ನವದೆಹಲಿ(ಫೆ.28): ಮಾರುತಿ ಸುಜುಕಿ ನೂತನ ವ್ಯಾಗನ್ಆರ್ ಕಾರು ಭಾರತದಲ್ಲಿ ಸದ್ದು ಮಾಡುತ್ತಿದೆ. ಹೊಸ ವರ್ಷದಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಯಾದ ವ್ಯಾಗನ್ಆರ್ ಕಾರು ಇದೀಗ CNG(ಆಟೋ ಗ್ಯಾಸ್) ವೇರಿಯೆಂಟ್‌ನಲ್ಲೂ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೆ ವ್ಯಾಗನ್ಆರ್ CNG ಕಾರಿನ ಬೆಲೆ ಬಹಿರಂಗವಾಗಿದೆ.

ಇದನ್ನೂ ಓದಿ: ಗೊತ್ತಿಲ್ದೇ ಇರೋ ಟ್ರಾಫಿಕ್ ನಿಯಮ -ಅಪರಿಚಿತರಿಗೆ ಲಿಫ್ಟ್, ಕಾರಿನಲ್ಲಿ ಟಿವಿ ನಿಷೇಧ!

ನೂತನ ವ್ಯಾಗನ್ಆರ್ CNG ಕಾರಿನ ಬೆಲೆ 4.84 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಇದು ಬೇಸ್ ಮಾಡೆಲ್ LXi ಟ್ರಿಮ್ ವೇರಿಯೆಂಟ್ ಬೆಲೆ. ಇತರ CNG ಕಾರುಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಹ್ಯುಂಡೈ ಸ್ಯಾಂಟೋ CNG ಬೆಲೆ 5.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ - ನೂತನ ಮಹೀಂದ್ರ ಸ್ಕಾರ್ಪಿಯೋ ಸೇರ್ಪಡೆ!

ವೈಟ್ , ಗ್ರೇ ಹಾಗೂ ಸಿಲ್ವರ್ ಬಣ್ಣಗಳಲ್ಲಿ ನೂತನ ವ್ಯಾಗನ್ಆರ್ CNG ಕಾರು ಲಭ್ಯವಿದೆ. ವ್ಯಾಗನ್ಆರ್ CNG 1.0 ಲೀಟರ್ ಎಂಜಿನ್, 3 ಸಿಲಿಂಡರ್ ಹೊಂದಿದ್ದು, 67 Bhp ಪವರ್  90 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.