ಜನವರಿಯಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
ಕ್ಯಾಬ್ ಸರ್ವೀಸ್ ದಿಗ್ಗಜ ಒಲಾ ಮತ್ತೊಂದು ಕ್ಷೇತ್ರಕ್ಕೆ ಕಾಲಿಡುತ್ತಿದೆ. ಒಲಾ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಒಲಾ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ಬಿಡುಗಡೆಯಾಗಲಿದೆ. ನೂತನ ಸ್ಕೂಟರ್ ವಿಶೇಷತೆ ಇಲ್ಲಿವೆ.
ಬೆಂಗಳೂರು(ನ.21): ಒಲಾ ಕ್ಯಾಬ್ ಕುರಿತು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಕ್ಯಾಬ್ ಸರ್ವೀಸ್ ದಿಗ್ಗಜ ಎಂದೇ ಗುರುತಿಸಿಕೊಂಡಿದೆ. ನಗರ ಪ್ರದೇಶಗಳಲ್ಲಿ ಕ್ಯಾಬ್ ಸರ್ವೀಸ್ ನೀಡುವ ಓಲಾ ಇದೀಗ ಭಾರತದ ಮಾತ್ರವಲ್ಲ, ಲಂಡನ್, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಓಲಾ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಶೀಘ್ರದಲ್ಲೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.
ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರು ಸೇವೆ.
ಒಲಾ ಕ್ಯಾಬ್ ಸರ್ವೀಸ್ ಇದೀಗ ದೇಶದ ಬಹುದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯಾಗುತ್ತಿದೆ. ಕ್ಯಾಬ್ ಸರ್ವೀಸ್ ಜೊತೆ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈಗಾಗಲೇ ಓಲಾ ಕಂಪನಿ ನದರ್ಲೆಂಡ್‌ನ ಎಟೆರ್ಗೋ ಬಿವಿ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಒಲಾ ಹಾಗೂ ಎಟೆರ್ಗೋ ಜಂಟಿಯಾಗಿ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಮಾಡಲಿದೆ.
ಎಟೆರ್ಗೋ ಬಿವಿ ಕಂಪನಿ ಒಲಾ ಸ್ಕೂಟರ್‌ಗೆ ಬ್ಯಾಟರಿ ನೀಡಲಿದೆ. ವಿಶೇಷ ಅಂದರೆ ಎಟೆರ್ಗೋ ಬಿವಿ ಕಂಪನಿ ಸ್ಕೂಟರ್‌ಗಳ ಮೈಲೇಜ್ 240 ಕಿ.ಮೀ. ಇದು ಅತ್ಯಂತ ಗರಿಷ್ಠ ಮೈಲೇಜ್. ಸದ್ಯ ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 150 ಸರಾಸರಿ ಮೈಲೇಜ್ ನೀಡಲಿದೆ. ಆದರೆ ನೂತನ ಒಲಾ ಸ್ಕೂಟರ್ 240 ಕಿ.ಮೀ ಮೈಲೇಜ್ ನೀಡಲಿದೆ.
ಕಡಿತವಾಗಲಿದೆ ಒಲಾ ಕ್ಯಾಬ್ ದರ-10ಸಾವಿರ ಎಲೆಕ್ಟ್ರಿಕ್ ವಾಹನ ಸೇರ್ಪಡೆ!.
ಒಲಾ ಸ್ಕೂಟರ್ ಭಾರತ, ಯುರೋಪ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ವಿತರಣೆ ಮಾಡಲು ಒಲಾ ಮುಂದಾಗಿದೆ. ನೂತನ ಒಲಾ ಸ್ಕೂಟರ್ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಶೀಘ್ರದಲ್ಲೇ ಒಲಾ ಬಿಡುಗಡೆ ಮಾಡಲಿದೆ.