ಇನ್ಮುಂದೆ ಬಸ್ ಪ್ರಯಾಣ ದರ ಕಡಿಮೆಯಾಗಲಿದೆ. ಕಾರಣ ಅಶೋಕ್ ಲಯ್ಲೆಂಡ್ ಇದೀಗ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಲಿದೆ. ನೂತನ ಬಲ್ ವಿಶೇಷತೆ ಏನು? ಇಲ್ಲಿದೆ ವಿವರ.
ಅಹಮ್ಮದಾಬಾದ್(ಜ.18): ಹಿಂದುಜಾ ಗ್ರೂಪ್‌ನ ಆಟೋಮೊಬೈಲ್ ಕಂಪನಿ ಅಶೋಕ್ ಲಯ್ಲೆಂಡ್ ಇದೀಗ ಎಲೆಕ್ಟ್ರಿಕ್ ಬಸ್ ಬಿಡುಗಡೆಗೆ ಎಲ್ಲಾ ತಯಾರಿ ಮಾಡಿದೆ. ಚೆನ್ನೈನ ಅಶೋಕ್ ಲಯ್ಲೆಂಡ್ ಎಲೆಕ್ಟ್ರಿಕ್ ನಿರ್ಮಾಣ ಘಟಕದಲ್ಲಿ ತಯಾರಾಗುತ್ತಿರುವ ಈ ನೂತನ ಬಸ್, ಶೀಘ್ರದಲ್ಲೇ ಗುಜರಾತ್‌ನ ಅಹಮ್ಮದಾಬಾದ್ ರಸ್ತೆಗಳಲ್ಲಿ ಓಡಾಟ ಆರಂಭಿಸಲಿದೆ.
ಇದನ್ನೂ ಓದಿ: Mahindra XUV 300 ಕಾರು ಬಿಡುಗಡೆ ದಿನಾಂಕ ಬಹಿರಂಗ!
ಗುಜರಾತ್‌ನಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮ್ಮಿಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೂತನ ಎಲೆಕ್ಟ್ರಿಕ್ ಬಸ್ ಅನಾವರಣ ಮಾಡಿದ್ದಾರೆ. ನೂತನ ಬಸ್ ಬೆಲೆ 55 ಲಕ್ಷ ದಿಂದ 1.50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಶೇಷ ಅಂದರೆ ಈ ಬಸ್ ಪ್ರಯಾಣ ದರ ತೀರಾ ಕಡಿಮೆಯಾಗಲಿದೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?
ಭಾರತ ಎಲೆಕ್ಟ್ರಿಕ್ ವಾಹನದತ್ತ ಚಿತ್ತಹರಿಸಿದೆ. 2022-24ರ ವೇಳೆಗೆ ಭಾರತದ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ ಆಕ್ರಮಿಸಿಕೊಳ್ಳಲಿದೆ. ಇದೀಗ ಅಶೋಕ್ ಲಯ್ಲೆಂಡ್ 2022 ರಿಂದ 10,000 ಬಸ್ ನಿರ್ಮಾಣ ಮಾಡಲು ನಿರ್ಧರಿಸಿದೆ.
