ಮುಂಬೈ(ನ.03): ಬಜಾಜ್ ಆಟೋ ಕಂಪೆನಿಯ ಪ್ರಸಿದ್ಧ ಪಲ್ಸರ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹಲವು ವಿಶೇಷತೆಗಳೊಂದಿಗೆ ಪಲ್ಸರ್ 150 ಕ್ಲಾಸಿಕ್  ಬೈಕ್ ಬಿಡುಗಡೆಯಾಗಿದೆ. ನೂತನ ಪಲ್ಸರ್ ಬೈಕ್‌ನಲ್ಲಿ ವಿನ್ಯಾಸ ಹಾಗೂ ಕೆಲ ಬದಲಾವಣೆ ಮಾಡಲಾಗಿದೆ.

ಪೆಟ್ರೋಲ್ ಟ್ಯಾಂಕ್ ಮೇಲಿನ ಪಲ್ಸಾರ್ ಲೋಗೋ, ವೀಲ್ಹ್ ರಿಮ್ಸ್, ಸೆಂಟ್ರಲ್ ಪ್ಯಾನಲ್ ಹಾಗೂ 150 ಡೆಕಾಲ್ ಕೆಂಪು ಬಣ್ಣದಿಂದ ಕೂಡಿದೆ. ಹೊಸ ಬಣ್ಣದಿಂದ ಪಲ್ಸರ್ ಲುಕ್ ಬದಲಾಗಿದೆ. ಇದನ್ನ ಹೊರತು ಪಡಿಸಿದರೆ ಹೆಚ್ಚಿನ ಬದಲಾವಣೆಗಳಿಲ್ಲ.

ಎಂಜಿನ್‌ ಹಾಗೂ ಮೆಕಾನಿಕ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. 149 ಸಿಸಿ, ಸಿಂಗಲ್ ಸಿಲಿಂಡರ್, 14 ಬಿಹೆಚ್‌ಪಿ, 8000 ಆರ್‌ಪಿಎಂ, 13.4nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಕೂಡ ಹೊಂದಿದೆ. ನೂತನ ಪಲ್ಸರ್ ಕ್ಲಾಸಿಕ್ ಬೆಲೆ 64,998 ರೂಪಾಯಿ(ಎಕ್ಸ ಶೋ ರೂಂ).