ನವದೆಹಲಿ(ಡಿ.01):  ಭಾರತದ ಪ್ರಮುಖ ಆಟೋಮೋಟಿವ್ ಲೂಬ್ರಿಕಂಟ್ಸ್ ಕಂಪನಿಯಾದ ಕ್ಯಾಸ್ಟ್ರೋಲ್, ಅತ್ಯಾಧುನಿಕ ಮತ್ತು ಪೂರ್ಣ ಸಿಂಥೆಟಿಕ್ ಮೋಟಾರ್‍ಸೈಕಲ್ ಎಂಜಿನ್ ಆಯಿಲ್‌ನ ಹೊಸ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಬಿಡುಗಡೆ ಮಾಡಿದೆ.  ಈ ಸಂಪೂರ್ಣ ಹೊಸ ರೂಪಾಂತರವು ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಬೈಕ್ ಅನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ವಿಶಿಷ್ಟವಾದ 5-ಇನ್-1 ಸೂತ್ರದ ಮೇಲೆ ಬೆಂಬಲಿತವಾಗಿದ್ದು. ಮೋಟಾರ್‍ಸೈಕಲ್ ಮತ್ತು ಕಾರ್ಯಕ್ಷಮತೆ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ರೂಪಿಸಲಾಗಿರುವ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಸವಾರಿ ಬಗ್ಗೆ ಆಸಕ್ತಿ ಹೊಂದಿದವರಿಗೆ ಮಾತ್ರವಲ್ಲದೆ ತಮ್ಮ ದ್ವಿಚಕ್ರ ವಾಹನಗಳ ಆರೈಕೆಯ ಬಗ್ಗೆಯೂ ನಿರ್ದಿಷ್ಟವಾದ ಆಯ್ಕೆಗಳನ್ನು ನೀಡುತ್ತದೆ.

 ಟ್ರಕ್ ಚಾಲಕರು, ರೈತರ ಆರೋಗ್ಯ ಕಾಳಜಿ; ಸಮೀಕ್ಷೆಯಿಂದ ಬಹಿರಂಗ!.

ವೃತ್ತಿಪರ ಸವಾರರಿಂದ ನಿಕಟವಾಗಿ ಅಭಿವೃದ್ಧಿಪಡಿಸಿದ ಮೂಲ ಪ್ರತಿಕ್ರಿಯೆ ಮತ್ತು ಅನುಮೋದನೆಯಿಂದ  ಹೊಸ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಶ್ರೇಣಿಯು ಸವಾರರಿಗೆ ವಿಸ್ಮಯ ಮತ್ತು ಸಡಗರಗಳೊಂದಿಗೆ 5 ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ:

ಕ್ಯಾಸ್ಟ್ರೋಲ್ ಪವರ್1 ಶ್ರೇಣಿಯ ಪರಂಪರೆಯನ್ನು ಮುಂದುವರೆಸುತ್ತಾ, ಹೊಸ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಅನ್ನು ವಿವಿಧ ನಿಯತಾಂಕಗಳಿಗಾಗಿ ತೀವ್ರ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾಗಿದೆ.

ವ್ಯಾಲೆನ್ಸಿಯಾ ಮೋಟೋ ಜಿಪಿ ರೇಸ್‍ನಲ್ಲಿ ಖ್ಯಾತ ಮೋಟೋ ಜಿಪಿ ರೇಸರ್ ಕ್ಯಾಲ್ ಕ್ರುಚ್ಲೊ ಅವರು ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್‍ನೊಂದಿಗೆ ತಮ್ಮ ಬೈಕ್‍ನಲ್ಲಿ ಹೊಸ ತೈಲವನ್ನು ಅನಾವರಣಗೊಳಿಸಿದರು. ಬೈಕ್‍ಗಳಲ್ಲಿ ಲೂಬ್ರಿಕಂಟ್‍ಗಳು ಮತ್ತು ತೈಲಗಳ ನಿರ್ಣಾಯಕ ಪಾತ್ರದ ಕುರಿತು ಮಾತನಾಡಿದ ಕ್ಯಾಲ್ ಕ್ರುಚ್ಲೊ, "ಬೈಕಿಂಗ್ ವಿನ್ಯಾಸವು ಭಾರತದಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಬೈಕ್‍ಗಳಿಂದ ಉತ್ತಮ ಕಾರ್ಯಕ್ಷಮತೆಗಾಗಿ ಹೆಚ್ಚಿನ ಉತ್ಸಾಹವಿದೆ. ಬೈಕುಗಳ ಕಾರ್ಯನಿರ್ವಹಣೆ ಮತ್ತು ದೀರ್ಘಾವಧಿಯ ಚಾಲನೆಯಲ್ಲಿ ಲೂಬ್ರಿಕಂಟ್‍ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕ್ಯಾಸ್ಟ್ರೋಲ್ ಮೋಟಾರ್‍ಸೈಕಲ್ ರೇಸಿಂಗ್‍ನಲ್ಲಿ ಬಲವಾದ ಪರಂಪರೆಯನ್ನು ಹೊಂದಿದೆ ಮತ್ತು ಈಗ ನಿಮ್ಮ ಬೈಕ್‍ನಿಂದ ಉತ್ತಮವಾದದ್ದನ್ನು ಹೊರತರಲು ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಅನ್ನು ಅಭಿವೃದ್ಧಿಪಡಿಸಿದೆ! ಮೋಟೋ ಜಿಪಿ ರೇಸಿಂಗ್ ಟ್ರ್ಯಾಕ್‍ಗಳ ಅನುಭವದೊಂದಿಗೆ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕ್ಯಾಸ್ಟ್ರೋಲ್‍ನ ರೇಸಿಂಗ್ ತಂಡಗಳಿಂದ ಪಡೆದ ಜ್ಞಾನವು ಈ ಉತ್ಪನ್ನಗಳ ತಿರುಳಾಗಿದೆ. ರೇಸಿಂಗ್‍ನ ಪ್ರಮುಖ ಭಾಗವಾಗಿ ಅಭಿವೃದ್ಧಿಪಡಿಸಿದ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಪ್ರಯಾಣಿಕರಿಗೆ, ಉತ್ಸಾಹಿಗಳಿಗೆ ಮತ್ತು ವೃತ್ತಿಪರರಿಗೆ ಸೂಕ್ತವಾಗಿದೆ. 

ಭಾರತದ ಸೃಜನಶೀಲ ಸಂಸ್ಥೆ ಒಗಿಲ್ವಿ, ಇಂಡಿಯಾ ಅವರು ಪರಿಕಲ್ಪಿಸಿ ಅಭಿವೃದ್ಧಿಪಡಿಸಿದ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್‍ನ ಟಿವಿಸಿ, ` ಅಚ್ಚರಿಗೊಳಿಸುವ ಕಾರ್ಯಕ್ಷಮತೆ' ಯ ಸಾಮಥ್ರ್ಯಗಳನ್ನು ಒತ್ತಿಹೇಳುತ್ತದೆ. 5-ಇನ್-1 ಸೂತ್ರದೊಂದಿಗೆ ಪೂರ್ಣ ಸಂಶ್ಲೇಷಿತ ತಂತ್ರಜ್ಞಾನದಿಂದ ಮಾಡಲ್ಪಟ್ಟು, ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ನಿರ್ದಿಷ್ಟವಾಗಿ ತಮ್ಮ ಬೈಕ್‍ಗಳಿಂದ ಕಾರ್ಯಕ್ಷಮತೆಯನ್ನು ಬಯಸುವ ಬಳಕೆದಾರರಿಗೆ ನಿಮ್ಮ ಬೈಕಿಂಗ್ ಅನುಭವವನ್ನು ಉತ್ತಮದಿಂದ ಆಶ್ಚರ್ಯಕರ ಅದ್ಭುತವನ್ನಾಗಿಸುತ್ತದೆ.

ಅದೇ ಆಲೋಚನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಸಂವಹನವು, ತನ್ನ ಬೈಕ್‍ನಲ್ಲಿ ಬರುವ ಸಮಯದವರೆಗೆ ಮತ್ತು ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ನೀಡುವ ಕಾರ್ಯಕ್ಷಮತೆಯನ್ನು ಅನುಭವಿಸುವವರೆಗೂ ಆಶ್ಚರ್ಯಪಡದ ಕಚೇರಿಗೆ ಹೋಗುವ ಯುವ ಮ್ಯಾಕ್ಸ್‍ನ ಸುತ್ತಲೂ ನಡೆಯುತ್ತದೆ. ಚುರುಕು ಮತ್ತು ಚಮತ್ಕಾರದ ಹೊಸ ಸಂವಹನವು ಕ್ಯಾಸ್ಟ್ರೋಲ್ನಿಂದ ಮತ್ತೊಂದು ಆಶ್ಚರ್ಯವಾಗಿದೆ. ರಂಜಿಸುತ್ತಲೇ ಅದು ಉತ್ಪನ್ನದ ಪ್ರಯೋಜನಗಳ ಮೇಲೆ ತೀವ್ರವಾಗಿ ಕೇಂದ್ರೀಕರಿಸುತ್ತದೆ ಮತ್ತು ಅದರ ಹಾಸ್ಯದೊಂದಿಗೆ ಇಂದಿನ ಯುವ ಪೀಳಿಗೆಯೊಂದಿಗೆ ತಕ್ಷಣ ಸಂಪರ್ಕಿಸುತ್ತದೆ. `ಆಶ್ಚರ್ಯವನ್ನುಂಟುಮಾಡುವ ಕಾರ್ಯಕ್ಷಮತೆ' ಸಂದೇಶಕ್ಕೆ ಬರುವ ಇದು ಬೈಕಿಂಗ್ ಉತ್ಸಾಹಿಗಳು ಮತ್ತು ಇತರರಲ್ಲಿ ತಕ್ಷಣವೇ ಉತ್ಸಾಹ ಮತ್ತು ರೋಮಾಂಚನವನ್ನು ಉಂಟುಮಾಡುತ್ತದೆ.

ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಕ್ಯಾಸ್ಟ್ರೋಲ್ ಬೈಕ್ ಪಾಯಿಂಟ್ಸ್, ಡೀಲರ್‍ಶಿಪ್‍ಗಳು ಮತ್ತು ಆನ್‍ಲೈನ್‍ನಲ್ಲಿ ವಿವಿಧ ಸ್ನಿಗ್ಧತೆಗಳಲ್ಲಿ  ಅಂದರೆ, ಬೈಕ್‍ಗಳು ಮತ್ತು ಸ್ಪೋಟ್ರ್ಸ್ ಬೈಕ್‍ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 10W-40, 10W-50, 15W-50 ಮತ್ತು 20W-50   ಸ್ನಿಗ್ಧತೆಗಳಲ್ಲಿ  ಮತ್ತು ಸ್ಕೂಟರ್‍ಗಳಿಗಾಗಿ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ 5W-40 ಸ್ನಿಗ್ಧತೆಯಲ್ಲಿ ದೊರೆಯುತ್ತದೆ.  ವಿಶೇಷವಾಗಿ ವಿನ್ಯಾಸಗೊಳಿಸಲಾದ ಶ್ರೇಣಿಯು 800 ಮಿಲಿ ಪ್ಯಾಕ್ ಸ್ಕೂಟರ್ ತೈಲಕ್ಕೆ ರೂ.474 ರ ಆಕರ್ಷಕ ಗ್ರಾಹಕ ಬೆಲೆ * ಮತ್ತು ಪೂರ್ಣ ಸಿಂಥೆಟಿಕ್ ಟೆಕ್ನಾಲಜಿ 10W-40 ಬೈಕ್ ಎಂಜಿನ್ ಆಯಿಲ್ ನ 1 ಲೀಟರ್ ಪ್ಯಾಕ್ ರೂ. 594 ರ ಪ್ರಾರಂಭಿಕ ಬೆಲೆಯೊಂದಿಗೆ ಹೊಸ ಮತ್ತು ಪ್ರೀಮಿಯಂ ನೋಟವನ್ನು ಹೊಂದಿದೆ ಎಂಬ ಹೆಗ್ಗಳಿಕೆ ಹೊಂದಿದೆ.