ಕೈಗೆಟುಕವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಬ್ಯಾಟ್‌ರೆ!

ಜೈಪುರ ಮೂಲದ ಸ್ಟಾರ್ಟ್ ಅಪ್ ಕಂಪನಿ BattRe ನೂತನ ಎಲಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.  BattRe ಬಿಡುಗಡೆ ಮಾಡಿರುವ ಸ್ಕೂಟರ್‌ ಪೈಕಿ ನೂತನ gps:ie ಸ್ಕೂಟರ್ ಕೈಗೆಟುಕುವ ದರ ಸ್ಕೂಟರ್ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

BattRe Introduces new electric scooter with Affordable price

ನವದೆಹಲಿ(ಮೇ.23); ಗ್ರಾಹಕರ ಬೇಡಿಕೆ, ಪರಿಸ್ಥಿತಿಗಳನ್ನು ಅರಿತುಕೊಂಡು BattRe ಕಂಪನಿ ನೂತನ gps:ie ಎಲೆಕ್ಟ್ರಿಕ್ ಸ್ಕೂಟರ್ ಬಿಡುಗೆ ಮಾಡಿದೆ. ಸ್ಕೂಟರ್ ಹೆಸರು ಕೊಂಚ ಕಷ್ಟವಾದರೂ ಹೆಚ್ಚಿನ ಫೀಚರ್ಸ್ ಹಾಗೂ ಉತ್ತಮ ಮೈಲೇಜ್ ನೀಡಿದೆ. gps:ie ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 64,990 ರೂಪಾಯಿ(ಎಕ್ಸ್ ಶೋ ರೂಂ).

ಕಡಿಮೆ ಬೆಲೆ, ಗರಿಷ್ಠ ಮೈಲೈಜ್ BattRE ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!.

 gps:ie ಎಲೆಕ್ಟ್ರಿಕ್ ಸ್ಕೂಟರ್  ಇಂಟರ್ನೆಟ್ ಕೆನೆಕ್ಟ್ ವಾಹನವಾಗಿದೆ. ಈ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ.  gps:ie ಎಲೆಕ್ಟ್ರಿಕ್ ಸ್ಕೂಟರ್‌ಗೆ ಸಿಮ್ ಕಾರ್ಡ್ ಬಳಸಬಹುದು. ಬಳಿಕ ಮೊಬೈಲ್ ಆ್ಯಪ್ ಮೂಲಕವೇ ಸ್ಕೂಟರ್ ಸ್ಟಾರ್ಟ್ ಅಥವಾ ಆಫ್ ಮಾಡಬಹುದು. ಲೈವ್ ಲೊಕೇಶನ್ ಟ್ರಾಕಿಂಗ್ GPS, ರೈಡ್ ಬಿಹೇವಿಯರ್ ಮೂಲಕ ಸ್ಕೂಟರ್ ಸರಿಯಾಗಿ ರೈಡ್ ಮಾಡುತ್ತಿದ್ದಾರೆ, ಅಥವಾ ರೈಡಿಂಗ್‌ನಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ವ್ಯವಸ್ಥೆ ಇದೆ. 

ರಿಮೂಟ್ ಕಂಟ್ರೋಲ್, ಪಾರ್ಕಿಂಗ್, ಕ್ರಾಶ್ ಇಂಡಿಕೇಟರ್ ಸೇರಿದಂತೆ ಹಲವು ಹೊಸ ಫೀಚರ್ಸ್ ಸೇರಿಸಲಾಗಿದೆ. ಸ್ಕೂಟರ್ ಮೈಲೇಜ್, ಪ್ರಯಾಣದ ವಿವರ, ಚಾರ್ಚಿಂಗ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಮೊಬೈಲ್ ಆ್ಯಪ್ ಮೂಲಕವೂ ಪಡೆದುಕೊಳ್ಳಬಹುದು. 

BLDC ಹಬ್ ಮೋಟಾರ್ ಬಳಸಲಾಗಿದ್ದು, ಸಂಪೂರ್ಣ ಚಾರ್ಚ್‌ಗೆ 65 ಕಿ.ಮೀ ಮೈಲೇಜ್ ನೀಡಲಿದೆ. ಸ್ಕೂಟರ್ ಫುಲ್ ಚಾರ್ಜ್‌ಗೆ 2.5 ಗಂಟೆ ಸಮಯ ತೆಗೆದುಕೊಳ್ಳಲಿದೆ. ಲೈಟ್ ವೈಟ್ ಸ್ಕೂಟರ್ ಇದಾಗಿದ್ದು, ಒಟ್ಟು ತೂಕ 60 ಕೆಜಿ. ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿದೆ.

Latest Videos
Follow Us:
Download App:
  • android
  • ios