲಿ, ಕೋಲ್ಕತಾ, ಲಕ್ನೋ ಬಳಿಕ ಇದೀಗ ಇಂದೋರ್ ನಗರದಲ್ಲೂ ಎಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸುತ್ತಿದೆ. ಇಂದೋರ್ ಸಾರಿಗೆ ಇಲಾಖೆಗೆ ಟಾಟಾ ಮೋಟಾರ್ಸ್ 40 ಎಲೆಕ್ಟ್ರಿಕ್ ಬಸ್ ನೀಡಿದೆ.

ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!

ಇಂದೋರ್‌ಗೆ ನೀಡಲಾಗಿರುವ 40 ಎಲೆಕ್ಟ್ರಿಕ್ ಬಸ್ ತಯಾರಾಗಿದ್ದು ಕರ್ನಾಟಕದ ಧಾರವಾಡದಲ್ಲಿನ ಟಾಟಾ ಮೋಟಾರ್ಸ್ ಮತ್ತು ಟಾಟಾ ಮಾರ್ಕೋಪೋಲೋ ಉತ್ಪಾದನ ಘಟಕದಲ್ಲಿ ಅನ್ನೋದೇ ವಿಶೇಷ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ರೇಂಜ್ ಪ್ರಯಾಣ ಮಾಡಬಲ್ಲ ಈ ಬಸ್‌ಗಳು ನಗರ ಸಾರಿಗೆಗೆ ಹೇಳಿ ಮಾಡಿಸಿದ ಬಸ್.

ಇದನ್ನೂ ಓದಿ: ಮಾರುತಿ ಜಿಪ್ಸಿ ಉತ್ಪಾದನೆ ಅಂತ್ಯ- ಇನ್ಮುಂದೆ ಸಿಗಲ್ಲ ಫೇವರಿಟ್ ಕಾರು!

ಮಾಲಿನ್ಯ ನಿಯಂತ್ರಿಸಲು ದೇಶದ ಎಲ್ಲಾ ನಗರಗಳು ಎಲೆಕ್ಟ್ರಿಕ್ ಬಸ್ ಮೊರೆ ಹೋಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ದೇಶಕ್ಕೆ ಎಲೆಕ್ಟ್ರಿಕ್ ಬಸ್ ಪೂರೈಸೋ ಮಹತ್ತರ ಜವಾಬ್ದಾರಿ ಹೊತ್ತಿದೆ. ಇಷ್ಟೇ ಅಲ್ಲ ವಿದೇಶಿ ಎಲೆಕ್ಟ್ರಿಕ್ ಬಸ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಬಸ್ ಪೂರೈಕೆ ಮಾಡುತ್ತಿದೆ.  ಮುಂದಿನ ಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ  ಜೈಪರ್‌ಗೆ ಎಲೆಕ್ಟ್ರಿಕ್ ಬಸ್ ಪೂರೈಕೆ ಮಾಡಲಿದೆ.
 

Latest Videos
Follow Us:
Download App:
  • android
  • ios