ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಕರ್ಕಟಕ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಇಂದು ಸಮಾಧಾನದ ದಿನ, ಆದರೆ ಸ್ವಲ್ಪ ಹೃದಯ ಸಂಬಂಧೀ ಸಮಸ್ಯೆ ನಿಮ್ಮನ್ನು ಕಾಡಲಿದೆ. ಸ್ವಲ್ಪ ಭಾರವಾದ ವಸ್ತುಗಳನ್ನು ಎತ್ತುವ ಗೋಜಿಗೆ ಹೋಗಬೇಡಿ. ಉದ್ಯೋಗ ಸ್ಥಳದಲ್ಲಿ ಸ್ತ್ರೀಯರ ಸಹಾಯ. ಸಮಾಧಾನದ ದಿನ ನಿಮ್ಮದಾಗಲಿದೆ.

ದೋಷಪರಿಹಾರ : ಅನ್ನಪುರ್ಣೇಶ್ವರಿಗೆ ಕುಂಕುಮ ಸಮರ್ಪಣೆ ಮಾಡಿ

ವೃಷಭ : ನಿಮ್ಮ ರಾಶಿಯಿಂದ ತೃತೀಯ ಭಾವಕ್ಕೆ ಚಂದ್ರ ಹೋಗಿದ್ದಾನೆ ಹಾಗಾಗಿ ನಿಮ್ಮ ಸಹೋದರಿಯರಿಂದ ಸಹಾಯ ಅಥವಾ ತಾಯಿಯಿಂದ ಅನುಕೂಲ ಸಾಧ್ಯತೆ. ಗಂಟಲಲ್ಲಿ ಸ್ವಲ್ಪ ಕಿರಿಕಿರಿ. ಕಾಲಿಗೆ ಸ್ವಲ್ಪ ಪೆಟ್ಟುಬೀಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಿರತೆ.

ದೋಷ ಪರಿಹಾರ : ನವಗ್ರಹಗಳಿಗೆ ನಮಸ್ಕಾರ ಮಾಡಿ.

ಮಿಥುನ : ಆತ್ಮೀಯರೇ ನಿಮ್ಮ ರಾಶಿಯಿಂದ ಧನಸ್ಥಾನಕ್ಕೆ ಚಂದ್ರನ ಆಗಮನವಾಗಿದೆ. ಸ್ತ್ರೀಯರಿಂದ ಬಾಕಿ ಹಣ ಬರಲಿದೆ. ನೀರಿವ ವ್ಯಾಪಾರ, ಹಾಲು ವ್ಯಾಪಾರಿಗಳಿಗೆ ಶುಭದಿನವಾಗಿರಲಿದೆ. ನಿಮ್ಮ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು ಎಚ್ಚರವಹಿಸಿ.  

ದೋಷ ಪರಿಹಾರ : ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಕಟಕ : ಇಂದು ನಿಮ್ಮ ಪಾಲಿಗೆ ಉತ್ತಮ ದಿನ. ಸುಖ ಭೋಜನ ಪ್ರಾಪ್ತಿ. ನಿಮ್ಮ ಆಪ್ತರಿಂದ ಶುಭ ಸಮಾಚಾರ. ದೇಹದಲ್ಲಿ ಸ್ವಲ್ಪ ಬಾಧೆಯೂ ಕಾಡಲಿದೆ. ಉದ್ಯೋಗದಲ್ಲಿ ಪ್ರಯಾಸ ಕಡಿಮೆ. ನೆಮ್ಮದಿಯ ದಿನವಾಗಿರಲಿದೆ. 
  
ದೋಷ ಪರಿಹಾರ : ಸುಬ್ರಹ್ಮಣ್ಯ ಆರಾಧನೆ ಮಾಡಿ ಅಥವಾ ಓಂ ಷಡಾನನಾಯ ನಮ: ಮಂತ್ರವನ್ನು 16 ಬಾರಿ ಪಠಿಸಿ

ಸಿಂಹ : ಉತ್ತಮ ದಿನವಾಗಿರಲಿದೆ. ಆಲಸ್ಯ ನಿಮ್ಮನ್ನು ಕಾಡುತ್ತದೆ. ಇಂದು ನಿಮ್ಮ ಸಂಗಾತಿ ನಿಮ್ಮೊಡನೆ ಗುಟ್ಟಾದ ವಿಷಯ ಚರ್ಚೆ ಮಾಡಲಿದ್ದಾರೆ. ಸ್ವಲ್ಪ ಮನೋವ್ಯಥೆ ನಿಮ್ಮನ್ನು ಕಾಡುತ್ತದೆ. ಪ್ರಯಾಣಕ್ಕೆ ಸಿದ್ಧವಾಗಬೇಕಾದ ಅನಿವಾರ್ಯತೆ ಎದುರಾಗತ್ತೆ.

ದೋಷ ಪರಿಹಾರ : ಶಿವ ಧ್ಯಾನವೇ ಶುಭದಾಯಕ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಮನೆಯ ಪೂರ್ವ ದಿಕ್ಕಿಗಿರುವ ವಿಷ್ಣುದೇವಾಲಯಕ್ಕೆ ಹೋಗಿಬನ್ನಿ. ಅಲ್ಲಿ ತುಳಸಿ ಅರ್ಚನೆ ಮಾಡಿಸಿ.  ದೊಡ್ಡವರು ಹಣತಂದುಕೊಡಲಿದ್ದಾರೆ. ವಾಹನ ಸಂಚರಿಸುವಾಗ ಸ್ವಲ್ಪ ಜಾಗ್ರತೆ ಇರಲಿ. ಕುಟುಂಬದವರಿಂದ ಸ್ವಲ್ಪ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ.
  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ತುಲಾ :  ಆತ್ಮೀಯರೇ ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಸಮಾಧಾನದ ದಿನ. ಮಾತಿನ ಹಾಸ್ಯ-ಲಾಸ್ಯದ ದಿನ. ಉದ್ಯೋಗ ಸ್ಥಳದಲ್ಲಿ ಸರ್ಪ ದರ್ಶನ ಅಥವಾ ಸರ್ಪ ವಿಷಯ ಕಿವಿಗೆ ಬೀಳುವ ಸಾಧ್ಯತೆ ಇದೆ. ಮಕ್ಕಳಿಂದ ಅರ್ಧ ಸಂತೋಷ-ಅರ್ಧ ಸಮಸ್ಯೆ.

ದೋಷ ಪರಿಹಾರ : ನವಗ್ರಹ ಆರಾಧನೆ ಮಾಡಿ 

ವೃಶ್ಚಿಕ : ಆತ್ಮೀಯರೇ ನಿಮ್ಮ ಭಾಗ್ಯ ಸ್ಥಾನದಲ್ಲಿ ಚಂದ್ರನಿರುವುದರಿಂದ ಸ್ತ್ರೀಯರಿಂದ ಉಡುಗೊರೆ ಬರುವ ಸಾಧ್ಯತೆ ಇದೆ. ಆದರೆ ನಿಮ್ಮ ಹಣ ವ್ಯಯವಾಗುವ ಸಾಧ್ಯತೆಯೂ ಇದೆ. ಸಾಧನೆಯಲ್ಲಿ ಸ್ವಲ್ಪ ತೊಡಕು ಉಂಟಾಗಬಹುದು. ಗಣಪತಿ ಆರಾಧನೆ ಮಾಡಿ 

ದೋಷ ಪರಿಹಾರ : ಸಾಧ್ಯವಾದರೆ ಅಥರ್ವಶೀರ್ಷ ಮಂತ್ರಪಾರಾಯಣ ಮಾಡಿ

ಧನಸ್ಸು : ಸ್ನೇಹಿತರೇ ಇಂದು ನಿಮ್ಮ ಪಾಲಿಗೆ ಅನಾರೋಗ್ಯದ ದಿನ, ಸ್ವಲ್ವ ದೇಹ ಬಾಧೆಯನ್ನು ಅನುಭವಿಸಲಿದ್ದೀರಿ. ಇಂದು ಸ್ವಲ್ಪ ದಾಂಪತ್ಯದಲ್ಲಿ ಕಿರಿಕಿರಿಯಾಗುವ ಸಾಧ್ಯತೆ ಇದೆ. ನಿಮ್ಮ ಮಡದಿ ಮನೆಯವರ ಆಗಮನ ನಿಮ್ಮಲ್ಲಿ ಹಿಂಸೆ ಉಂಟುಮಾಡಬಹುದು. ಸಮಾಧಾನವಿರಲಿ.

ದೋಷ ಪರಿಹಾರ : ಶಿವ-ಪಾರ್ವತಿಯರ ದರ್ಶನ ಮಾಡಿ

ಮಕರ :  ಆತ್ಮೀಯರೇ ಇಂದು ನಿಮ್ಮ ಮಡದಿಯಿಂದ ಸಹಾಯ. ದಿಢೀರ್ ಪ್ರಯಾಣ ಸಾಧ್ಯತೆ ಇದೆ. ಸ್ತ್ರೀಯರಿಂದ ಸ್ವಲ್ಪ ಸಮಸ್ಯೆ ಎದುರಾಗಬಹುದು. ಉದ್ಯೋಗಕ್ಕರೆ ಹೋಗುವವರಿಗೆ ಶುಭದಿನವಾಗಿರಲಿದೆ. 
  
ದೋಷ ಪರಿಹಾರ : ನವಗ್ರಹ ಆರಾಧನೆ ಮಾಡಿ ಅಥವಾ ನವಧಾನ್ಯ ದಾನ ಮಾಡಿ

ಕುಂಭ : ಇಂದು ನಿಮ್ಮ ಆರೋಗ್ಯ ಸದೃಢವಾಗಲಿದೆ. ಶತ್ರುಗಳೂ ಕೂಡ ಮಿತ್ರರಂತೆ ಕಾಣುತ್ತಾರೆ. ನಿಮ್ಮ ಸಂಗಾತಿ ಸ್ವಲ್ಪ ಕೋಪ ಮಾಡಿಕೊಳ್ಳುವ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ. ಕೆಲಸ ವಿಳಂಬವಾಗಿ ಮನಸಿಕ ನೋವು.  

ದೋಷ ಪರಿಹಾರ : ಶಿವನಿಗೆ ಭಸ್ಮ ಅಭಿಷೇಕ ಮಾಡಿಸಿ 
  
ಮೀನ : ಇಂದು ನಿಮ್ಮ ಪಾಲಿಗೆ ಉತ್ತಮ ದಿನ. ಮಕ್ಕಳಿಂದ ಸಹಾಯ, ಹೆಣ್ಣುಮಕ್ಕಳಿಂದ ಸಹಾಯ ಹಸ್ತ. ನೀವು ಊಹಿಸಿರದವರಿಂದ ಒಂದು ವಿಶೇಷ ಉಡುಗೊರೆ ಸಿಗಲಿದೆ. ಉದ್ಯೋಗದಲ್ಲೂ ಉತ್ತಮ ಸನುಕೂಲ ಹಾಗೂ ಸ್ವಲ್ಪ ಕಿರಿಕಿರಿ ಇದೆ. ಲಾಭಾಲಾಭ ಎರಡೂ ಇದೆ.  
  
ದೋಷ ಪರಿಹಾರ : ಕುಲದೇವರ ಆರಾಧನೆ ಮಾಡಿ

ಗೀತಾಸುತ.