2017ರಿಂದ ಮಾರಾಟವಾಗುವ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆ ಕಡ್ಡಾಯವಾಗಿದೆ. ಸರ್ಕಾರ 2019ರ ಅಕ್ಟೋಬರ್‌ 1ರಿಂದ ಫಾಸ್ಟ್‌ಟ್ಯಾಗ್‌ ಅನ್ನು ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ಕಾರುಗಳಿಗೆ ಹೊಸದಾಗಿ ಥರ್ಡ್‌ ಪಾರ್ಟಿ ವಿಮೆ ಖರೀದಿಸಲು 2021ರ ಏ.1ರಿಂದ ಫಾಸ್ಟ್‌ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.03): ಕಾರುಗಳಿಗೆ ಹೊಸದಾಗಿ ಥರ್ಡ್‌ ಪಾರ್ಟಿ ವಿಮೆ ಖರೀದಿಸಲು 2021ರ ಏ.1ರಿಂದ ಫಾಸ್ಟ್‌ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 

ಅಲ್ಲದೇ 2017ರ ಡಿಸೆಂಬರ್‌ಗೂ ಮುನ್ನ ಮಾರಾಟವಾದ ನಾಲ್ಕು ಚಕ್ರದ ವಾಹನಗಳಿಗೆ 2021ರ ಜನವರಿಯಿಂದ ಫ್ಯಾಸ್ಟ್‌ಟ್ಯಾಗ್‌ ಅನ್ನು ಕಡ್ಡಾಯಗೊಳಿಸಲು ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಉದ್ದೇಶಿಸಿದೆ. ಈ ಸಂಬಂಧ ಸಚಿವಾಲಯ ಅಧಿಸೂಚನೆಯೊಂದನ್ನು ಹೊರಡಿಸಿದೆ. 

1989ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಪ್ರಕಾರ, 2017ರಿಂದ ಮಾರಾಟವಾಗುವ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆ ಕಡ್ಡಾಯವಾಗಿದೆ. ಸರ್ಕಾರ 2019ರ ಅಕ್ಟೋಬರ್‌ 1ರಿಂದ ಫಾಸ್ಟ್‌ಟ್ಯಾಗ್‌ ಅನ್ನು ಜಾರಿಗೊಳಿಸಿದೆ.

ಫಾಸ್ಟ್ಯಾಗ್ ನಡೆಯಲ್ಲ ಹಣ ಕಟ್ಟು; ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಲ್ಲೆ!

ಸರ್ಕಾರದ ಈ ಚಿಂತನೆ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದು, ಫಾಸ್ಟ್‌ಟ್ಯಾಗ್‌ಗೂ ಮತ್ತು ವಿಮೆ ಕಂಪನಿಗೂ ಏನು ಸಂಬಂಧ. ಈ ಬಗ್ಗೆ ಸರ್ಕಾರ ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇ ಟೋಲ್ ಸಂಗ್ರಹವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಬಳಸಲು ಅನುವು ಮಾಡಿಕೊಟ್ಟಿದೆ. ಕಳೆದ ತಿಂಗಳು ಸರ್ಕಾರ ಫಾಸ್ಟ್‌ಟ್ಯಾಗ್ ಬಳಸುವವರಿಗೆ ಕೆಲವೊಂದು ರಿಯಾಯಿತಿಗಳನ್ನು ಘೋಷಿಸಿತ್ತು. ನ್ಯಾಷನಲ್‌ ಪರ್ಮಿಟ್‌ ಹೊಂದಿರುವ ವಾಹನಗಳು ಅಕ್ಟೋಬರ್ 01, 2019ರಿಂದಲೇ ಫಾಸ್ಟ್‌ಟ್ಯಾಗ್‌ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.