ಸತತ 3ನೇ ವರ್ಷ ವಿರಾಟ್ ಕೊಹ್ಲಿ ಗರಿಷ್ಠ ರನ್ ಸರದಾರ!

2018ನೇ ವರ್ಷದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ನಾಯಕ ವಿರಾಟ್ ಕೊಹ್ಲಿ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಸತತ ಮೂರನೇ ವರ್ಷ ಕೊಹ್ಲಿ ಗರಿಷ್ಠ ರನ್ ಸಾಧನೆ ವಿವರ ಇಲ್ಲಿದೆ.

Cricket third consecutive year Virat Kohli scored Highest International runs

ಮೆಲ್ಬರ್ನ್(ಡಿ.30): ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸೋ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಗೆಲುವಿನ ಬೆನ್ನಲ್ಲೇ, ನಾಯಕ ವಿರಾಟ್ ಕೊಹ್ಲಿ ಸತತ 3ನೇ ವರ್ಷವೂ ಗರಿಷ್ಠ ಅಂತಾರಾಷ್ಟ್ರೀಯ ರನ್ ಸಿಡಿಸಿದ ಸರದಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಣಜಿ ತಂಡಕ್ಕೆ ಮನೀಶ್ ಪಾಂಡೆ ನಾಯಕ!

ಪ್ರಸಕ್ತ ವರ್ಷ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಿಂದ 2653 ರನ್ ಸಿಡಿಸಿದ್ದಾರೆ. 69.81 ರ ಸರಾಸರಿಯಲ್ಲಿ ಈ ವರ್ಷ ಕೊಹ್ಲಿ ಬ್ಯಾಟಿಂಗ್ ಮಾಡಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ 2595 ರನ್ ಸಿಡಿಸಿದ್ದರೆ, 2017ರಲ್ಲಿ 2818 ರನ್ ಸಿಡಿಸಿದ್ದಾರೆ. ಈ ಮೂಲಕ ಸತತ ಮೂರನೇ ವರ್ಷವೂ ಗರಿಷ್ಠ ಅಂತಾರಾಷ್ಟ್ರೀಯ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್ ಗೆಲುವಿನ ಬಳಿಕ ಪುಟ್ಟ ಬಾಲಕನಿಗೆ ಕೊಹ್ಲಿ ಭರ್ಜರಿ ಗಿಫ್ಟ್!

ರನ್ ಮಶಿನ್ ಕೊಹ್ಲಿ 2018ನೇ ವರ್ಷದಲ್ಲಿ ಗರಿಷ್ಠ ರನ್ ಹಾಗೂ ಗೆಲುವಿನೊಂದಿಗೆ ಸಂಭ್ರಮಿಸಿದ್ದಾರೆ. ಇದೀಗ ಹೊಸ ವರ್ಷದಲ್ಲೂ ಮತ್ತೆ ಅಬ್ಬರಿಸೋ  ವಿಶ್ವಾಸದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ಆರಂಭಗೊಳ್ಳಲಿದೆ.

Latest Videos
Follow Us:
Download App:
  • android
  • ios