ಗ್ರೇಟರ್ ನೋಯ್ಡಾ(ಫೆ.22): ಬುಧ್ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್‌ನಲ್ಲಿ ವಿಶೇಷ ರೇಸ್ ಆಯೋಜಿಸಲಾಗಿತ್ತು. ಸ್ಕೋಡಾ ಒಕ್ಟಾವಿಯಾ ಸೆಡಾನ್ ಕಾರು ಹಾಗೂ ಮಾರುತಿ ಸುಜುಕಿ ಇಗ್ನಿಸ್ ಕಾರಿನ ನಡುವೆ ರೇಸ್ ಎರ್ಪಡಿಸಲಾಗಿತ್ತು. ರೋಚಕ ರೇಸ್‌ನ ಫಲಿತಾಂಶ ಮಾತ್ರ ಅಚ್ಚರಿ ನೀಡಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದ ವೋಕ್ಸ್‌‌ವ್ಯಾಗನ್ ಕಾರು ಚಾಲಕನಿಗೆ ದಂಡ!

ಸ್ಕೋಡಾ ಒಕ್ಟಾವಿಯಾ ಕಾರು 1.8 ಲೀಟರ್ ಪೆಟ್ರೋಲ್ ಎಂಜಿನ್, 177 Bhp ಪವರ್ ಹಾಗೂ  250 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಮಾರುತಿ ಇಗ್ನಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 82 Bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸ್ಕೋಡಾ ಒಕ್ಟೀವಾ ಕಾರಿಗೆ ಹೋಲಿಸಿದರೆ ಇಗ್ನಿಸ್ ಪವರ್ ತುಂಬಾನೆ ಕಡಿಮೆ.

ಇದನ್ನೂ ಓದಿ: ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿದೆ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು

ಸ್ಕೋಡಾ ಒಕ್ಟಿವಾಗೆ ಭಾರಿ ಪೈಪೋಟಿ ನೀಡಿದ ಇಗ್ನಿಸ್ ಇತರ ಬಲಿಷ್ಠ ಎಂಜಿನ್ ಕಾರಿನಂತೆ ರೇಸ್‌ನಲ್ಲಿ ಪಾಲ್ಗೊಂಡಿತ್ತು. ಒಕ್ಟಾವಿಯಾ ಅದೆಷ್ಟೇ ವೇವಾಗಿ ಚಲಿಸಿದರು, ಇಗ್ನಿಸ್ ಹಿಂಬಾಲಿಸಿತು. ಈ ಮೂಲಕ ಮಾರುತಿ ಸುಜುಕಿ ಇಗ್ನಿಸ್ ಕಾರು ಇತರ ಯಾವುದೇ ದುಬಾರಿ ಕಾರಿಗೆ ಪೈಪೋಟಿ ನೀಡಲಿದೆ  ಅನ್ನೋದನ್ನ ಸಾಬೀತು ಪಡಿಸಿದೆ.