ನಿಮ್ಮ ಹುಡುಗನಿಗೆ ಬೇರೆಯವಳೊಂದಿಗೆ ಸಂಬಂಧವಿದ್ದರೆ ಇಂಥ ಕನಸು ಬೀಳುತ್ತೆ!
ಮದುವೆಯ ಕನಸಿ(marriage dream)ಗೆ ಸಂಬಂಧಿಸಿದಂತೆ ನಮ್ಮ ಮನಸ್ಸಿನಲ್ಲಿ ವಿವಿಧ ರೀತಿಯ ಆಲೋಚನೆಗಳು ಬರುತ್ತವೆ. ಈ ಕನಸುಗಳ ಅರ್ಥವನ್ನು ತಿಳಿದುಕೊಳ್ಳಲು ಏನೆಂಬ ಗೊಂದಲ ಶುರವಾಗುತ್ತದೆ. ಅಷ್ಟಕ್ಕೂ ಮದುವೆ ಕನಸು ಕಂಡರೆ ಏನರ್ಥ?
ಕನಸುಗಳು ಬೀಳುವುದು ಸಹಜ , ಪ್ರತಿಯೊಬ್ಬ ವ್ಯಕ್ತಿ ನಿದ್ದೆ ಮಾಡುವಾಗ ಕನಸು ಕಾಣುತ್ತಾನೆ. ಜಗತ್ತಿನಲ್ಲಿ ಕನಸು ಕಾಣದ ವ್ಯಕ್ತಿಯೇ ಇಲ್ಲ. ಕೆಲವೊಂದ ನೆನಪಿರುತ್ತದೆ. ಮತ್ತೆ ಕೆಲವು ಬೆಳಗ್ಗೆ ಏಳುವುದರೊಳಗೆ ಸ್ಮೃತಿ ಪಟಲದಿಂದ ಅಳಿಸಿ ಹೋಗಿರುತ್ತಿದೆ. ಪ್ರತಿಯೊಂದೂ ಕನಸಿಗೂ ತನ್ನದ ಆದ ಅರ್ಥವೂ ಇದೆ. ಸ್ವಪ್ನ ಶಾಸ್ತ್ರ (Swapna Shastra)ದಲ್ಲಿಯೂ ಯಾವುದೇ ಕನಸು ಅರ್ಥಹೀನವಲ್ಲ ಎಂದು ಉಲ್ಲೇಖಿಸಲಾಗಿದೆ. ಕನಸಿನ ವಿಜ್ಞಾನದ ಪ್ರಕಾರ, ಪ್ರತಿ ಕನಸಿಗೆ ಅದರದ್ದೇ ಆದ ಅರ್ಥಗಳಿವೆ. ಭವಿಷ್ಯದಲ್ಲಿ ಸಂಭವಿಸುವ ಸಂತೋಷ ಮತ್ತು ದುಃಖದ ಘಟನೆಗಳ ಬಗ್ಗೆ ಕನಸು (dream)ನಮಗೆ ಕೆಲವು ಸುಳಿವು ನೀಡುತ್ತದೆ. ಇನ್ನು ಕನಸಿನಲ್ಲಿ ಸಂಕೇತಗಳನ್ನು ಗುರುತಿಸಿದರೆ, ಮುಂದೆ ಸಂಭವಿಸುವ ಒಳ್ಳೆಯ ಅಥವಾ ಕೆಟ್ಟ ಘಟನೆಯನ್ನು ನಾವು ಊಹಿಸಬಹುದು. ಆದರೆ ಒಬ್ಬ ವ್ಯಕ್ತಿಯು ಕನಸನ್ನು ನೋಡಿದಾಗ ಒಳ್ಳೆಯದೆಂದು ಭಾವಿಸಿದರೆ ಮಂಗಳಕರವೆಂದೂ ನಂಬುತ್ತಾನೆ. ಇದರ ಹಿಂದಿನ ನೈಜ ಅರ್ಥವನ್ನು ಗುರುತಿಸದೆ ಖುಷಿಪಡುತ್ತಾನೆ. ಹಾಗೇ ಕೆಟ್ಟ ಕನಸನ್ನು ಅಶುಭ (inauspicious)ವೆಂದು ಪರಿಗಣಿಸುವ ಜತೆ ಅದರ ಬಗ್ಗೆ ಯೋಚಿಸಲು ಆರಂಭಿಸುತ್ತಾನೆ. ಆದರೆ ಕೆಲವೊಮ್ಮೆ ಕನಸುಗಳು ಭಯಾನಕವಾದರೂ ಶುಭ ಫಲ( Good luck)ವನ್ನು ನೀಡುವ ಕನಸುಗಳೆಂದು ಹೇಳುತ್ತಾರೆ.
ಮದುವೆ (Wedding)ಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖ ಭಾಗ. ದಾಂಪತ್ಯ ಜೀವನಕ್ಕೆ ಕಾಲಿಡುವ ದಿನಕ್ಕಾಗಿ ಸಾಮಾನ್ಯವಾಗಿ ಎಲ್ಲರೂ ಕಾಯುತ್ತಿರುತ್ತಾರೆ. ಎಲ್ಲರೂ ನಮ್ಮ ನಿಜವಾದ ಪ್ರೀತಿ ಪಾತ್ರರನ್ನು ಭೇಟಿಯಾದಾಗ ತಮ್ಮ ನಡುವಿನ ಸಂಬಂಧ (Relationship)ವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯುವ ಕನಸನ್ನು ಕಾಣುತ್ತೇವೆ. ಇನ್ನೂ ಕೆಲವೊಮ್ಮೆ ಈ ವಿಶೇಷ ದಿನದ ಬಗ್ಗೆ ತುಂಬಾ ಯೋಚಿಸುತ್ತೇವೆ, ಹಾಗೇ ಮಲಗಿದಾಗಲೂ ಮದುವೆ ಕನಸು ಕಾಣುತ್ತೇವೆ. ಮದುವೆಯ ಕನಸಿ(marriage dream)ಗೆ ಸಂಬಂಧಿಸಿದಂತೆ ನಮ್ಮ ಮನಸ್ಸಿನಲ್ಲಿ ವಿವಿಧ ರೀತಿಯ ಆಲೋಚನೆಗಳು ಬರುತ್ತವೆ. ಈ ಕನಸುಗಳ ಅರ್ಥವನ್ನು ತಿಳಿದುಕೊಳ್ಳಲು ಏನೆಂಬ ಗೊಂದಲ ಶುರವಾಗುತ್ತದೆ. ಅಷ್ಟಕ್ಕೂ ಮದುವೆ ಕನಸು ಕಂಡರೆ ಏನರ್ಥ?
Hindu Wedding : ಮದುವೆಯಲ್ಲಿ ಕೆಂಪು ಬಣ್ಣವನ್ನೇಕೆ ಧರಿಸ್ಬೇಕು?
ಕನಸಿನಲ್ಲಿ ಭಕ್ತಿಯಿಂದ ದೇವರನ್ನು ಪೂಜಿಸುತ್ತಿರುವುದನ್ನು ಕಂಡರೆ ದೇವರು ನಮ್ಮ ಬೇಡಿಕೆ ಈಡೇರಿಸುತ್ತಾನೆ ಮತ್ತು ಶೀಘ್ರದಲ್ಲೇ ಪ್ರೇಮ ವಿವಾಹ(love marriage)ವಾಗಲಿದೆ ಎಂದರ್ಥ. ಅದಲ್ಲದೆ ಕನಸಿನಲ್ಲಿ ಕಪ್ಪೆ(frog)ಯನ್ನು ನೋಡುವುದು ಪ್ರೇಮಿಗಳಿಗೆ ಬಹಳ ಮಂಗಳಕರ. ಪ್ರೀತಿ ಗೆಲ್ಲುತ್ತದೆ ಎಂದರ್ಥ. ಹಾಗೇ ಒಂದು ಹುಡುಗಿ ತಾನು ಐಷಾರಾಮಿ ಅರಮನೆಗೆ ಊಟಕ್ಕೆ ಅಥವಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದು ಕನಸು ಕಂಡರೆ, ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುವ ಶುಭ ಸಂದೇಶ. ತಮಾಷೆಯ ವಿಷಯವೆಂದರೆ ಕನಸಿನಲ್ಲಿ ಶರಾಬು ಕುಡಿಯೋದ ಕಂಡರೆ , ಶೀಘ್ರದಲ್ಲೇ ಮದುವೆಯಾಗಿ , ವೈವಾಹಿಕ ಜೀವನ (married life)ದ ಆನಂದವನ್ನು ಹೊಂದುವ ಸಂದೇಶ. ಒಬ್ಬ ಪುರುಷ ಅಥವಾ ಮಹಿಳೆ ಕನಸಿನಲ್ಲಿ ತನ್ನ ಪ್ರೇಮಿಯೊಂದಿಗೆ ಉದ್ಯಾನವನದಲ್ಲಿ ನಡೆಯುವುದನ್ನು ನೋಡಿದರೆ ಪ್ರೇಮಿಗಳ ಮುಂದಿನ ಜೀವನವು ಉಜ್ವಲವಾಗಿರುತ್ತದೆ ಎಂದೇ ಅರ್ಥ.
ಎಂಥದ್ದೇ ಸನ್ನಿವೇಶದಲ್ಲೂ ಸಂಗಾತಿಗೆ ಸಾಥ್ ನೀಡ್ತಾರೆ ಈ ರಾಶಿಯವ್ರು
ಹಾಗೇ ಹುಡುಗಿ ಕನಸಿನಲ್ಲಿ ಸ್ನೇಹಿತ ನೀಡಿದ ಬಳೆಯನ್ನು ಧರಿಸಿರುವುದನ್ನು ನೋಡಿದರೆ, ಶೀಘ್ರದಲ್ಲೇ ಮದುವೆಯಾಗುತ್ತಾಳೆ. ಹಾಗೂ ಕನಸಿನಲ್ಲಿ ಮಗುವನ್ನು ಕರೆಯುವುದನ್ನು ನೋಡಿದರೆ, ನಿಮ್ಮ ಗೆಳೆಯ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎಂದರ್ಥ. ಕನಸಿನಲ್ಲಿ ಯಾರಾದರೂ ಈರುಳ್ಳಿ ತಿನ್ನುವುದನ್ನು ನೋಡಿದರೆ, ತನ್ನ ಗೆಳತಿ / ಗೆಳೆಯನಿಂದ ನಿಜವಾದ ಪ್ರೀತಿಯನ್ನು ಪಡೆಯುತ್ತಾನೆಂದು ಹೇಳಲಾಗುತ್ತದೆ.