ಮುಂಬೈ(ಮೇ.19): ಪೊರ್ನ್ ನಟಿ ಎಂದೇ ಖ್ಯಾತಿ ಪಡೆದಿದ್ದ ಸನ್ನಿ ಲಿಯೋನ್ ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಕಾರ್ಯದಲ್ಲಿ ಇತರರಿಗಿಂತ ಮುಂಚೂಣಿಯಲ್ಲಿದ್ದಾರೆ. ಐಷಾರಾಮಿ ಮನೆ, ಬಂಗಲೆ, ದುಬಾರಿ ಮೌಲ್ಯದ ಕಾರು ಹೊಂದಿರುವ ಸನ್ನಿ ಲಿಯೋನ್, ತಮ್ಮ ಡ್ರೀಮ್ ಕಾರಿನ ಕುರಿತು ಮಾಹಿತಿ ನೀಡಿದ್ದಾರೆ. ಸನ್ನಿ ಲಿಯೋನ್ ಡ್ರೀಮ್ ಕಾರು ಬೇರಾವುದು ಅಲ್ಲ, ಪಿಂಕ್ ಬಣ್ಣದ ಅಂಬಾಸಿಡರ್ ಕಾರು.

ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

ಅಮೆರಿಕದಲ್ಲಿ ಸನ್ನಿ ಮೆಸರಾತಿ ಕಾರ ಖರೀದಿಸಿದ್ದರೆ, ಭಾರತದಲ್ಲಿ  BMW, ಆಡಿ ಕಾರುಗಳನ್ನು ಹೊಂದಿದ್ದಾರೆ. ಸನ್ನಿ ಲಿಯೋನ್ ಬಳಿ ಇರುವ ಎಲ್ಲಾ ಕಾರಿನ ಬೆಲೆ ಕೂಡ ಕೋಟಿ ರೂಪಾಯಿಂದ ಆರಭವಾಗುತ್ತದೆ. ಆದರೆ ಇದೀಗ ಸನ್ನಿಯ ಡ್ರೀಮ್ ಕಾರು ಅಂಬಾಸಿಡರ್ ಎಂದಿದ್ದಾರೆ. ಈ ಕಾರನ್ನು ಖರೀದಿಸಲು ಸನ್ನಿ ಉತ್ಸುಕರಾಗಿದ್ದಾರೆ. ಆದರೆ ಅಂಬಾಸಿಡರ್ ಕಾರು ಸ್ಥಗಿತಗೊಂಡು ವರ್ಷಗಳೇ ಉರುಳಿದೆ. ಆದರೆ ಸೆಕೆಂಡ್ ಹ್ಯಾಂಡ್ ಕಾರು ಲಭ್ಯವಿದೆ.

ಸನ್ನಿ ಲಿಯೋನ್ ಪಿಂಕ್ ಅಂಬಾಸಿಡರ್ ಕಾರು ಖರೀದಿಸಿ, ಅದನ್ನು ಆಟೋಮ್ಯಾಟಿಕ್ ಕಾರಾಗಿ ಪರಿವರ್ತಿಸುವ ಆಸೆ ಹೊಂದಿದ್ದಾರೆ. ಕಾರಣ ಗೇರ್ ಕಾರು ಸನ್ನಿಗೆ ಡ್ರೈವ್ ಮಾಡಲು ಕಷ್ಟ ಎಂದಿದ್ದಾರೆ. ಇಷ್ಟೇ ಅಲ್ಲ ಕಾರಿನ ಒಳಭಾಗವನ್ನು ಪಿಂಕ್ ಹಾಗೂ ಬಿಳಿ ಬಣ್ಣದಲ್ಲಿ ಮಾಡಿಫಿಕೇಶನ್ ಮಾಡಿಸಬೇಕು. ಆದರೆ ಸೀಟ್, ಸ್ಟೀರಿಂಗ್ ಸೇರಿದಂತೆ ಯಾವುದೇ ಲೆದರ್ ಬಳಸಬಾರದು ಎಂದಿದ್ದಾರೆ. ಕಾರಣ ಸನ್ನಿ ಲಿಯೋನ್ ಪ್ರಾಣಿ ಪ್ರಿಯೆ. ಹೀಗಾಗಿ ತನ್ನ ಉಪಯೋಗಕ್ಕೆ ಯಾವುದೇ ಪ್ರಾಣಿಯ ಬಲಿಯಾಗಬಾರದು ಎಂದಿದ್ದಾರೆ.

ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು!.

ಮೆಸರಾತಿ ಸೇರಿದಂತೆ ಕೋಟಿ ಕೋಟಿ ರೂಪಾಯಿ ಕಾರು ಮಾಲೀಕರಾಗಿರುವ ಸನ್ನಿ ಡ್ರೀಮ್ ಕಾರು ಅಂಬಾಸಿಡರ್ ಅನ್ನೋದು ಎಲ್ಲರಿಗೆ ಅಚ್ಚರಿ ತಂದಿದೆ. ಸನ್ನಿಗೆ ಬಾಲ್ಯದಲ್ಲಿ ಅಂಬಾಸಿಡರ್ ಕಾರಿನ ಮೇಲೆ ಹೆಚ್ಚು ಪ್ರೀತಿ. ಈ ವ್ಯಾಮೋಹ, ಕೋಟಿ ಕೋಟಿ ಸಂಪಾದನೆ ಮಾಡುವಾಗಲು ಬದಲಾಗಲಿಲ್ಲ ಅನ್ನೋದು ವಿಶೇಷ.

1980-90ರರಲ್ಲಿ ಹಿಂದೂಸ್ಥಾನ ಅಂಬಾಸಿಡರ್ ಕಾರು ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದ್ದು, ರಾಜಕಾರಣಿಗಳಿಂದ ಹಿಡಿದು ಬಹುತೇಕರ ನೆಚ್ಚಿನ ಕಾರು ಇದಾಗಿತ್ತು. 2014ರಲ್ಲಿ ಈ ಕಾರಿನ ಉತ್ಪಾದನೆ ಸ್ಥಗಿತಗೊಂಡಿತ್ತು.