ಹೊಸ ವರ್ಷ ಎಲ್ಲೆಡೆ ನವ ಚೈತನ್ಯ, ನವ ಅನುಭೂತಿ ತಂದಿದೆ. ಈ ಸಮಯ ಸುಂದರವಾಗಿರಬೇಕಾದರೆ, ಮನೆಯಲ್ಲಿ ಸದಾ ಸಂತೋಷ ನೆಲೆಸಬೇಕೆಂದಿದ್ದರೆ ಈ ವಾಸ್ತು ನಿಯಮಗಳನ್ನು ಪಾಲಿಸಬೇಕು

ಶನಿ ದೋಷ ನಿವಾರಣೆಗೆ ಮನೆಯಲ್ಲಿರಲಿ ನವಿಲುಗರಿ

- ಮನೆಯನ್ನು ಕ್ಲೀನ್ ಆಗಿಟ್ಟುಕೊಳ್ಳಿ. ಯಾವುದೇ ಕಸ, ವೆಸ್ಟ್ ವಸ್ತುಗಳನ್ನು ಮನೆಯಲ್ಲಿಡಬೇಡಿ. ಇದರಿಂದ ಮನಸ್ಸಿನಲ್ಲಿ ಹಾಗೂ ಮನೆಯ ಧನಾತ್ಮಕ ಶಕ್ತಿ ಹೆಚ್ಚುತ್ತದೆ. 
- ಮನೆಯಲ್ಲಿ ಜೇಡರ ಬಲೆ ಇದ್ದರೆ ಆದಷ್ಟು ಆದಷ್ಟು ಬೇಗ ತೆಗೆದು ಸ್ವಚ್ಛ ಮಾಡಿ. ಜೇಡರ ಬಲೆ ಎಂದರೆ ಕಸ. ಎಲ್ಲಿ ಸ್ವಚ್ಛವಾಗಿರುವುದಿಲ್ಲವೋ, ಅಲ್ಲಿ ಲಕ್ಷ್ಮಿ ಬಂದು ನೆಲೆಸುವುದಿಲ್ಲ.

ಸ್ವಸ್ಥಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ
- ಮನೆಯಲ್ಲಿ ಲಕ್ಷ್ಮಿ ದೇವಿ ಅಥವಾ ಇನ್ಯಾವುದೇ ದೇವರ ತುಂಡಾದ ಫೋಟೋವನ್ನು ಇಡಬೇಡಿ. ತುಂಡಾದ ಫೋಟೋ ಮನೆಯಲ್ಲಿದ್ದರೆ ಅದರಿಂದ ಮನೆಯವರ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. 
- ಗಡಿಯಾರ ಹಾಳಾಗಿದ್ದರೆ ಅಥವಾ ನಿಂತು ಹೋಗಿದ್ದರೆ ಅದನ್ನು ಆದಷ್ಟು ಬೇಗ ಮನೆಯಿಂದ ಹೊರ ಹಾಕಿ, ಅಥವಾ ಸರಿ ಪಡಿಸಿ. ಯಾಕೆಂದರೆ ಗಡಿಯಾದ ಜೀವನದ ನಿರಂತರತೆಯ ಸಂಕೇತ. ಅದು ನಿಂತು ಹೋದರೆ ನಮ್ಮ ಜೀವನ ಸಹ ನಿಂತು ಹೋಗುತ್ತದೆ ಎಂದು ನಂಬಲಾಗಿದೆ. 

ಆರ್ಥಿಕ ಸಮಸ್ಯೆಗೆ ಇದೂ ಒಂದು ಕಾರಣ
- ಮನೆಯ ಎದುರಿನ ಭಾಗದಲ್ಲಿ ಅಕ್ವೇರಿಯಂ ಅಥವಾ ಮುಖವಾಡ, ಕುದುರೆ ಲಾಳ ತಂದಿಡಿ. ಇದರಿಂದ ಯಾವುದೇ ನೆಗೆಟಿವ್ ಎನರ್ಜಿ ಮನೆಯವರ ಮೇಲೆ ಬೀಳುವುದಿಲ್ಲ. 
- ಪ್ರತಿದಿನ ಮನೆಯಲ್ಲಿ ಶಂಖ ಊದಿದರೆ ತುಂಬಾ ಉತ್ತಮ. ಇದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಜೊತೆಗೆ ಋಣಾತ್ಮಕ ಶಕ್ತಿಯನ್ನೇ ಓಡಿಸುತ್ತದೆ.

ಪೊರಕೆ ಖರೀದಿಸಲು ಯಾವ ದಿನ ಬೆಸ್ಟ್?