ಕುಸಿದ ಮಾರಾಟಕ್ಕೆ ಚೇತರಿಕೆ; ವಾಹನ ಕಂಪನಿಗಳಿಗೆ ಹಣಕಾಸು ಸಚಿವೆ ಭರವಸೆ!

ಭಾರತದ ಆಟೋಮೊಬೈಲ್ ಕಂಪನಿಗಳ ಆರ್ಥಿಕ ಹಿನ್ನಡೆ ಸರಿದೂಗಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಈ ಮೂಲಕ ಆಟೋಮೊಬೈಲ್ ಕಂಪನಿಗಳಿಗೆ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾದರೆ ನೂತನ ಯೋಜನೆ ಯಾವುದು? ಇಲ್ಲಿದೆ ವಿವರ.

Center government will lift ban on new vehicle purchase rule says nirmala Sitharaman

ದೆಹಲಿ(ಆ.24): ಭಾರತದ ಆಟೋಮೊಬೈಲ್ ಮಾರುಕಟ್ಟೆ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ವಾಹನಗಳು ಮಾರಾಟವಾಗುತ್ತಿಲ್ಲ, ಕಂಪನಿಗಳ ಉತ್ಪಾದನೆಯ ಪ್ರಮಾಣ ಕಡಿಮೆ ಮಾಡಿದೆ. ಉದ್ಯೋಗ ಕಡಿತ, ನಿರ್ವಣಹಾ ವೆಚ್ಚ ಕಡಿತ ಸೇರಿದಂತೆ ಹಲವು ಬದಲಾವಣೆಗಳನ್ನು ವಾಹನ ಮಾರುಕಟ್ಟೆ ಕಾಣುತ್ತಿದೆ. ಪ್ರತಿ ದಿನ ಲಕ್ಷಕ್ಕೂ ಹೆಚ್ಚಿನ ಮಂದಿ ನಿರೋದ್ಯೋಗಿಗಳಾಗುತ್ತಿದ್ದಾರೆ. ಆಟೋಮೊಬೈಲ್ ಪುನಶ್ಚೇತನಕ್ಕೆ ಕಂಪನಿಗಳು ಹಲವು ಮನವಿ ಸಲ್ಲಿಸಿದೆ. ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಹನ ಕಂಪನಿಗೆ ಮರುಜೀವನ ನೀಡೋ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: 40 ಸಾವಿರ ವ್ಯಾಗನ್R ಕಾರು ಹಿಂಪಡೆದ ಮಾರುತಿ!

GST(ತೆರಿಗೆ) ಹಾಗೂ ನೂತನ ನಿಯಮದಿಂದ ಭಾರದದಲ್ಲಿ ಕಾರು, ಬೈಕ್ ಬೆಲೆ ಹೆಚ್ಚಾಗಿದೆ. ಇದು ಮಾರಾಟದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಪ್ರತಿ ವಾಹನ ಕಂಪನಿಯಲ್ಲೀಗ ವಾಹನಗಳು ಮಾರಾಟವಾಗದೇ ಉಳಿದುಕೊಂಡಿದೆ. ಇದೀಗ ವಾಹನ ಕಂಪನಿಗಳಿಗೆ ಚೇತರಿಕೆ ನೀಡಲು, ಸರ್ಕಾರಿ ಕಚೇರಿಗಳು ತಮ್ಮ ಹಳೇ ವಾಹನದ ಬದಲು ಹೊಸ ವಾಹನ ಖರೀದಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ನಿರ್ಮಲನಾ ಸೀತಾರಾಮನ್  ಹೇಳಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ KIA ಸೆಲ್ಟೋಸ್ ಕಾರು ಬಿಡುಗಡೆ; ಬೆಲೆ 9.69 ಲಕ್ಷ ರೂ!

ಸದ್ಯ ಸರ್ಕಾರಿ ಕಚೇರಿಗಳಿಗೆ ಹೊಸ ವಾಹನ ಖರೀದಿಸುವ ಅಧಿಕಾರವಿಲ್ಲ. ಇರುವ ಅವಕಾಶವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಸರ್ಕಾರಿ ಕಚೇರಿಗಳ ಮೇಲಿನ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ನಿರ್ಮಲನಾ ಸೀತರಾಮನ್ ಹೇಳಿದ್ದಾರೆ. ಆದರೆ  28 ರಿಂದ 18 ಶೇಕಡಾ GST(ತೆರಿಗೆ) ಇಳಿಕೆ ಮಾಡಬೇಕು ಅನ್ನೋ ಆಟೋಮೊಬೈಲ್ ಕಂಪನಿಗಳ ಬೇಡಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಷ್ಟೇ ಅಲ್ಲ ಕೇಂದ್ರದ GST(ತೆರಿಗೆ)ಯಲ್ಲಿ ಯಾವುದೇ ಬದಲಾವಣೆ ಮಾಡೋ ಸಾಧ್ಯತೆ ಕೂಡ ಕಡಿಮೆ. ಕಾರಣ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ಭಾರತ ಸರ್ಕಾರ ಇಂಧನ ವಾಹನಗಳ ಮೇಲಿನ GST(ತೆರಿಗೆ) ಇಳಿಸುವ ಸಾಧ್ಯತೆಗಳಿಲ್ಲ.
 

Latest Videos
Follow Us:
Download App:
  • android
  • ios