Asianet Suvarna News Asianet Suvarna News

ಮೋದಿ ಮನೆ ಸಮೀಪ ಕಾರ್ ಸ್ಟಂಟ್; ಹಣಕಾಸು ಸಚಿವನ ಸಂಬಂಧಿ ಅರೆಸ್ಟ್!

ಪ್ರಧಾನಿ ನರೇಂದ್ರ ಮೋದಿ ಮನೆ ಸಮೀಪ ಕಾರು ಸ್ಟಂಟ್ ಮಾಡಿದ ಬಿಜೆಪಿ ಮುಖಂಡನ ಸಂಬಂಧಿಯನ್ನ ಅರೆಸ್ಟ್ ಮಾಡಲಾಗಿದೆ. ವಿಚಾರಣೆಯಲ್ಲಿ ಬಿಜೆಪಿ ಮುಖಂಡನ ಸಂಬಂಧಿ ಹೇಳಿದ ಮಾತು ಪೊಲೀಸರಿಗೆ ಅಚ್ಚರಿ ತಂದಿತ್ತು.
 

Bjp Minister nephew arrest for car stunt near pm modi house
Author
Bengaluru, First Published Jul 16, 2019, 5:58 PM IST
  • Facebook
  • Twitter
  • Whatsapp

ನವದೆಹಲಿ(ಜು.16): ಪ್ರಧಾನಿ ನರೇಂದ್ರ ಮೋದಿಗೆ Z+ ಭದ್ರತೆ ಇದೆ. ಪ್ರಧಾನಿ ಮನೆ, ಕಚೇರಿ ಮಾತ್ರವಲ್ಲ, ಪ್ರದಾನಿ ಸಂಚರಿಸೋ ಎಲ್ಲಾ ಕಡೆ ಇದೇ ಗರಿಷ್ಠ ಭದ್ರತೆ ನೀಡಲಾಗುತ್ತೆ. ಇದೀಗ ಪ್ರಧಾನಿಯ ದೆಹಲಿ ನಿವಾಸದ ಬಳಿ  ಬಿಜೆಪಿ ಮುಖಂಡ, ಹರ್ಯಾಣ ಹಣಕಾಸು ಸಚಿವನ ಸಂಬಂಧಿ, ಭದ್ರತಾ ಸಿಬ್ಬಂಧಿ ಕಣ್ಮತಪ್ಪಿಸಿ ಕಾರ್ ಸ್ಟಂಟ್ ಮಾಡಿದ್ದಾನೆ. ಇಷ್ಟೇ ಅಲ್ಲ ಇದೀಗ ಅರೆಸ್ಟ್ ಕೂಡ ಆಗಿದ್ದಾನೆ.

ಇದನ್ನೂ ಓದಿ: ಭಾರತದಲ್ಲಿ 30% ಲೈಸೆನ್ಸ್ ನಕಲಿ; ರದ್ದಾಗೋ ಮುನ್ನ ಚೆಕ್ ಮಾಡಿಕೊಳ್ಳಿ!

ಪ್ರಧಾನಿ ಮೋದಿ ನಿವಾಸ, ರಾಷ್ಟ್ರಪತಿ ಭವನ ಹಾಗೂ ಸಂಸತ್ತು ಆಸುಪಾಸಿನಲ್ಲಿದೆ. ಹರ್ಯಾಣ ಗೃಹಮಂತ್ರಿ ಕ್ಯಾಪ್ಟನ್ ಅಭಿಮನ್ಯು ಸಂಬಂಧಿ, ಸರ್ವೇಶ್ ಸಂಧು, ತನ್ನ 2.2 ಕೋಟಿ ಮೌಲ್ಯದ ನಿಸಾನ್ GT-R ಕಾರಿನಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಸ್ಟಂಟ್ ಮಾಡಿದ್ದಾನೆ. ಈ ಪ್ರದೇಶದಲ್ಲಿ ಅನುಮತಿ ಇಲ್ಲದೆ ಪ್ರವೇಶವಿಲ್ಲ. ಪ್ರಧಾನಿ ನಿವಾಸದ ರಸ್ತೆ ಸೂಕ್ಷ್ಮ ಪ್ರದೇಶ. ಇಷ್ಟೇ ಅಲ್ಲ, ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್‌ಗೂ ಅವಕಾಶವಿಲ್ಲ. ಇಷ್ಟಾದರೂ ಸರ್ವೇಶ್ ಸಂದು ಸ್ಟಂಟ್ ಮಾಡಿದ್ದಾನೆ.

ಸಿಸಿಟಿ ಆಧಾರದಲ್ಲಿ ಕಾರನ್ನು ಪತ್ತೆ ಹಚ್ಚಲಾಗಿದೆ. ಸರ್ವೇಶ್ ಸಂಧುನನ್ನು ಅರೆಸ್ಟ್ ಮಾಡಲಾಗಿದೆ. ಬಳಿಕ ಪೊಲೀಸರ ವಿಚಾರಣೆಯಲ್ಲಿ, ಈ ರಸ್ತೆಯಲ್ಲಿ ಯಾವುದೇ ವಾಹನಗಳಿರಲಿಲ್ಲ. ಹೀಗಾಗಿ ಸ್ಟಂಟ್ ಮಾಡಿದ್ದೇನೆ ಎಂದಿದ್ದಾನೆ. ಇದು ಪೊಲೀಸರಿಗೆ ಅಚ್ಚರಿ ತಂದಿದೆ. 
 

Follow Us:
Download App:
  • android
  • ios