ಇಂದು ಈ ರಾಶಿಯವರಿಗೆ ಕಾಡಲಿದೆ ಸಂಕಷ್ಟ : ಪರಿಹಾರವೇನು..?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 12, Jul 2018, 7:07 AM IST
Special Bhavishya July 12
Highlights

ಚಂದ್ರನು ಇಂದು ಮಿಥುನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಆತ್ಮೀಯರೇ ಇಂದು ಸ್ವಲ್ಪ ಮಟ್ಟಿಗೆ ಅಸಮಧಾನದ ದಿನ, ಸುಖಾಧಿಪತಿ ಕಳಾ ಹೀನನಾಗಿ ರವಿಯುತನಾಗಿದ್ದಾನೆ. ಮನಸ್ಸಿಗೆ ಖಿನ್ನತೆ ಕಾಡಲಿದೆ. ಕಾರ್ಯದಲ್ಲಿ ಬೇಸರ. ಅದೃಷ್ಟ ಹೀನರಾಗಿ ವಂಚಿತರಾಗುವ ಸಮಯ. ಇಂದು ನೀವು ಯಾವುದೇ ರಿಸ್ಕ್ ಸ್ವೀಕರಿಸಬೇಡಿ.

ದೋಷಪರಿಹಾರ : ಒಂದು ತಂಬಿಗೆ ತುಂಬ ಹಾಲನ್ನು ತುಂಬಿ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕೊಟ್ಟುಬನ್ನಿ.

ವೃಷಭ : ಇಂದು ನಿಮ್ಮ ಪಾಲಿಗೆ ಧನ ನಷ್ಟ. ಬೇಡದ ಕಾರಣಕ್ಕೆ ಹಣವ್ಯಯ ಮಾಡಿಕೊಂಡು ಕೊರಗುತ್ತೀರಿ. ಸ್ವಲ್ಪ ಕಾಲಿನ ಭಾಗಕ್ಕೆ ಗಾಯ ಮಾಡಿಕೊಳ್ಳುತ್ತೀರಿ. ನಿಮ್ಮ ದಿನ ಸ್ವಲ್ಪ ಸುಖ-ದು:ಖ ಮಿಳಿತವಾರಿರಲಿದೆ. ಜಾಗ್ರತೆಯಿಂದ ದಿನವನ್ನ ನಿಭಾಯಿಸಿ. 

ದೋಷ ಪರಿಹಾರ : ಇಂದು ಸೂರ್ಯ ಪ್ರಾರ್ಥನೆ ಹಾಗೂ ಚಂದ್ರ ಪ್ರಾರ್ಥನೆ ಮಾಡಿ.

ಮಿಥುನ : ಇಂದು ನಿಮ್ಮ ರಾಶ್ಯಾಧಿಪತಿ ಧನಸ್ಥಾನದಲ್ಲಿದ್ದು ಧನಾಧಿಪತಿ ನಿಮ್ಮ ರಾಶಿಯಲ್ಲಿ ಕಳಾಹೀನನಾಗಿರುವುದರಿಂದ ಧನ ನಷ್ಟ ಸಂಭವ. ನಿಮ್ಮ ಆರೋಗ್ಯಕ್ಕಾಗಿ, ನಿಮ್ಮ ಶರೀರ ಸೌಖ್ಯಕ್ಕಾಗಿ ಧನ ವ್ಯಯವಾಗುತ್ತದೆ. ಸಹೋದರರ ಸಲುವಾಗಿಯೂ ಧನ ನಷ್ಟವಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಮನೆಯಲ್ಲಿ ಮಡದಿಯೊಟ್ಟಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಸಮಾಧಾನವಿರಲಿ

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸ್ಮರಣೆ ಮಾಡಿ

ಕಟಕ : ಪ್ರಿಯರೇ ಇಂದು ನಿಮ್ಮ ಪಾಲಿದೆ ಸಾಲದ ದಿನ. ಸಾಲ ಮಾಡಿ ಹಣ ಕಳೆದುಕೊಳ್ಳುವ ದಿನ. ಕಾರಣ ನಿಮ್ಮ ಧನಾಧಿಪತಿ ಚಂದ್ರನೊಟ್ಟಿಗೆ ವ್ಯಯದಲ್ಲಿದ್ದಾನೆ ಜೊತೆಗೆ ಷಷ್ಟದಲ್ಲಿ ಶನಿ ಇದ್ದಾನೆ. ಇವೆಲ್ಲವೂ ನಿಮ್ಮ ಮನೋಬಲವನ್ನು ಕುಗ್ಗಿಸಲಿದೆ. ಜಾಗ್ರತೆ ಇರಲಿ. ಆರೋಗ್ಯದಲ್ಲೂ ಗಮನವಿರಲಿ.
  
ದೋಷ ಪರಿಹಾರ : ಶನಿ ಹಾಗೂ ಸೂರ್ಯ, ಚಂದ್ರರ ಆರಾಧನೆ ಮಾಡಿ

ಸಿಂಹ : ಆತ್ಮೀಯರೇ, ಇಂದು ನಿಮ್ಮ ಹತ್ತಿರದ ಬಂಧುಗಳಿಂದ ನಿಮ್ಮ ಹಣ-ಸಮಯ ವ್ಯರ್ಥವಾಗಲಿದೆ. ಮಕ್ಕಳಿಂದ ಸ್ವಲ್ಪ ಕೆಲಸ ಜಾಸ್ತಿ ಆಯ್ತೇನೋ ಅನ್ನುವ ಭಾವನೆ ಮೂಡುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಹೊರೆ ಅದು ನಿಮಗೂ ಹೊರೆಯಾಗಲಿದೆ. ಮಕ್ಕಳ ಪರವಾಗಿ ನೀವೇ ಶ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಒದಗಲಿದೆ. 

ದೋಷ ಪರಿಹಾರ : ಶನಿ ಪ್ರಾರ್ಥನೆ, ಎಳ್ಳು ದಾನ ಮಾಡಿ.

ಕನ್ಯಾ : ಆತ್ಮೀಯ ಮಿತ್ರರೇ ನಿಮ್ಮ ಉದ್ಯೋಗದಲ್ಲಿ ಹೆ್ಚು ಗಮನವಹಿಸಬೇಕಾಗುತ್ತದೆ. ನಿಮ್ಮ ಅಕ್ಕಪಕ್ಕದ ಸ್ತ್ರೀಯರು ನಿಮ್ಮನ್ನು ಕಾಡಬಹುದು. ಸ್ವಲ್ಪ ಮಟ್ಟಿಗೆ ಸುಖ ಭೋಜನವಿರಲಿದೆ. ಸಾಲ ಕೇಳಿಕೊಂಡು ಬರುವವರನ್ನು ಎದುರಿಸಬೇಕಾಗುತ್ತದೆ.
  
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ 

ತುಲಾ :  ಪ್ರಿಯರೇ, ನಿಮ್ಮದು ಇಂದು ಅದೃಷ್ಟ ಹೀನದಿನ. ಬಂದ ಸೌಭಾಗ್ಯ ಬಾಗಿಲಲ್ಲೇ ನಷ್ಟವಾಗುವ ಕಾಲ. ಹೆಚ್ಚು ಕೂಡಿಡಲು ಪ್ರಯತ್ನಿಸಬೇಡಿ. ನಿಮ್ಮ ಮನೆಯಲ್ಲಿ ಹಿರಿಯರು ನಿಮ್ಮ ಮಾತಿಗೆ ಅಡ್ಡಿ ಮಾಡಬಹುದು. ಆದರೆ ಅದರಿಂದ ಅನುಕೂಲವಿದೆ.   

ದೋಷ ಪರಿಹಾರ : ಲಲಿತಾಸಹಸ್ರನಾಮ ಪಠಿಸಿ ಅಥವಾ ಕೇಳಿಸಿಕೊಳ್ಳಿ. 

ವೃಶ್ಚಿಕ : ನಿಮ್ಮ ಸುಖಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲೂ ಕೊಂಚ ವ್ಯತ್ಯಾಸವಾಗಲಿದೆ. ಮಕ್ಕಳು ನಿಮ್ಮನ್ನು ಕಾಡಲಿದ್ದಾರೆ. ಅವರಿಗಾಗಿ ನೀವು ಶ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಮಾಧಾನವಾಗಿದ್ದರೆ ಒಳಿತು.

ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಅಥವಾ ಪ್ರಾರ್ಥನೆ ಮಾಡಿ 

ಧನಸ್ಸು : ಪ್ರಿಯರೇ ನಿಮ್ಮ ಮನೆಯಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಗಂಡ ಹೆಂಡಿರಲ್ಲಿ ಮಾನಸಿಕ ಅಸಮಧಾನ ಕಾಡುವ ಸಾಧ್ಯತೆ ಇದೆ. ಮಾತಿನಲ್ಲಿ ಸ್ವಲ್ ಹಿಡಿತವಿರಲಿ. ಈಗೋ ಅಂದರೆ ನಿಮ್ಮ ಅಹಂಕಾರವೇ ನಿಮ್ಮನ್ನು ಬಲಿತೆಗೆದುಕೊಳ್ಳುವ ಸಾಧ್ಯತೆ ಇದೆ. ಎಚ್ಚರವಾಗಿರಿ. 

ದೋಷ ಪರಿಹಾರ : ಚಂದ್ರೋಪಾಸನೆ ಇಲ್ಲ ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಕರ :  ಪ್ರಿಯರೇ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದೆ. ನಿಮ್ಮ ಸಂಗಾತಿಗೂ ಆರೋಗ್ಯ ಸಮಸ್ಯೆ ಕಾಡಲಿದೆ. ನರ ದೌರ್ಬಲ್ಯ, ಅಥವಾ ಕಾಲು ನೋವಿನ ಬಾಧೆ ಕಾಡಲಿದೆ. ಸ್ವಲ್ಪ ವೈದ್ಯರ ಸಲಹೆ ಪಡೆಯಿರಿ. 
  
ದೋಷ ಪರಿಹಾರ : ನಾಗ ದೇವರ ಆರಾಧನೆ ಮಾಡಿ. ಅಥವಾ ಹುರುಳಿಕಾಳನ್ನು ದಾನ ಮಾಡಿ

ಕುಂಭ :  ಸ್ನೇಹಿತರೇ, ಪುಟ್ಟ ಮಕ್ಕಳು ನಿಮಗೆ ಅಡ್ಡಿ ಮಾಡುವ ಸಾಧ್ಯತೆ ಇದೆ.  ನಿಮ್ಮ ಸಂಗಾತಿ ಮಕ್ಕಳೊಂದಿಗೆ ಸೇರಿ ನಿಮಗೆ ಕಿರಿಕಿರಿ ಮಾಡುವ ಸಾಧ್ಯತೆಯೂ ಇದೆ. ಇಂದು ಶಿವ ಸಹಿತ ಅಮ್ಮನವರ ದೇವಸ್ಥಾನಕ್ಕೆ ಭೇಟಿಕೊಡುವ ಸಾಧ್ಯತೆ ಇದೆ. ಇಂದು ನಿಮ್ಮ ಮನಸ್ಸು ಸ್ವಲ್ಪ ಏರಿಳಿತವನ್ನು ಕಾಣಬಹುದು.

ದೋಷ ಪರಿಹಾರ : ದೇವಿ ಪ್ರಾರ್ಥನೆ ಮಾಡಿ 
  
ಮೀನ : ಮಿತ್ರರೇ, ಇಂದು ನಿಮ್ಮ ಸುಖದಲ್ಲಿ ತೊಂದರೆ, ವಾಹನದಲ್ಲಿ ಸ್ವಲ್ಪ ಏರುಪೇರು. ರಸ್ತೆಯಲ್ಲಿ ಸಾಗುವಾಗ ಜಗಳವಾಗುವ ಸಾಧ್ಯತೆ ಇದೆ. ಸ್ತ್ರೀಯರು ಗಾಡಿ ಓಡಿಸುವಾಗ ಜಾಗರೂಕವಾಗಿರಬೇಕು.  
  
ದೋಷ ಪರಿಹಾರ : ಶ್ರೀನಿವಾಸ ದೇವರ ದರ್ಶನ ಮಾಡಿ

ಗೀತಾಸುತ.

loader