ಬೆಂಗಳೂರು(ಮೇ.16): ಬೆಂಗಳೂರು ರಸ್ತೆ ಮಾತ್ರವಲ್ಲ, ಪಾದಾಚಾರಿ ರಸ್ತೆ, ಮನೆ ಮುಂಭಾಗ ಸೇರಿದಂತೆ ಎಲ್ಲಾ ಕಡೆಗಳಲ್ಲಿ ವಾಹನಗಳೇ ತುಂಬಿದೆ. ಉದ್ಯಾನ ನಗರಿಯಲ್ಲಿ ಟ್ರಾಫಿಕ್ ಸಮಸ್ಯೆಯಷ್ಟೇ ಪಾರ್ಕಿಂಗ್ ಸಮಸ್ಯೆ ಕೂಡ ಗಂಭೀರವಾಗಿದೆ. ಇದೀಗ ಪಾರ್ಕಿಂಗ್ ಚಾರ್ಜ್ ಮೇಲೆ ಶೇಕಡಾ 20 ರಷ್ಟು ಕಡಿತವಾಗಿದೆ. ಆದರೆ ಈ ಆಫರ್ ಬೆಂಗಳೂರು ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ.

ಇದನ್ನೂ ಓದಿ: ಕಳ್ಳರ ಮಾಸ್ಟರ್ ಪ್ಲಾನ್- ಶೋ ರೂಂನಿಂದ ಹ್ಯುಂಡೈ ಕ್ರೆಟಾ ಕಳ್ಳತನ!

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಎಲ್ಲಾ ವಾಹನಗಳಿಗೆ ಡಿಸ್ಕೌಂಟ್ ಸಿಗಲ್ಲ. ಎಲೆಕ್ಟ್ರಿಕ್ ಕಾರು ಪಾರ್ಕಿಂಗ್ ಮಾಡಿದರೆ ಶೇಕಡಾ 20 ರಷ್ಟು ಡಿಸ್ಕೌಂಟ್ ಸಿಗಲಿದೆ. ಈ ಮೂಲಕ ಪರಿಸರ ಸ್ನೇಹಿ ಕಾರುಗಳಿಗೆ ಉತ್ತೇಜನ ನೀಡಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಟ್ಟ ಹೆಜ್ಜೆ ಇಟ್ಟಿದೆ. 

ಇದನ್ನೂ ಓದಿ: ಜೂನ್‌ನಿಂದ MG ಹೆಕ್ಟೆರ್ ಕಾರು ಬುಕಿಂಗ್ ಆರಂಭ!

ವಿಮಾನ ನಿಲ್ದಾಣದ P2 ಹಾಗೂ P3 ಪಾರ್ಕಿಂಗ್ ಏರಿಯಾದಲ್ಲಿ ಎಲೆಕ್ಟ್ರಿಕ್ ಕಾರು ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಪಾರ್ಕ್ ಮಾಡೋ ಎಲೆಕ್ಟ್ರಿಕ್ ಕಾರುಗಳಿಗೆ ಶೇಕಡಾ 20 ರಷ್ಟು ಡಿಸ್ಕೌಂಡ್ ನೀಡಲು ಬೆಂಗಳೂರು ವಿಮಾನ ನಿಲ್ದಾಣ ಮುಂದಾಗಿದೆ.