ಶಿರಡಿ ಸಾಯಿ ಬಾಬಾರ ಶಾಕಿಂಗ್ ಫ್ಯಾಕ್ಸ್ಟ್!

ನಡೆದಾಡುವ ದೇವರೆಂದೇ ಶಿರಡಿ ಸಾಯಿ ಬಾಬಾ ಅವರನ್ನು ಪೂಜಿಸಲಾಗುತ್ತದೆ. ಅವರ ಕಾಲ ನಂತರವೂ ಭಕ್ತರಿಗೆ ವಿಧ ವಿಧವಾಗಿ ದರ್ಶನ ನೀಡಿ, ನೆರವಾಗುವ ಸಾಯಿ ಬಾಬಾ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳಿವು...

unknown facts about sai baba
Author
Bengaluru, First Published Nov 11, 2018, 2:43 PM IST

ಪ್ರತಿಯೊಬ್ಬರೂ ದೇವರನ್ನು ಆರಾಧಿಸುತ್ತ, ತಮ್ಮದೇ ನಂಬಿಕೆಯನ್ನು ಆಚರಿಸುತ್ತಾರೆ. ಅದರಲ್ಲಿಯೂ ಶಿರಡಿ ಸಾಯಿ ಬಾಬಾ ಭಕ್ತರು ಅಪಾರ. ನಂಬಿದವರನ್ನು ಬಾಬಾ ಕೈ ಬಿಡೋಲ್ಲ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇಂದ ದೇವ ಸ್ವರೂಪಿ ಬಾಬಾರ ಪವಾಡ ಹಾಗೂ ಜೀವನ ವಿಷಯಗಳು ನಿಮಗಾಗಿ...

  • ಹಿಂದು- ಮುಸ್ಲಿಮ್ ಎಂಬ ಧರ್ಮ ಭೇದವಿಲ್ಲದೇ  ಪೂಜಿಸುವ ಅವತಾರ ಪುರುಷ ಸಾಯಿ ಬಾಬಾ. ಇವರ ಆತ್ಮಚರಿತ್ರೆಯು ವಿವಿಧ ಭಾಷೆಗಳಿಗೆ ತರ್ಜುಮೆಗೊಂಡಿದೆ. 
  • 19ನೇ ಶತಮಾನದಿಂದೂ ಪವಾಡಗಳಿಂದಲೇ ಮನೆ ಮಾತಾಗಿದ್ದಾರೆ ಬಾಬಾ. ಪ್ರಾಣಿ ಪಕ್ಷಿಗಳಿಗೂ ಕರುಣೆ ತೋರುತ್ತಿದ ಬಾಬಾ ಅವರ ನೆಚ್ಚಿನ ಕುದುರೆ ಹೆಸರು ಶ್ಯಾಂ ಸುಂದರ್. 
  • 16ನೇ ವರ್ಷವಿದ್ದಾಗಲೇ ಬಾಬಾ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿರುವ ಶಿರಡಿಗೆ ಬಂದು ನೆಲೆಸಿದರು. ಆಗಿನಿಂದಲೇ ಹಲವು ಪವಾಡಗಳಿಂದಲೇ ಜನಪ್ರಿಯರಾದರು.
  • ದಿನದ ಊಟಕ್ಕೆ ಸಾಯಿ ಬಾಬಾ ಮನೆ ಮನೆಗೂ ಭಿಕ್ಷೆ ಬೇಡುತ್ತಿದ್ದರು. ಆಗ ನೆರೆಹೊರೆಯವರು ತಾವು ತಿನ್ನುತ್ತಿದ್ದ ಜುಂಕ್ ಭುಕಾರಿ (ಜೋಳದ ರೋಟಿ ) ಮಾಡಿಕೊಡುತ್ತಿದ್ದರು. 
  • ಬಾಬಾಗೆ ಮಕ್ಕಳೆಂದರೆ ಅಚ್ಚು- ಮೆಚ್ಚು. ಜಾತಿ ವರ್ಗ ನೋಡದೇ ಕಂಡ್ ಕಂಡ ಮಕ್ಕಳನ್ನೆಲ್ಲಾ ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಪ್ರೀತಿ ತೋರುತ್ತಿದ್ದರು. ಕೈಯಲ್ಲೊಂದು ಗುಲಾಬಿ ಹಿಡಿದು ಬಂದರೂ ಕೇಳಿದ್ದನ್ನು ಕೊಡುವ ದಯಾಳು ಈ ಬಾಬಾ. 
  • ಒಬ್ಬ ಮಹಿಳೆ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದು, ಯಾವ ವೈದ್ಯರ ಬಳಿ ಹೋದರೂ ಪರಿಹಾರ ಸಿಕ್ಕಿರಲಿಲ್ಲ. ಪತಿಯೊಂದಿಗೆ ಬಾಬಾ ಗುಡಿಗೆ ತೆರಳಿ, ಸಮಾಧಿ ಸುತ್ತಿದ್ದರು. ಕಣ್ಣಿನ ಸಮಸ್ಯೆ ಪರಿಹಾರವಾದರೆ ಶಾಲು ಒಪ್ಪಿಸುವುದಾಗಿಯೂ ಹರಕೆ ಹೊತ್ತಿದ್ದರು. ಪೂಜಿಸಲು ಶುರು ಮಾಡಿದ ಕೆಲವೇ ದಿನಗಳಲ್ಲಿ ಆಕೆ ಕಣ್ಣು ಸರಿ ಹೋಗಿತ್ತು. ಇಂಥ ಸಾವಿರಾರು ಪವಾಡ ಸದೃಶ ಕಥೆಗಳು ಬಾಬಾ ಭಕ್ತರ ಜೋಳಿಗೆಯಲ್ಲಿವೆ.
Follow Us:
Download App:
  • android
  • ios