Asianet Suvarna News Asianet Suvarna News

ಫಿಸ್ಕರ್ ಎಲೆಕ್ಟ್ರಿಕ್ ಕಾರು ಅನಾವರಣ - 480 ಕಿ.ಮೀ ಮೈಲೇಜ್!

ಫಿಸ್ಕರ್ ಕಂಪನಿ ಇದೀಗ ನೂತನ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 480 ಕಿ.ಮೀ ಪ್ರಯಾಣದ ರೇಂಜ್ ಹೊಂದಿರುವ ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Fisker unveiled Electric SUV car around 480km range
Author
Bengaluru, First Published Mar 21, 2019, 7:43 PM IST

ಕ್ಯಾಲಿಫೋರ್ನಿಯಾ(ಮಾ.21): ವಿಶ್ವವೇ ಈಗ ಎಲೆಕ್ಟ್ರಿಕ್ ಕಾರಿನತ್ತ ಗಮನ ಕೇಂದ್ರಿಕರಿಸಿದೆ. ಫಿಸ್ಕರ್ ಕಾರು ಕಂಪನಿ ಇದೀಗ ನೂತನ  SUV ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ವಿಶೇಷ ಅಂದರೆ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 480 ಕಿ.ಮೀ ಪ್ರಯಾಣ ಮಾಡಬಹುದು.

ಇದನ್ನೂ ಓದಿ: ಹೊಸ ಅವತಾರದಲ್ಲಿ ದಾಟ್ಸನ್ ರೆಡಿ ಗೋ ಕಾರು-ಕೇವಲ 2.75 ಲಕ್ಷ ರೂ!

80kWh ಲಿಥಿಯಂ ಐಯೋನ್ ಬ್ಯಾಟರಿ ಬಳಸಲಾಗಿದೆ. 4 ವೀಲ್ಹ್ ಡ್ರೈವ್‌ಗಾಗಿ ಎಲ್ಲಾ ಏಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ.  ಈ ಕಾರಿನ ಬೆಲೆ 27.45 ಲಕ್ಷ ರೂಪಾಯಿ. ಈ ವರ್ಷವೇ ಕಾರಿನ ಟೆಸ್ಟ್ ಆರಂಭಗೊಳ್ಳಲಿದೆ. ಇನ್ನು 2021ರಲ್ಲಿ ಕಾರು ಬಿಡುಗಡೆಯಾಗಲಿದೆ. 

ಇದನ್ನೂ ಓದಿ:ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು! 

ಅಮೇರಿಕಾದ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಗೆ ಇದೀಗ ಅದೇ ದೇಶ ಫಿಸ್ಕರ್ ಪೈಪೋಟಿ ನೀಡಲಿದೆ. ನೂತನ SUV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಟೆಸ್ಲಾ ತಿರುಗೇಟು ನೀಡಲು ಸಜ್ಜಾಗಿದೆ. ಈ ಕಾರು 2021ರಲ್ಲಿ ಭಾರತಕ್ಕೂ ಈ ಕಾರು ಕಾಲಿಡಲಿದೆ.
 

Follow Us:
Download App:
  • android
  • ios