ಮನೆಯಲ್ಲಿ ಸುಮ್ಮನೆ ದೇವರನ್ನಿಟ್ಟು, ಪೂಜಿಸದಿದ್ದರೆ ನೆಗಟಿವ್ ಎನರ್ಜಿ ಸ್ಪ್ರೆಡ್ ಆಗುತ್ತೆ. ಆದುದರಿಂದ ದೇವರನ್ನು ಮನೆಯಲ್ಲಿಟ್ಟರೆ, ಪೂಜಿಸಲೇ ಬೇಕು. ಇಲ್ಲಿವೆ ದೇವರ ಕೋಣೆಗೆ ಸಂಬಂಧಿಸಿದೆ ಕೆಲವು ವಾಸ್ತು ಟಿಪ್ಸ್...

ವಾಸ್ತು ಟಿಪ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- ಪ್ರತಿದಿನ ಪೂಜಿಸುವುದಾದರೆ ಮಾತ್ರ ಮನೆಯಲ್ಲಿ ದೇವರ ಮೂರ್ತಿ, ಸಾಲಿಗ್ರಾಮ ಮತ್ತು ಶ್ರೀಚಕ್ರವನ್ನಿಡಬೇಕು. ಇಲ್ಲವಾದರೆ ಮನೆ ಹಾಗೂ ಮನೆ ಮಂದಿಗೂ ಶ್ರೇಯಸ್ಸಲ್ಲ.
- ಪಶ್ಚಿಮಕ್ಕೆ ಮುಖ ಮಾಡಿ ಕುಳಿತು, ಪೂಜಿಸಬೇಕು. ದೇವರ ಕೋಣೆ ಅಥವಾ ಗೂಡು ಪೂರ್ವ ದಿಕ್ಕಿಗೆ ಮುಖ ಮಾಡಿದರೊಳಿತು.
- ದೊಡ್ಡದಾದ ಮನೆ ಅಥವಾ ಕಚೇರಿಯಲ್ಲಿ ದೇವರ ಕೋಣೆ ನಿರ್ಮಿಸುವಾಗ ಅದು ಮಧ್ಯದಲ್ಲಿರಲಿ. ಇದರಿಂದ ಪೂರ್ತಿ ಮನೆಗೆ ಪಾಸಿಟಿವ್ ಎನರ್ಜಿ ಹರಡುತ್ತದೆ. 
- ತುಂಡಾದ ಅಥವಾ ಹಾಳಾದ ಯಾವುದೇ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಡಿ.
- ಪೂಜಾ ಕೋಣೆಗೆ ಬಿಳಿ, ತಿಳಿ ಹಳದಿ ಅಥವಾ ತಿಳಿ ನೀಲಿ ಬಣ್ಣವನ್ನು ಹಚ್ಚಿ. 
- ಪೂಜಾ ಗೃಹ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಅಲ್ಲದೆ ಸ್ಟೋರ್ ರೂಮ್ ಅಥವಾ ಬೆಡ್ ರೂಮಿನಲ್ಲೂ ದೇವರನ್ನಿಟ್ಟು ಪೂಜಿಸಬಾರದು. 
- ಧ್ಯಾನ ಮಾಡುವಾಗ ಅಥವಾ ಪೂಜಿಸುವಾಗ ಮ್ಯಾಟ್ ಅಥವಾ ಮಣೆ ಮೇಲೆಯೇ ಕುಳಿತುಕೊಳ್ಳಿ. 
- ಸುಗಂಧಿತ ಅಗರಬತ್ತಿಗಳನ್ನು ಹಚ್ಚಿಡುವುದರಿಂದ  ಮನೆ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
- ಮೃತ ಪಟ್ಟವರ ಫೋಟೊವನ್ನು ದೇವರ ಫೋಟೊದೊಂದಿಗಿಡುವುದು ಕೆಟ್ಟದ್ದು. 
- ದೇವರ ಮೂರ್ತಿಗಳು ನೇರವಾಗಿ ಮುಖ್ಯ ದ್ವಾರಕ್ಕೆ ಮುಖ ಮಾಡಿ ಇರದಿರಲಿ. 
- ಪೂಜಾ ಗೃಹದಲ್ಲಿ ಡಸ್ಟ್ ಬಿನ್ ಇಡಬೇಡಿ. ಇದರಿಂದ ಪಾಸಿಟಿವ್ ಎನರ್ಜಿ ಕಡಿಮೆಯಾಗುತ್ತದೆ. 
-ಪೂಜಾ ಕೋಣೆಯ ವಾಲ್ ಯಾವುದೇ ಟಾಯ್ಲೆಟ್‌, ಬಾತ್‌ರೂಮ್‌ ಗೋಡೆಗೆ ಅಟ್ಯಾಚ್‌ ಆಗಿರಾಬಾರದು.