Asianet Suvarna News Asianet Suvarna News

ಪ್ರತಿಫಲ ಪಡೆಯುವುದು ಖಚಿತ - ಶುಭ ಫಲವಿದೆ : ವಾರ ಭವಿಷ್ಯ

ಈ ವಾರ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ..? ನಿಮ್ಮ ಭವಿಷ್ಯ ವೇನು?

Weekly Astrology in Kannada  09- 15  Feb 2019 Horoscope
Author
Bengaluru, First Published Feb 9, 2020, 7:23 AM IST

 ಪ್ರತಿಫಲ ಪಡೆಯುವುದು ಖಚಿತ - ಶುಭ ಫಲವಿದೆ : ವಾರ ಭವಿಷ್ಯ

ಮೇಷ
ಮಕ್ಕಳ ವಿಚಾರದಲ್ಲಿ ಕೋಪಗೊಳ್ಳುವುದು ಬೇಡ.
ಉತ್ತರಿಸಲು ಕಷ್ಟವಾಗುವ ಪ್ರಶ್ನೆಗಳು ಈ ವಾರ
ನಿಮ್ಮ ಮುಂದೆ ಬರಲಿವೆ. ಎಂತಹ ಸಂದರ್ಭ
ಬಂದರೂ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳದಿರಿ.
ಆರೋಗ್ಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ.
ಎಲ್ಲವನ್ನು ನಾನೇ ಮಾಡಿದೆ ಎನ್ನುವ ಭಾವ ಬೇಡ.

ವೃಷಭ
ಸುಲಭಕ್ಕೆ ಆಗುವ ಕೆಲಸವನ್ನು ಆತುರ ಮಾಡಿ
ಕಗ್ಗಂಟು ಮಾಡಿಕೊಳ್ಳಲಿದ್ದೀರಿ. ಅನಾವಶ್ಯಕವಾಗಿ
ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಆರ್ಥಿಕ
ಚಟುವಟಿಕೆಗಳು ಹೆಚ್ಚಾದರೂ ಅದರ ಫಲವನ್ನು
ಅನುಭವಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆಮಿಷದ
ಮಾತುಗಳಿಗೆ ಬಲಿಯಾಗುವುದು ಬೇಡ.

ಮಿಥುನ
ದಾನ ಮಾಡುವ ಮೊದಲು ನಿಮ್ಮಂದ ದಾನ
ಸ್ವೀಕಾರ ಮಾಡುವ ವ್ಯಕ್ತಿ ಅರ್ಹನಾ ಎಂದು
ಪರೀಕ್ಷೆ ಮಾಡಿಕೊಳ್ಳಿ. ಹೊಸ ಕಾರು ಕೊಳ್ಳುವ
ಕನಸಿಗೆ ಜೀವ ಬರಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು
ಲೆಕ್ಕಾಚಾರ ಇಟ್ಟುಕೊಂಡರೆ ಒಳಿತು. ತಂದೆಯ ಮಾತಿಗೆ
ಹೆಚ್ಚು ಬೆಲೆ ನೀಡಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ.

ಕಟಕ
ಹಿಡಿದ ಕೆಲಸ ಒಂದೇ ಬಾರಿಗೆ ಮುಗಿದು
ಹೋಗಬೇಕು ಎನ್ನುವ ಆತುರ ಬೇಡ.
ಯಾವುದೇ ಕೆಲಸವಾದರೂ ಅಗತ್ಯವಾದ
ಸಮಯವನ್ನು ಬೇಡಿಯೇ ಬೇಡುತ್ತದೆ. ತಾಳ್ಮೆಯಿಂದ
ಮುಂದೆ ಸಾಗಿದರೆ ಕೆಲಸದಲ್ಲಿ ಪೂರ್ಣತೆ ಸಾಧ್ಯವಾಗಲಿದೆ.
ಮನೆಯಲ್ಲಿ ಪ್ರೀತಿ ಹೆಚ್ಚಾಗಲಿದೆ. ಶುಭ ಫಲ.

ಸಿಂಹ
ಹತ್ತು ಕಟ್ಟುವುದಕ್ಕಿಂತ ಒಂದು ಮುತ್ತುಕಟ್ಟು
ಎನ್ನುವ ಮಾತಿದೆ. ಅದೇ ರೀತಿ ಹತ್ತು ಕೆಲಸವನ್ನು
ಸ್ವಲ್ಪ ಸ್ವಲ್ಪ ಮಾಡುವುದಕ್ಕಿಂತ ಒಂದು ಕೆಲಸದ
ಕಡೆ ಗಮನ ಹರಿಸಿ ಅದರಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ
ಕೆಲಸ ಮಾಡಿ. ಒಳ್ಳೆಯ ಫಲ ದೊರೆಯಲಿದೆ. ಸಮಸ್ಯೆಗಳು
ಸರಿಯಾಗಿ ಸಂಸಾರದಲ್ಲಿ ಸಂತೋಷ ಹೆಚ್ಚಲಿದೆ

ಕನ್ಯಾ
ನಿಮ್ಮನ್ನು ತುಳಿಯುವವರ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಯಾಕೆಂದರೆ ಅವರು
ಯಾವಾಗಲೂ ನಿಮ್ಮ ಕಾಲ ಕೆಳಗೇ ಇರುತ್ತಾರೆ.
ಪ್ರಗತಿಯತ್ತ ಮನಸ್ಸು ಹರಿಯಲಿದೆ. ಮಕ್ಕಳ ಸಾಧನೆ
ಕಂಡು ತೃಪ್ತ ಭಾವ ಮೂಡಲಿದೆ. ಆರ್ಥಿಕವಾಗಿ ಕೊಂಚ
ಏರುಪೇರು ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ

ತುಲಾ
ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ
ಹಿಂದೆ ಮಾಡಿದ್ದ ತಪ್ಪಿಗೆ ಈ ವಾರದಲ್ಲಿ ಬೆಲೆ
ತೆರಬೇಕಾದೀತು. ಸುತ್ತಾಟಗಳು ಹೆಚ್ಚಾಗಲಿವೆ.
ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಹಿತ್ತಾಳೆ
ಕಿವಿಯಿಂದ ನಿಮಗೆ ಹೆಚ್ಚು ಸಮಸ್ಯೆಯಾಗುವುದು.
ದುಂದು ವೆಚ್ಚದಿಂದ ಸಾಧ್ಯವಾದಷ್ಟು ದೂರವಿರಿ.

ವೃಶ್ಚಿಕ
ನೆರೆ ಮನೆಯ ದುಃಖಕ್ಕೆ ನೀವು ಚಿಂತೆ
ಮಾಡುವುದು ಬೇಡ. ನಿಮ್ಮಂದ ಆಗಬಹುದಾದ
ಸಹಾಯ ಮಾಡಿ ಸುಮ್ಮನಿದ್ದು ಬಿಡಿ. ಅನಾವಶ್ಯಕ
ವಿಚಾರಗಳಲ್ಲಿ ತಲೆಯಾಕದಿರಿ. ಮಹಿಳೆಯರ ಪಾಲಿಗೆ ಈ
ವಾರ ಹೆಚ್ಚು ಅನುಕೂಲಕರವಾಗಿರಲಿದೆ. ಸ್ವಂತ ಉದ್ಯೋಗ
ಮಾಡುವವರಿಗೆ ಸ್ನೇಹಿತರಿಂದ ಸಹಕಾರ ದೊರೆಯಲಿದೆ.

ಧನಸ್ಸು
ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆರೋಗ್ಯದಲ್ಲಿ
ಕೊಂಚ ಏರುಪೇರು. ಮನೆ ಮದ್ದಿನಿಂದ ಎಲ್ಲವೂ
ನಾಲ್ಕು ದಿನದಲ್ಲಿ ಸರಿಯಾಗಲಿದೆ. ಬಾಳ
ಸಂಗಾತಿಯ ಆಯ್ಕೆ ವಿಚಾರದಲ್ಲಿ ದುಡುಕುವುದು ಬೇಡ.
ಗಂಡ ಹೆಂಡತಿಯ ವಿರಸಕ್ಕೆ ತೆರೆ ಬೀಳಲಿ

ಮಕರ
ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ನಿಮ್ಮ
ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ದೇವಸ್ಥಾನಗಳಿಗೆ
ಭೇಟಿ ನೀಡಲಿದ್ದೀರಿ. ಹೆಂಡತಿ ಉಳಿತಾಯದ
ಹಣ ಈ ವಾರದಲ್ಲಿ ನಿಮ್ಮ ಸಹಾಯಕ್ಕೆ ಬರಲಿದೆ. ಹಳೆಯ
ನೆನಪುಗಳನ್ನು ನೆನೆದು ದುಃಖಪಡುವುದು ಬೇಡ

ಕುಂಭ
ಕೆಲಸ ಕಾರ್ಯಗಳ ನಡುವಲ್ಲೂ ಆರೋಗ್ಯದ
ಕಡೆಗೆ ಹೆಚ್ಚು ಗಮನ ನೀಡಿ. ಗಂಡ ಮತ್ತು ಮಕ್ಕಳ
ಬಗ್ಗೆ ಹೆಚ್ಚು ಚಿಂತೆ ಮಾಡಲಿದ್ದೀರಿ. ರಿಯಲ್
ಎಸ್ಟೇಟ್ ಉದ್ಯಮಿಗಳಿಗೆ ಹೊಸ ವ್ಯವಹಾರದ ಬಾಗಿಲು
ತೆರೆಯಲಿದೆ. ಆರೋಗ್ಯದಲ್ಲಿ ಕೊಂಚ ಏರುಪೇರು, ಆತಂಕ
ಪಡಬೇಕಾಗಿಲ್ಲ. ಒಳ್ಳೆಯ ಕಾರ್ಯಕ್ಕೆ ತಡ ಮಾಡದಿರಿ.

ಮೀನ
ಕುಟುಂಬದ ಮುಖ್ಯಸ್ಥರ ಆರೋಗ್ಯದಲ್ಲಿ
ಚೇತರಿಕೆ ಕಂಡು ಬರಲಿದೆ. ಮಹಿಳೆಯರ ಪಾಲಿಗೆ
ವಾರ ಪೂರ್ತಿ ಸಂತಸ ಹೆಚ್ಚಾಗಲಿದೆ. ಚಿನ್ನ, ಬೆಳ್ಳಿ
ಖರೀದಿಗೆ ಇದು ಸಕಾಲ. ಆತ್ಮೀಯರೊಂದಿಗೆ
ವ್ಯವಹಾರ ಮಾಡುವಾಗ ಅಗತ್ಯವಾಗಿ ಮುನ್ನೆಚ್ಚರಿಕೆ ಕ್ರಮ
ಗಳನ್ನು ಮಾಡಿಕೊಳ್ಳುವುದು ಸೂಕ್ತ. ಶುಭಫಲ

Follow Us:
Download App:
  • android
  • ios