ಮುಂಬೈ(ಫೆ.03): ಬಾಲಿವುಡ್ ನಟರು ಬೈಕ್ ರೈಡ್ ಮಾಡೋದರಲ್ಲಿ ಮುಂದಿದ್ದಾರೆ. ಹೀಗಾಗಿಯೇ ದುಬಾರಿ ಬೈಕ್‌ಗಳನ್ನ ಖರೀದಿಸುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ನಟ ಶಾಹೀದ್ ಕಪೂರ್ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಖರೀದಿಸಿದ್ದಾರೆ. ನೂತನ ಬೈಕ್‌ನಲ್ಲಿ ಶಾಹಿದಿ ಮುಖಕ್ಕೆ ಮಾಸ್ಕ್ ಹಾಕಿ ಒಂದು ರೌಂಡ್ ಸುತ್ತಾಡಿದ್ದಾರೆ.

ಡುಕಾಟಿ ಸ್ಕ್ರಾಂಬ್ಲರ್ 1100  ಬೈಕ್ ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದೆ. ಶಾಹಿದ್ ಕಪೂರ್ ಖರೀದಿಸಿರುವ ಬೈಕ್ ಡುಕಾಟಿ ಸ್ಕ್ರಾಂಬ್ಲರ್ 1100  ಸ್ಪೆಷಲ್ ಎಡಿಶನ್.  ಇದರ ಬೆಲೆ 11.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಯೂಮಿನಿಯಂ ಪಾರ್ಟ್ಸ್ ಮೂಲಕ ಗಮನಸೆಳೆದಿರುವ ಸ್ಪೆಷಲ್ ಎಡಿಶನ್ ಡುಕಾಟಿ ಬೈಕ್, ಇದೀಗ ಶಾಹೀದ್ ಕಪೂರ್ ಕೈಸೇರಿದೆ.

 

 

1,079cc, ಲಿಕ್ವಿಡ್ ಕೂಲ್‌ಡ್, L ಟ್ವಿನ್ ಎಂಜಿನ್ ಹೊಂದಿರುವ ಡುಕಾಟಿ ಸ್ಕ್ರಾಂಬ್ಲರ್ 1100  ಬೈಕ್  85 Bhp ಪವರ್ ಹಾಗೂ 88 Nm ಟಾರ್ಕ್ ಉತ್ವಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಖರೀದಿಸಿದ ಶಾಹೀದ್ ಪುಟ್ಟ ಮಗಳೊಂದಿಗೆ ಸುತ್ತಾಡಿದ್ದಾರೆ. ಶಾಹಿದ್ ಕಪೂರ್ ಬಳಿ ಹಾರ್ಲೆ ಡೇವಿಡ್ಸನ್ ಬೈಕ್ ಕೂಡ ಇದೆ.