ಮೇಷ: ಹಳೆಯ ನೆನಪುಗಳನ್ನು ಕೆದಕಿಕೊಂಡು ಇಂದಿನ ಹಾಗೂ ಮುಂದಿನ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳದಿರಿ. ಹಳೆಯದ್ದನ್ನು ಮರೆತು ಮುನ್ನಡೆದರೆ ಮನೆಯಲ್ಲಿ ಸಂತೋಷ ನೆಮ್ಮದಿ ನೆಲಸಲಿದೆ. ವೃತ್ತಿಪರ ಮಹಿಳೆಯರಿಗೆ ಹೆಚ್ಚಿನ ಲಾಭ, ಕೆಲಸದಲ್ಲಿ ನೆಮ್ಮದಿ, ಮೇಲಧಿಕಾರಿಯಿಂದ ಪ್ರಶಂಸೆ ಸಿಗಲಿದೆ.

ವೃಷಭ: ವೃತ್ತಿಯಲ್ಲಿ ವಿದೇಶಿ ಪ್ರಯಾಣ ಬೆಳೆಸಬೇಕು, ಅಲ್ಲಿದ್ದು ಕೆಲಸ ಮಾಡಬೇಕು ಎಂಬ ನಿಮ್ಮ ಆಸೆ, ಆಕಾಂಕ್ಷೆ, ಕನಸುಗಳು ಈ ವಾರ ಈಡೇರುವ ಸಾಧ್ಯತೆ. ಅದಕ್ಕೆ ಸ್ವಲ್ಪ ನೀವು ಶ್ರಮ ಹಾಕಬೇಕಷ್ಟೆ. ಮಕ್ಕಳ ಓದಿನಲ್ಲಿ ಕೊಂಚ ನೆಮ್ಮದಿ. ಪರೀಕ್ಷೆ ಸಮಯವಾದ್ದರಿಂದ ಸ್ವಲ್ಪ ಹೆಚ್ಚು ಸಮಯ ಓದಿನಲ್ಲಿ ನೀಡುವುದು ಒಳಿತು.

ಮಿಥುನ: ಒಳ್ಳೆ ಕೆಲಸ ಮಾಡುವಾಗ ಹಲವು ಅಡೆತಡೆಗಳು ಬರುತ್ತವೆ. ಹಾಗೆ ಬಂದ ಕಷ್ಟಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವಿರಿ. ನಿಮ್ಮ ದೃಢ ಹಾಗೂ ಪ್ರಾಮಾಣಿಕ ಪ್ರಯತ್ನವೇ ನಿಮ್ಮನ್ನು ಮುನ್ನಡೆಸಲಿದೆ. ವಾರಾಂತ್ಯದಲ್ಲಿ ನೆಮ್ಮದಿ ನೆಲಸಲಿದ್ದು, ಕುಟುಂಬದೊಂದಿಗೆ ಸಮಯ ಕಳೆಯಲು ದೂರ ಪ್ರಯಾಣ ಸಾಧ್ಯ.

ಕಟಕ: ಸೌಂದರ್ಯದ ಬೆನ್ನತ್ತಿ ನಡೆದರೆ ಕಹಿ ಸಿಗಲಿದೆ. ಬೆಳ್ಳಗೆ ಇರುವುದೆಲ್ಲಾ ಹಾಲಲ್ಲ ಹಾಗೆ ಕಣ್ಣಿಗೆ ಕಂಡಿದ್ದೇಲ್ಲ ನಿಜವಲ್ಲ. ಸಮಾಲೋಚನೆ ನಡೆಸಿ ನಿಮ್ಮ ನಿರ್ಧಾರ ಕೈಗೊಂಡು ಮುನ್ನಡೆಯಿರಿ. ಉದ್ಯೋಗ ದಲ್ಲಿ ಉತ್ತಮ. ಮಹಿಳೆಯರು ಈ ವಾರ ಮನೆ ನಿರ್ವಹಣೆಯಲ್ಲಿ ಚೆನ್ನಾಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಲಿದ್ದೀರಿ.

ಸಿಂಹ: ವಿವಾಹಕ್ಕೂ ಮೊದಲು ನೀವು ಕಂಡ ಕನಸು ನನಸಾಗದಿದ್ದರೂ ಈಗ ಆ ಅವಕಾಶ ಬಂದಿದೆ. ನಿಮ್ಮ ಕನಸು ನನಸಾಗಿಸಲು ಒಳ್ಳೆಯ ಸಮಯ. ನಿಮ್ಮ ಪ್ರತಿಭೆಗೆ ಬೆಂಬಲ, ಪ್ರೋತ್ಸಾಹ ಪ್ರೀತಿ ಪಾತ್ರರಿಂದ ಸಿಗಲಿದೆ. ಮಹಿಳೆಯರಲ್ಲಿ ವಾರಾಂತ್ಯದಲ್ಲಿ ಮನಸ್ಸಲ್ಲಿ ಕಿರಿಕಿರಿ ವಾತಾವರಣ. ದೇವಾಲಯಕ್ಕೆ ಹೋಗಿ ಬನ್ನಿ.

ಕನ್ಯಾ: ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರೆ ನಿಮ್ಮ ಆ ಗುಣವನ್ನು ದುರಪಯೋಗ ಪಡಿಸಿಕೊಳ್ಳುವರೇ ಹೆಚ್ಚು. ಯಾರು ಹೇಗೆಂದು ಜಡ್ಜ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ. ಇಲ್ಲವಾದಲ್ಲಿ ಕಂಟಕ ಕಟ್ಟಿಟ್ಟ ಬುತ್ತಿ. ವಾರಾಂತ್ಯದಲ್ಲಿ ಬಂಧುಗಳ ಆಗಮನ. ಕೆಲಸದ ಒತ್ತಡ ಹೆಚ್ಚಿದರೂ, ಮನೆಯವರಿಂದ ನೆಮ್ಮದಿ ಸಿಗಲಿ

ತುಲಾ: ಕೆಲಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ಜೊತೆಗೆ ಕುಟುಂಬಕ್ಕೂ ಅಷ್ಟೇ ಪ್ರಾಶಸ್ತ್ಯ ನೀಡಿದರೆ ಉತ್ತಮ. ಮನೆಯಲ್ಲಿನ ಕಿರಿಕಿರಿ ವಾತಾವರಣ ದಿಂದ ನೊಂದಿದ್ದರೆ ಸ್ವಲ್ಪ ಸಮಯ ದೂರದೂರಿಗೆ ಹೋಗಿ ಬನ್ನಿ. ಧ್ಯಾನ ಮಾಡಿದಷ್ಟು ಮನಸ್ಸಲ್ಲಿನ ಆತಂಕ ದೂರಾಗ ಲಿದೆ. ಮಕ್ಕಳ ಓದಿನಲ್ಲಿ ಆತಂಕ ಬೇಡ. ಶುಭ ಫಲ.

ವೃಶ್ಚಿಕ: ಯಾವುದೇ ಕೆಲಸವನ್ನು ಎರಡು ಮನಸ್ಸಿನಿಂದ ಆರಂಭಿಸಬೇಡಿ. ಗೊಂದಲದ ಗೂಡಿನಿಂದ ಹಿರಿಯರಿಂದ ಸೂಕ್ತ ಸಲಹೆ ಪಡೆದು ನಿರ್ಧರಿಸಿ. ಮಾಡುವ ಕಾರ್ಯದಲ್ಲಿ ಶ್ರದ್ಧೆ, ಆಸಕ್ತಿ ಇದ್ದಲ್ಲಿ ಉತ್ತಮ ಫಲಿತಾಂಶ ನಿಮಗೆ ಸಿಗಲಿದೆ. ಇತರರ ಮಾತಿಗೆ ಕಿವಿಗೊಡುವ ಹವ್ಯಾಸ ಬಿಟ್ಟು ಮುನ್ನಡೆಯಿರಿ.

ಧನುಸ್ಸು: ಅತಿಯಾದ ಶ್ರಮ, ಒತ್ತಡದ ಕೆಲಸ ಆರೋಗ್ಯ ದಲ್ಲಿ ಏರುಪೇರಾಗಲಿದೆ. ಹೆಚ್ಚು ಟೆನ್ಷನ್‌ನಿಂದ ಮನೆಯಲ್ಲೂ ಗೊಂದಲದ ವಾತಾವರಣ. ಆರೋಗ್ಯದ ಬಗ್ಗೆ ಗಮನವಿರಲಿ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಾರಾಂತ್ಯದಲ್ಲಿ ಸಿಹಿ ಸುದ್ದಿ ಕೇಳುವಿರಿ.

ಮಕರ: ನಿಮ್ಮ ನಿರ್ಧಾರ, ನಿಮ್ಮ ಆಲೋಚನೆಯ ನಡೆಗೆ ಎಲ್ಲರೂ ಗೌರವಿಸಬೇಕು ಎಂಬ ನಿಲುವು ಬಿಟ್ಟುಬಿಡುವುದು ಒಳ್ಳೆಯದು. ಹಣಕಾಸಿನ ವ್ಯವಹಾರಲ್ಲಿ ಎಚ್ಚರ ಇರಲಿ. ಯಾರನ್ನೂ ಅತಿಯಾಗಿ ನಂಬುವುದು ಬೇಡ. ಈ ವಾರ ಎಚ್ಚರಿಕೆಯ ನಡೆ ಅಗತ್ಯ.

ಕುಂಭ: ವಾರದುದ್ದಕ್ಕೂ ಒಂದಿಲ್ಲೊಂದು ತೊಂದರೆಗೆ ಒಳಗಾಗುವ ನೀವು ವಾರಂತ್ಯದಲ್ಲಿ ಯಶಸ್ಸು ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಒಳ್ಳೆಯ ಮಾತುಗಳು ಇನ್ನಷ್ಟು ಜನರನ್ನು ಆಕರ್ಷಿಸುತ್ತದೆ. ಜನ ಮೆಚ್ಚುಗೆ ಈ ವಾರ ಹೆಚ್ಚಾಗೇ ಸಿಗಲಿದ್ದು, ವಾರಾಂತ್ಯದಲ್ಲಿ ಕಹಿ ಅನುಭವವಾಗಲಿದೆ. ಮಹಿಳೆಯರಿಗೆ ಶುಭ ಲಾಭ

ಮೀನ: ಇಚ್ಛಾಶಕ್ತಿ ಒಂದಿದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ ನೀವಾಗಲಿದ್ದೀರಿ. ಸೇವಾ ಕಾರ್ಯಗಳು ನಿಮ್ಮಿಂದ ಈ ವಾರ ಕೈಗೂಡಲಿದೆ. ದಾನ, ಧರ್ಮದಿಂದ ಉನ್ನತಮಟ್ಟಕ್ಕೆ ಏರಲಿದ್ದೀರಿ. ಖರ್ಚು ವೆಚ್ಚದಲ್ಲಿ ಎಚ್ಚರ ಇರಲಿ