ಯಾವ ಮನೆಯಲ್ಲಿ ಯಾವ ಗ್ರಹ..? ಯಾರಿಗೆ ಅದೃಷ್ಟ..?

Yava Maneyalli Yava Graha ..?
Highlights

ಯಾವ ಮನೆಯಲ್ಲಿ ಯಾವ ಗ್ರಹ..? ಯಾರಿಗೆ ಅದೃಷ್ಟ..?

ಮೇಷ ರಾಶಿ : ಈ ದಿನ ಶುಕ್ರವಾರ ನಿಮ್ಮ ತಾಯಿಗೆ ನಮಸ್ಕಾರ ಮಾಡಿ ದಿನವನ್ನ ಪ್ರಾರಂಭಿಸಿ. ಸ್ವಲ್ಪ ಕೋಪ ಸ್ವಭಾವದಿಂದ ನಿಮ್ಮ ದಿನ ಹಾಳಾಗಲಿದೆ. ಬೇಡ ಆ ಕೋಪಕ್ಕೆ ಸ್ವಲ್ಪ ಕಡಿವಾಣ ಹಾಕಿ. ಏನಿದೆ ಅದನ್ನ ಸಮಾಧಾನವಾಗಿ ಸ್ವೀಕರಿಸಿ. ಅಂದಹಾಗೆ ನಿಮ್ಮ ಸಂಗಾತಿಯಿಂದ ನಿಮಗೆ ಉತ್ತಮ ಸಹಾಯವಾಗಲಿದೆ.

ದೋಷ ಪರಿಹಾರ - ಸುಬ್ರಹ್ಮಣ್ಯ ಸ್ವಾಮಿಗೆ ದೇವಸ್ಥಾನಕ್ಕೆ ಒಂದು ಲೋಟದಷ್ಟು ಜೇನುತುಪ್ಪ ಕೊಟ್ಟುಬನ್ನಿ.

ವೃಷಭ : ತಾಯಿ ಅನ್ನಪೂರ್ಣೆಗೆ ನಮಸ್ಕಾರ ಮಾಡಿ ನಿಮ್ಮ ದಿನವನ್ನು ಪ್ರಾರಂಭ ಮಾಡಿದರೆ ದಿನದ ಸಂಪೂರ್ಣ ಸಮಸಯವನ್ನು ಸಂತಸದಿಂದ ಕಳೆಯುತ್ತೀರಿ. ಇಂದು ಪ್ರಯಾಣ ಮಾಡುವಾಗ ಪುಟ್ಟ ಹಣ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಇರುವ ಓರ್ವ ವ್ಯಕ್ತಿಯಿಂದ ನಿಮಗೆ ಕಿರಿಕಿರಿ. ಯೋಚಿಸಬೇಡಿ ನೀವು ಕಚೇರಿಗೆ ಹೋಗುವ ದಾರಿಯಲ್ಲಿ ಸಿಗುವ ಯಾವುದೇ ಶಿವ ದೇವಾಲಯಕ್ಕೆ ಹೋಗಿ ಅಲ್ಲಿನ ಭಸ್ಮವನ್ನು ಹಣೆ ಧರಿಸಿ ಹೋಗಿ.

ದೋಷ ಪರಿಹಾರ : ಶಿವನಾಮಾರ್ಚನೆ ಮಾಡಿ

ಮಿಥುನ : ವಿಷ್ಣು ದರ್ಶನದ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಶುಭದಾಯಕ. ನಿಮ್ಮ ದಾಂಪತ್ಯ ಸಮಸ್ಯೆ ನಿವಾರಣೆಗಾಗಿ ಐಕ್ಯಮತ್ಯ ಯಂತ್ರವನ್ನ ಧರಿಸಿ. ಇಷ್ಟು ದಿನ ಕಾಡುತ್ತಿದ್ದ ನಿಮ್ಮ ಸಮಸ್ಯೆ ದೂರಾಗಲಿದೆ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಣೆಯಿಂದ ಶುಭ

ಕಟಕ : ನಿಮ್ಮ ಉದ್ಯೋಗ ಸ್ಥಾನದಲ್ಲಿ ಬದಲಾವಣೆ, ಸಮಸ್ಯೆ ಇರುವವರು ಇಂದು ಗಂಧರ್ವ ಯಂತ್ರವನ್ನು ಧರಿಸುವುದರಿಂದ ನಿಸ್ಸಂಶಯವಾಗಿ ಉನ್ನತ ಮಟ್ಟದ ಉದ್ಯೋಗ ಕೀರ್ತಿ ಲಭ್ಯವಾಗುತ್ತದೆ. ಯಂತ್ರ ಕಟ್ಟಿದರೆ ಸಮಸ್ಯೆ ಸರಿಯಾಗುತ್ತದಾ ಅನ್ನುವ ಪ್ರಶ್ನೆಗೆ ಉತ್ತರ ನಂಬಿಕೆ ಇರಬೇಕು ಅಷ್ಟೆ. ಇದೆಲ್ಲವೂ ಪ್ರಶ್ನಾತೀತ ವಿಷಯಗಳು.

ದೋಷ ಪರಿಹಾರ : ನಾಗದೇವರಿಗೆ ನಮಸ್ಕಾರ ಮಾಡಿ

ಸಿಂಹ : ನೀವು ಜಾಣರು, ಸ್ವಲ್ಪ ಮುಂಗೋಪ ಸ್ವಭಾವ, ನಿಮ್ಮ ದಿನವನ್ನು ಹೇಗೆ ಇಟ್ಟುಕೊಳ್ಳಬೇಕೆಂಬ ಜಾಣ್ಮೆ ನಿಮಗಿದೆ. ಆದರೆ ವಿಧಿ ಕೆಲವೊಮ್ಮೆ ನಿಮ್ಮ ಊಹೆಯನ್ನು ಉಲ್ಟಾ ಮಾಡಿಬಿಡತ್ತೆ. ಅದಕ್ಕಾಗಿಯೇ ನೀವು ಆ ವಿಧಿ ಸ್ವರೂಪಿ ಶಿವನ ಪ್ರಾರ್ಥನೆ ಮಾಡಿ

ದೋಷ ಪರಿಹಾರ : ಮಂಜುನಾಥನಿಗೆ ಎರಡು ತೆಂಗಿನ ಕಾಯಿ ಅರ್ಪಿಸಿ.

ಕನ್ಯಾ : ಕನ್ಯಾರಾಶಿಯವರು ಸ್ವಲ್ಪ ಸ್ತ್ರೀ ಸ್ವಭಾವ. ಮರುಗುವ ಗುಣ ನಿಮ್ಮಲ್ಲಿದೆ. ಏಮಾರಿಬಿಡುವ ಸಾಧ್ಯತೆ ಇದೆ. ಸ್ವಲ್ಪ ಹುಷಾರಾಗಿರಿ. ಬಹಳ ಬೇಗ ನಂಬಿಕೆಗೆ ಜಾರಬೇಡಿ. ಅದರಿಂದ ಮೋಸ ಹೋಗುವ ಸಾಧ್ಯತೆ ಇದೆ.

ದೋಷ ಪರಿಹಾರ : ಅರಳಿ ಮರಕ್ಕೆ 5 ಪ್ರದಕ್ಷಣಿ ಹಾಕಿ.

ತುಲಾ : ನಿಮ್ಮ ರಾಶಿಯಲ್ಲೇ ಗುರುವಿದ್ದಾನೆ ನಿಮಗೆ ನಿಮ್ಮಮೇಲೆ ಹೆಚ್ಚಿನ ಭರವಸೆ. ಏನನ್ನಾದರೂ ಸಾಧಿಸುವೆ ಎಂಬ ಹುಮ್ಮಸ್ಸು. ಆದರೆ ನಿಮ್ಮ ಹುಮ್ಮಸ್ಸಿನ ಅರ್ಧ ಭಾಗ ಭಯವೂ ಇದೆ. ದೃಷ್ಟಿ ದೋಷದಿಂದ ತೊಂದರೆ. ದೃಷ್ಟಿ ತೆಗೆಸಿಕೊಳ್ಳಿ.

ದೋಷ ಪರಿಹಾರ : ಸಾಧ್ಯವಾದರೆ ಗಾಣಗಾಪುರಕ್ಕೆ ಹೋಗಿಬನ್ನಿ. ಇಲ್ಲ ದತ್ತಾತ್ರೇಯ ದರ್ಶನ ಮಾಡಿ

ವೃಶ್ಚಿಕ : ನಿಮಗೆ ಸಂದಿಗ್ಧ ಪರಿಸ್ಥಿತಿ. ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲದಲ್ಲಿದ್ದೀರಿ. ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಉಪಯೋಗಿಸುವಷ್ಟು ತೊಗರಿ ಬೇಳಿಯನ್ನು ಕೊಟ್ಟು ಬನ್ನಿ. ಮೂರನೇ ಆಯ್ಕೆ ಅಥವಾ ಮೂರನೇ ಯೋಚನೆ ನಿಮ್ಮನ್ನು ಭರವಸೆಯ ಕಡೆ ಕೊಂಡೊಯ್ಯುತ್ತದೆ.

ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನದಿಂದ ಮನಸ್ಸಿಗೆ ಸಮಾಧಾನ

ಧನಸ್ಸು : ಹಿರಿಯರಿಗೆ ನಮಸ್ಕಾರ ಮಾಡಿ ದಿನವನ್ನು ಪ್ರಾರಂಭಿಸಿ. ಇಂದು ಓರ್ವ ವಯೋವೃದ್ಧರ ಭೇಟಿ. ಅವರಿಂದ ಸಹಾಯವಾಗಲಿದೆ. ಅಷ್ಟೇ ಅಲ್ಲ ನಿಮ್ಮ ಕುಟುಂಬಕ್ಕೂ ಸಮಾಧಾನವಾಗಲಿದೆ. ಸುಖ ನೆಮ್ಮದಿ ಇರಲಿದೆ.

ದೋಷ ಪರಿಹಾರ : ಇಷ್ಟ ದೇವರ ದರ್ಶನ ಅಥವ ನಾಮ ಸ್ಮರಣೆ ಮಾಡಿದರೆ ದಿನವು ಶುಭದಾಯಕವಾಗಿರಲಿದೆ.

ಮಕರ : ಸುಬ್ರಹ್ಮಣ್ಯ ಅಥವಾ ಶನೈಶ್ಚರ ಸ್ವಾಮಿಯ ದರ್ಶನದಿಂದ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ಮನೆಯಲ್ಲಿ ತಿಂಡಿ-ತಿನಿಗಾಗಿಗಾಗಿ ಸ್ವಲ್ಪ ಮನಸ್ತಾಪವಾಗಲಿದೆ. ಸಮಾಧಾನವಿರಲಿ. ಉದ್ಯೋಗ ಸ್ಥಳದಲ್ಲಿ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ಶಾಂತ ಸ್ವಭಾವ ಇರಲಿ.

ದೋಷ ಪರಿಹಾರ : 21 ಬಾರಿ ಓಂಕಾರವನ್ನು ಪಠಿಸಿ.

ಕುಂಭ : ಶುಭದಾಯಕ ದಿನ. ಸ್ವಲ್ಪ ಬ್ಯುಸಿ ಸ್ಕೆಡ್ಯೂಲ್ ನಲ್ಲಿ ಕೆಲಸ ಮಾಡಲಿದ್ದೀರಿ. ಕೆಲಸದ ಭರಾಟೆಯಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ. ಸಾವಧಾನವಾಗಿ ಕೆಲಸ ಮಾಡಿ. ಬೇರೆಯವರನ್ನು ನಂಬುವುದಕ್ಕಿಂತ ನಿಮ್ಮ ಏಕಾಗ್ರತೆಯೇ ನಿಮಗೆ ಸಹಾಯವಾಗುತ್ತದೆ.

ದೋಷ ಪರಿಹಾರ : ಸಾಧ್ಯವಾದರೆ ಪುಟ್ಟ ಮಕ್ಕಳಿಗೆ / ಸುಮಂಗಲೆಯರಿಗೆ ವಸ್ತ್ರ ದಾನ ಮಾಡಿ

ಮೀನ : ದ್ವಂದ್ವ ಮನಸ್ಸಿನ ದಿನ, ಸ್ವಲ್ಪ ಆರೋಗ್ಯ ವ್ಯತ್ಯಯ, ಬೇರೆ ಏನೂ ಮಾಡುವುದು ಬೇಡ ಗುರುಬ್ರಹ್ಮ ಗುರುರ್ವಿಷ್ಣು: ಸ್ತೋತ್ರವನ್ನು 5 ಬಾರಿ ಪಠಿಸಿ

ದೋಷ ಪರಿಹಾರ : ಗುರು ಆರಾಧನೆ ಸಾಕು

loader