ಬೆಂಗಳೂರು(ಜು.05): ಕೇಂದ್ರ ಸರ್ಕಾರ ಮಂಡಿಸಿರುವ  ಬಜೆಟ್‌ನಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳಾಗೋ ನಿರೀಕ್ಷೆಗಳಿದೆ. ಎಲೆಕ್ಟ್ರಿಕ್ ವಾಹನ ತಯಾರಿಕೆ ಹಾಗೂ ಖರೀದಿಸೋ ಗ್ರಾಹಕರಿಗೆ ಬಂಪರ್ ಕೊಡುಗೆ ಘೋಷಿಸಿರುವ ಸರ್ಕಾರ, ಇಂಧನ ವಾಹನ ಕ್ಷೇತ್ರಕ್ಕೆ ಯಾವುದೇ ಕೂಡುಗೆ ನೀಡಿಲ್ಲ. ಭಾರತವನ್ನು ಮಾಲಿನ್ಯ ಮಕ್ತಮಾಡಲು ಪಣತೊಟ್ಟಿರುವ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ಗೆ ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಅಸಮಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; ಆಟೋ ಕಂಪನಿಗಳಿಗೆ ಬೇವು-ಬೆಲ್ಲ ಬಜೆಟ್ !

ಕೇಂದ್ರ ಸರಕಾರದ ಹೊಸ ಆಯವ್ಯಯದಲ್ಲಿ ರಸ್ತೆ ಶುಲ್ಕ, ಟೋಲ್ ಚಾರ್ಜ್‌ಗಳಲ್ಲಿ ಬದಲಾವಣೆ ಮಾಡದೆ ಇಂಧನದ ಮೇಲೆ ಒಂದು ರೂಪಾಯಿ ಸೆಸ್ ವಿಧಿಸಿರುವುದು ಸಾರಿಗೆ ಕ್ಷೇತ್ರಕ್ಕೆ ದೊಡ್ಡ ಹೊರೆಯಾಗುತ್ತದೆ. ಪ್ರಯಾಣದ ವೆಚ್ಚ ಹೆಚ್ಚಾಗಲಿದೆ. ಹೀಗಾಗಿ ಟ್ಯಾಕ್ಸಿ, ಕ್ಯಾಬ್ ಹಾಗೂ ಟ್ರಾವೆಲರ್ ಮಾಲೀಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅಸಮಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಹಿಳೆಯರ ಹಿತ ಕಾಪಾಡಲು ಬೆಂಗಳೂರಿಗೆ ಸಾವಿರ ಪಿಂಕ್ ಆಟೋ

ವಿದ್ಯುತ್ ಚಾಲಿತ ವಾಹನಗಳಿಗೆ ತೆರಿಗೆ ವಿನಾಯಿತಿ ಕೊಟ್ಟಿರುವುದು ಪ್ರೋತ್ಸಾಹದಾಯಕವಾಗಿದೆ. ಆದರೆ ಕೇಂದ್ರ ಸರಕಾರದ ಆಯವ್ಯಯದಲ್ಲಿ ಇಂಧನವನ್ನು ಜಿಎಸ್‌ಟಿಗೆ ತರುತ್ತಾರೆ ಎಂಬ ಆಸೆ ಹುಸಿಯಾಗಿದೆ. ಇದು ಸಾಂಪ್ರದಾಯಿಕ ವ್ಯಾಪಾರ ಮಾಡುವ ಸಂಸ್ಥೆಗಳಿಗೆ ಯಾವುದೇ ರೀತಿಯ ಅರ್ಥಿಕ ಭರವಸೆ ಸಿಗಲಿಲ್ಲ ಎಂದರು.