ನವದೆಹಲಿ(ಮೇ.05): ಮಹೀಂದ್ರ ಕಂಪನಿ ಇದೀಗ ನೂತನ ಥಾರ್ ಜೀಪ್ ಬಿಡುಗಡೆ ಮಾಡುತ್ತಿದೆ. ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ಸೇರಿದಂತೆ ಹಲವು ಅಪ್‌ಡೇಟೆಡ್ ಫೀಚರ್ಸ್‌ನೊಂದಿಗೆ ಥಾರ್ ಸ್ಪೆಷಲ್ ಎಡಿಶನ್ ಜೀಪ್ ಬಿಡುಗಡೆಯಾಗುತ್ತಿದೆ. ಸದ್ಯ ರೋಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಥಾರ್ ಬಿಡುಗಡೆ ರೆಡಿಯಾಗಿದೆ.

ಇದನ್ನು ಓದಿ: ಸೌತ್ ಆಫ್ರಿಕಾದಲ್ಲಿ ಭಾರತದ ಕಾರಿಗೆ ಭಾರೀ ಬೇಡಿಕೆ!

ಸ್ಪೆಷಲ್ ಎಡಿಶನ್ ಥಾರ್ ಜೀಪ್ 2 ಬಣ್ಣಗಳಲ್ಲಿ ಲಭ್ಯವಿದೆ. 5 ಸ್ಪೋಕ್ 15 ಇಂಚಿನ  ಎಲೋಯ್ ವೀಲ್ಹ್, ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ಜೀಪ್‌ಗಿಂತ ಗಾತ್ರದಲ್ಲಿ ದೊಡ್ಡದಾದ ಹಾಗೂ ಒಳಭಾಗದಲ್ಲಿ ಹೆಚ್ಚು ಸ್ಥಳವಕಾಶ ನೂತನ ಜೀಪ್‌ನಲ್ಲಿದೆ. ಮುಂಭಾಗದ ಗ್ರಿಲ್ ಸೇರಿದಂತೆ ಸಣ್ಣ ಬದಲಾವಣೆಗಳ ಆಕರ್ಷಕ ಲುಕ್ ನೀಡಲಾಗಿದೆ.

ಇದನ್ನು ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ABS, ಏರ್‌ಬ್ಯಾಗ್ ಎಲ್ಲಾ ವೇರಿಯೆಂಟ್‌ಗಳಲ್ಲೂ ಲಭ್ಯವಿದೆ. ನೂತನ ಥಾರ್ ಒಂದು ವೇರಿಯೆಂಟ್ ಎಂಜಿನ್ ಲಭ್ಯವಿದೆ. ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಹೊಂದಿದೆ.  ಈ 2.5 ಲೀಟರ್ ಎಂಜಿನ್, 120 Bhp ಪವರ್ ಹಾಗೂ 140 Bhp ಪವರ್ ಹೊಂದಿದೆ. ನೂತನ ಥಾರ್ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ಜೀಪ್ ಬೆಲೆ 6.76 ಲಕ್ಷ ರೂಪಾಯಿಂದ 9.51 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).