ನವದೆಹಲಿ(ಅ.12): ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದರೂ, ದಾಟ್ಸನ್ ಹೊಸ ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ದಾಟ್ಸನ್ ಗೋ ಹಾಗೂ ದಾಟ್ಸನ್ ಗೋ + CVT ಆಟೋಮ್ಯಾಟಿಕ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎಂದಿನಂತೆ ದಾಟ್ಸನ್ ಕಡಿಮೆ ಬೆಲೆಯಲ್ಲಿ ಈ ವೇರಿಯೆಂಟ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: 10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ S ಪ್ರೆಸ್ಸೋ!

ದಾಟ್ಸನ್ ಗೋ ಕಾರಿನ ಬೆಲೆ(ಎಕ್ಸ್ ಶೋ ರೂಂ)
ದಾಟ್ಸನ್ Go CVT T =  5.94 ಲಕ್ಷ ರೂ 
ದಾಟ್ಸನ್Go CVT T(O) = Rs 6.18 lakhs

ದಾಟ್ಸನ್ Go ಪ್ಲಸ್ ಕಾರಿನ ಬೆಲೆ(ಎಕ್ಸ್ ಶೋ ರೂಂ)
ದಾಟ್ಸನ್ Go Plus T = Rs 6.58 lakhs
ದಾಟ್ಸನ್ Go Plus T(O) = Rs 6.8 lakhs

ಇದನ್ನೂ ಓದಿ: ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು!

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದಾಟ್ಸನ್ ಗೋ CVT ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಲಾಗಿದೆ. ನಗರ ಪ್ರದೇಶ ಸೇರಿದಂತೆ ಯಾವುದೇ ಮೂಲೆಯಲ್ಲೂ ಆರಾಮದಾಯಕ ಡ್ರೈವಿಂಗ್‌ಗಾಗಿ CVT ಆಟೋಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಇತರ CVT ವೇರಿಯೆಂಟ್ ಕಾರುಗಳಿಗೆ ಹೋಲಿಸಿದರೆ, ದಾಟ್ಸನ್ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ ಎಂದು ದಾಟ್ಸನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾತ್ಸವ್ ಹೇಳಿದ್ದಾರೆ.

ಇದನ್ನೂ ಓದಿ: ಟಾಟಾ ಟಿಯಾಗೋ Wizz ಕಾರು ಲಾಂಚ್; ಬೆಲೆ ಕೇವಲ 5.40 ಲಕ್ಷ!

ದಾಟ್ಸನ್ ಗೋ ಹಾಗೂ ದಾಟ್ಸನ್ Go ಪ್ಲಸ್ CVT ಆಟೋಮ್ಯಾಟಿಕ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.   76 hp ಪವರ್ ಹಾಗೂ 104 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  CVT ವೇರಿಯೆಂಟ್ ಮೈಲೇಜ್ 20.07 kmpl.