Asianet Suvarna News Asianet Suvarna News

ಲೋಕಸಭಾ ಚುನಾವಣೆ ಪ್ರಚಾರಕ್ಕೆ ಎಲ್ಲಾ ಹೆಲಿಕಾಪ್ಟರ್ ಬುಕ್ !

ಲೋಕಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ದಹೆಲಿಯಿಂದ ಕ್ಷೇತ್ರದ ಮತದಾರು, ಸಾರ್ವಜನಿಕ ಸಭೆ ಸೇರಿದಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ರಾಜಕೀಯ ಪಕ್ಷಗಳು ಹೆಲಿಕಾಪ್ಟರ್, ಸಣ್ಣ ವಿಮಾನಗಳನ್ನು ಬುಕ್ ಮಾಡಿದೆ. ವಿಶೇಷ ಅಂದರೆ ಭಾರತದ ಎಲ್ಲಾ ಹೆಲಿಕಾಪ್ಟರ್ ಬುಕ್ ಆಗಿದೆ. ಹೆಲಿಕಾಪ್ಟರ್ ಬಾಡಿಗೆ, ನಿಯಮ ಸೇರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. 
 

All Indian Helicopter and small plane booked by political  parties for Election campaign
Author
Bengaluru, First Published Mar 23, 2019, 6:03 PM IST

ನವದಹೆಲಿ(ಮಾ.23): ದೇಶದಲ್ಲೀಗ ಐಪಿಎಲ್ ಜ್ವರ ಹಾಗೂ ಚುನಾವಣಾ ಅಬ್ಬರ. ಲೋಕ ಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಆರಂಭಗೊಂಡಿದೆ.  ಕ್ಷೇತ್ರಗಳ ಭೇಟಿ, ಮತದಾರರೊಂದಿಗೆ ಮಾತುಕತೆ, ಸಮಸ್ಯೆಗೆ  ಸ್ಪಂದನೆ, ಭರವಸೆ ಹೀಗೆ ರಾಜಕೀಯ ಮುಖಂಡರ ದಿನಚರಿ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಚುನಾವಣಾ ಪ್ರಚಾರಕ್ಕೆ ಭಾರತದ ಬಹುತೇಕ ಎಲ್ಲಾ ಹೆಲಿಕಾಪ್ಟರ್ ಹಾಗೂ ಸಣ್ಣ ವಿಮಾನ ಬುಕ್ ಆಗಿದೆ.

ಇದನ್ನೂ ಓದಿ: ಪ್ರಚಾರದಲ್ಲಿ ರೋಡ್ ಶೋ, ಬೈಕ್ ರ‍್ಯಾಲಿ ನಿಷೇಧ- ಸುಪ್ರೀಂ ಕೋರ್ಟ್‌ಗೆ PIL ಸಲ್ಲಿಕೆ!

ಸರ್ಕಾರಿ, ಖಾಸಗಿ ಸೇರಿ ಭಾರತದಲ್ಲಿ 275 ರಿಜಿಸ್ಟರ್ಡ್ ಹೆಲಿಕಾಪ್ಟರ್‌ಗಳಿವೆ. ಈ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬುಕ್ ಮಾಡಲಾಗಿದೆ. ಈ ಹೆಲಿಕಾಪ್ಟರ್ ಬಾಡಿಗೆ ಪ್ರತಿ ಗಂಟೆಗೆ 75,000 ರೂಪಾಯಿಂದ 3,50,000 ಲಕ್ಷ ರೂಪಾಯಿ. ಇನ್ನು ಬಾಡಿಗೆಗೆ ಪಡೆಯುವವರ ಪ್ರತಿ ದಿನ ಕನಿಷ್ಟ 3 ಗಂಟೆ ಬುಕ್ ಮಾಡಲೇಬೇಕು. ಇನ್ನು ದಿನದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದರೂ, ಇಲ್ಲದಿದ್ದರೂ ಕನಿಷ್ಟ 3 ಗಂಟೆ  ಬಾಡಿಗೆ ನೀಡಲೇಬೇಕು.

ಇದನ್ನೂ ಓದಿ: ಫಿಸ್ಕರ್ ಎಲೆಕ್ಟ್ರಿಕ್ ಕಾರು ಅನಾವರಣ - 480 ಕಿ.ಮೀ ಮೈಲೇಜ್!

ಹೆಲಿಕಾಪ್ಟರ್ ಬಾಡಿಗೆ ಪಡೆಯುವವರು ಯಾವ ದಿನಾಂಕ, ಎಲ್ಲಿಂದ ಎಲ್ಲಿಗೆ, ಯಾವ ಸಮಯ ಎಲ್ಲವನ್ನೂ ಸ್ಪಷ್ಟವಾಗಿ ನಮೂದಿಸಬೇಕು. ಇದನ್ನು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು.  ಎಲೆಕ್ಷನ್ ಕಮಿಶನ್ ಪ್ರಕಾರ ಭದ್ರತಾ ದೃಷ್ಟಿಯಿಂದ ಪ್ರಧಾನ ಮಂತ್ರಿ ಭಾರತೀಯ ಸೇನಾ ಹೆಲಿಕಾಪ್ಟರ್ ಬಳಸಬಹುದು. ಇನ್ಯಾವ ಸಚವರಾಗಲಿ, ಯಾವ ರಾಜಕೀಯ ಮುಖಂಡರಾಗಲಿ ಸೇನಾ ಹೆಲಿಕಾಪ್ಟರ್ ಬಳಸುವಂತಿಲ್ಲ. 

Follow Us:
Download App:
  • android
  • ios