ನವದೆಹಲಿ(ಆ.24): ಕೊರೋನಾ ವೈರಸ್ ಕಾರಣ ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಜನರು ಕೆಲಸವಿಲ್ಲದೆ, ಆದಾಯವೂ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ದಾಖಲೆ ಪತ್ರ ಸೇರಿದಂತೆ ತಮ್ಮ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬರುವುದು ಕೊರೋನಾ ವೈರಸ್‌ನ್ನು ಆಹ್ವಾನ ಮಾಡಿದಂತೆ. ಇದಕ್ಕಾಗಿ ಕೇಂದ್ರ ಸರ್ಕಾರ ಲೈಸೆನ್ಸ್ ಸೇರಿದಂತೆ ಮೋಟಾರು ವಾಹನ ದಾಖಲೆ ಪತ್ರಗಳ ವ್ಯಾಲಿಡಿಟಿಯನ್ನು ಮತ್ತೆ ವಿಸ್ತರಿಸಿದೆ.

 6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ಕೊರೋನಾ ವೈರಸ್ ಕಾರಣ ವಾಹನದ ರಿಜಿಸ್ಟ್ರೇಶನ್, ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಸೇರಿದಂತೆ ಹಲವು ದಾಖಲೆ ಪತ್ರಗಳ ಅವಧಿ ಮುಕ್ತಾಯವಾಗುತ್ತಿದ್ದರೆ ಚಿಂತೆ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರ ಇದೀಗ ಈ ದಾಖಲೆ ಪತ್ರಗಳ ಮಾನ್ಯತೆಯನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಜೂನ್ 30 ವರೆಗೆ ವಿಸ್ತರಿಸಲಾಗಿತ್ತು.  ಬಳಿಕ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಡಿಸೆಂಬರ್ ವರೆಗೆ ವಿಸ್ತರಿಸಲಾಗಿದೆ.

15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!

ಕೊರೋನಾ ವೈರಸ್ ಕಾರಣ ದಾಖಲೆ ಪತ್ರಕ್ಕಾಗಿ ಕಚೇರಿಗಳಿಗೆ ಅಲೆದಾಟ, ವಾಹನದಲ್ಲಿ ಓಡಾಟ ಕಷ್ಟವಾಗಲಿದೆ. ಕಳೆದ ಫೆಬ್ರವರಿಯಲ್ಲಿ ವಾಹನ ಪರ್ಮಿಟ್ ಸೇರಿದಂತೆ ಮೋಟಾರು ವಾಹನ ದಾಖಲೆ ಪತ್ರ ಅವಧಿ ಮುಗಿದಿದ್ದರೆ, ಈ ದಾಖಲೆ ಪತ್ರಗಳ ಅವಧಿ ಇದೀಗ ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.