ನವದೆಹಲಿ(ಫೆ.20): ಬಜಾಜ್ ಅವೆಂಜರ್ ಕ್ರೂಸರ್ 220 ABS ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಡೀಲರ್‌ಗಳು ನೂತನ ಅವೆಂಜರ್ ಬೈಕ್ ಬುಕಿಂಗ್ ಆರಂಭಿಸಿದ್ದಾರೆ. ಇದೀಗ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿರುವ ನೂತನ ಬಜಾಜ್ ಅವೆಂಜರ್ ಕ್ರೂಸರ್ 220 ಬೈಕ್ ಬೆಲೆ ಬಹಿರಂಗವಾಗಿದೆ.

ಇದನ್ನೂ ಓದಿ: ಪಲ್ಸರ್, R15ಗೆ ಪೈಪೋಟಿ - ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್!

ABS ತಂತ್ರಜ್ಞಾನ ಹೊಂದಿರುವ ಬಜಾಜ್ ಅವೆಂಜರ್ ಸ್ಟ್ರೀಟ್ 220, ಅವೆಂಜರ್ ಕ್ರೂಸ್ 220   ಬೆಲೆ 1.02 ಲಕ್ಷ ರೂಪಾಯಿ. ABS ರಹಿತ ಅವೆಂಜರ್ 220 ಬೈಕ್ ಬೆಲೆ 95,705 ರೂಪಾಯಿ(ಎಕ್ಸ್ ಶೋ ರೂಂ). ಇನ್ನುಳಿದಂತೆ ಎಂಜಿನ್ ಹಾಗೂ ಇತರ ಯಾವುದೇ ಬದಲಾವಣೆಗಳಿಲ್ಲದೆ ಅವೆಂಜರ್ ರಸ್ತೆಗಳಿಯಲಿದೆ.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

2019ರ ಎಪ್ರಿಲ್‍‌ನಿಂದ 125 ಸಿಸಿಗಿಂತ ಹೆಚ್ಚಿನ ಎಲ್ಲಾ ಬೈಕ್‌ಗಳು ABS ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಇದೀಗ ಬಜಾಜ್ 125 ಸಿಸಿಗಿಂತ ಹೆಚ್ಚಿರುವ ಎಲ್ಲಾ ಬೈಕ್‌ಗಳಲ್ಲಿ ABS ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಈಗಾಗಲೇ ಪಲ್ಸಾರ್ ಸೇರಿದಂತೆ ಇತರ ಬೈಕ್‌ಗಳಲ್ಲಿ ಬಜಾಜ್ ABS ಅಳವಡಿಸಿ ಬಿಡುಗಡೆ ಮಾಡಿದೆ.