ನವದೆಹಲಿ(ಮೇ.20): ಕಾರು ಮಾರಾಟದಲ್ಲಿ ಕುಸಿತ ಕಾಣುತ್ತಿದ್ದಂತೆ ಹೊಂಡಾ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ದೇಶದ ಪ್ರಮುಖ ಡೀಲರ್‌ಗಳು ಆಫರ್ ನೀಡುತ್ತಿದ್ದಾರೆ. ಗರಿಷ್ಠ 2 ಲಕ್ಷ ರೂಪಾಯಿ ಡಿಸ್ಕೌಂಡ್ ನೀಡಲಾಗಿದೆ. ಹೊಂಡಾ CR-V, ಹೊಂಡಾ  BR-V, ಹೊಂಡಾ ಸಿಟಿ, ಹೊಂಡಾ ಅಮೇಝ್, ಹೊಂಡಾ ಜಾಝ್, ಹೊಂಡಾ WR-V, ಹೊಂಡಾ ಬ್ರಿಯೋ ಕಾರುಗಳಿಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಹೊಂಡಾ CR-V
ಹೊಂಡಾ CR-V AWD ವೇರಿಯೆಂಟ್ ಮೇಲೆ 2 ಲಕ್ಷ ರೂಪಾಯಿ,2WD ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಕಾರಿಗೆ 1.25 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಹೊಂಡಾ BR-V
ಹೊಂಡಾ BR-V ಮಾಡೆಲ್ ಕಾರಿನ ಎಲ್ಲಾ ವೆರಿಯೆಂಟ್‌ಗೆ ಗರಿಷ್ಠ 1.10 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಹೊಂಡಾ ಸಿಟಿ
ಮಾರುತಿ ಸಿಯಾಜ್, ಹ್ಯುಂಡೈ ವರ್ನಾ ಹಾಗೂ ಟೊಯೊಟಾ ಯಾರಿಸ್‌ಗೆ ಪೈಪೋಟಿ ನೀಡಲು ಹೊಂಡಾ ಸಿಟಿ ಕಾರಿನ ಮೇಲೆ 57,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಹೊಂಡಾ ಜಾಝ್
ಹೊಂಡಾ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ 45,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಹೊಂಡಾ ಅಮೇಝ್
ಭಾರತದ ಬೆಸ್ಟ್ ಪ್ರಿಮಿಯಂ ಸೆಡಾನ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ 37,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಹೊಂಡಾ ಬ್ರಿಯೋ
ಹೊಂಡಾ ಬ್ರಿಯೋ ಸ್ಟಾಕ್ ಕ್ಲಿಯರ್ ಮಾಡಲು ಮುಂದಾಗಿರುವ ಹೊಂಡಾ 40,000 ರೂಪಾಯಿ ಡಿಸ್ಕೌಂಟ್ ನೀಡಿದೆ.

ಸೂಚನೆ: ಹೊಂಡಾ ಡಿಸ್ಕೌಂಟ್ ಆಫರ್ ದೇಶದ ಪ್ರಮುಖ ಡೀಲರ್‌ಗಳ ಬಳಿ ಮಾತ್ರ ಸಿಗಲಿದೆ. ಎಲ್ಲಾ ಶೋ ರೂಂಗಳಲ್ಲಿ ಹೊಂಡಾ ಡಿಸ್ಕೌಂಟ್ ಆಫರ್ ಇರುವುದಿಲ್ಲ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.