ಹಬ್ಬದ ಸಂಭ್ರಮದಲ್ಲಿರೋ ಎಲ್ಲರ ಭವಿಷ್ಯ ಹೇಗಿದೆ?

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಆಶ್ವೀಜ ಮಾಸ
ಕೃಷ್ಣ ಪಕ್ಷ
ಚತುರ್ದಶಿ ತಿಥಿ
ಚಿತ್ತ ನಕ್ಷತ್ರ 

ರಾಹುಕಾಲ  02.57 ರಿಂದ 04.24
ಯಮಗಂಡ ಕಾಲ  09.09 ರಿಂದ 10.36
ಗುಳಿಕ ಕಾಲ  12.03 ರಿಂದ 01.30

ಮೇಷ ರಾಶಿ :  ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ, ವ್ಯಾಪಾರದಲ್ಲಿ ಉತ್ತಮ ಲಾಭ, ಪಾಲುದಾರರಿಂದ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮ ಶಕ್ತಿ ಕುಂದುವ ಸಾಧ್ಯತೆ ಇದೆ. ಸೂರ್ಯನ ಆರಾಧನೆ ಮಾಡಿ.
ದೋಷಪರಿಹಾರ : ಆದಿತ್ಯ ಹೃದಯ ಪಠಿಸಿ ಅಥವಾ ಕೇಳಿಸಿಕೊಳ್ಳಿ

ವೃಷಭ : ವ್ಯಾಪಾರ ವ್ಯವಹಾರಗಳಲ್ಲಿ ಅತ್ಯುತ್ತಮ ಲಾಭ, ಪಾಲುದಾರಿಕೆಯಲ್ಲಿ ಹೊಂದಾಣಿಕೆ, ಉತ್ತಮ ಯೋಗದ ದಿನವಾಗಿರಲಿದೆ, ಲೋಹ ವ್ಯಾಪಾರಿಗಳಿಗೆ, ಅಗ್ನಿ ಸಂಬಂಧಿ ವ್ಯಾಪಾರಿಗಳಿಗೆ ಉತ್ತಮ ದಿನ.     
ದೋಷ ಪರಿಹಾರ : ಶುಕ್ರಗ್ರಹ ಶಾಂತಿ ಮಾಡಿಸಿ, ಅಥವಾ ದೇವಿ ದೇವಸ್ಥಾನಕ್ಕೆ ಬಿಳಿ ವಸ್ತ್ರ ದಾನ ಮಾಡಿ.

ಮಿಥುನ : ಈಶಾನ್ಯ ದಿಕ್ಕಿನಿಂದ ಬರುವವರು ನಿಮ್ಮ ವ್ಯಾಪಾರ ವೃದ್ಧಿಗೆ ತೊಡಕು ಉಂಟುಮಾಡುತ್ತಾರೆ, ಹೊರಗಿನ  ಊಟ ನಿಮ್ಮ ಆರೋಗ್ಯ ವ್ಯತ್ಯಯಕ್ಕೆ ಕಾರಣವಾಗಬಹುದು. ಬಲಗಿವಿಯಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ನೀರಿನ ವಿಷಯದಲ್ಲಿ ಜಾಗ್ರತೆ ಇರಲಿ.
ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ವಸ್ತ್ರದಾನ ಮಾಡಿ

ಕಟಕ : ಸ್ವಲ್ಪ ಕಹಿಯಾದ ವರ್ತಮಾನ ಕಿವಿಗೆ ಬೀಳಲಿದೆ, ನಿಮ್ಮ ದೃಷ್ಟಿಯಲ್ಲಿ ಹಾಗೂ ಕಂಠ ಭಾಗದಲ್ಲಿ ತೊಂದರೆಯಾಗಬಹುದು. ಸೋದರಿಕೆ ಬಂಧುಗಳಿಂದ ಸ್ವಲ್ಪ ಸಮಸ್ಯೆ ಉಂಟಾಗಲಿದೆ. ಮಾತನಾಡುವಾಗ ಎ್ಚರಿಕೆ ಇರಲಿ. 
  
ದೋಷ ಪರಿಹಾರ : ಲಕ್ಷ್ಮೀ ಸಹಿತ ಶ್ರೀನಿವಾಸ ದರ್ಶನ ಮಾಡಿ.

ಸಿಂಹ : ಸಂತಾನದಲ್ಲಿ ದೋಷ, ಬುದ್ಧಿಯಲ್ಲಿ ವಿಕಾರ ಉಂಟಾಗಲಿದೆ, ಭವಿಷ್ಯದ ಬಗ್ಗೆ ಹೆಚ್ಚು ಆತಂಕರಾಗಬೇಡಿ, ಶಕ್ತಿ ಕುಂದುವ ಸಾಧ್ಯತೆ ಇದೆ. ಸೂರ್ಯೋಪಾಸನೆಯೇ ನಿಮ್ಮ ಧೀ ಶಕ್ತಿಯನ್ನು ವೃದ್ಧಿಸಲಿದೆ.  

ದೋಷ ಪರಿಹಾರ : ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ : ಕಟ್ಟಡ ಕಟ್ಟುವ ಜಾಗದಲ್ಲಿ ತೊಂದರೆ, ತಾಯಿ ಆರೋಗ್ಯದಲ್ಲಿ ತೊಂದರೆ, ಪಶುಗಳಿಗೆ ತೊಂದರೆ, ವಾಹನಕ್ಕೆ ಅವಘಡ ಸಂಭವ, ವಿಮಾನ ಯಾನಕ್ಕೆ ಸಹೋದರರ ಸಹಾಯ, ಮಕ್ಕಳಿಂದ ಸಹಾಯದ ದಿನ. 
  
ದೋಷ ಪರಿಹಾರ : ವಿಷ್ಣುವಿಗೆ ತುಳಸಿ ಪತ್ರೆ ಸಮರ್ಪಿಸಿ.

ತುಲಾ :  ಕ್ಲೇಶ ನಿವಾರಣೆ, ಗುರುಗಳ ಅನುಗ್ರಹ ದೊರೆಯಲಿದೆ, ಜಪ ಅನುಷ್ಠಾನಗಳಲ್ಲಿ ಆಸಕ್ತಿ, ಮಾನಸಿಕವಾಗಿ ಖಿನ್ನತೆ, ಅನುಕೂಲವೂ ಇದೆ. ಧನಲಾಭ, ಅನ್ನ ಸಮೃದ್ಧಿ, ಕುಟುಂಬದಲ್ಲಿ ಹೊಂದಾಣಿಕೆ ಇರಲಿದೆ.

ದೋಷ ಪರಿಹಾರ : ಔದುಂಬರ ವೃಕ್ಷಕ್ಕೆ 5 ಪ್ರದಕ್ಷಿಣೆ ಹಾಕಿ. 

ವೃಶ್ಚಿಕ :  ಎದೆ ಭಾಗದಲ್ಲಿ ಸ್ವಲ್ಪ ತೊಂದರೆಯಾಗಬಹುದು, ಬಲಗಿವಿಯಲ್ಲೂ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಕ್ಷೇತ್ರ-ನಿವೇಶನಗಳಲ್ಲಿ ಸ್ವಲ್ಪ ಮೋಸಹೋಗುವ ಸನ್ನಿವೇಶ. ಅತ್ಯಂತ ಜಾಗ್ರತೆಯಿಂದ ಇರುವುದು ಒಳ್ಳೇದು. 

ದೋಷ ಪರಿಹಾರ : ಭೂವರಾಹ ಶಾಂತಿ ಅಥವಾ ಯಂತ್ರ ಮಾಡಿಸಿಕೊಳ್ಳಿ  

ಧನಸ್ಸು :  ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ವಿವೇಕ ಶೂನ್ಯವಾಗಿ ಫಲ ಕೈತಪ್ಪಿಹೋಗಲಿದೆ, ನಿಮ್ಮ ಕಷ್ಟಕ್ಕೆ ಯಾರೂ ಸಹಾಯಕ್ಕೆ ಬರದಂತಾಗಬಹುದು. ಆದರೆ ಗುರುಗಳ ಅನುಗ್ರಹಬಿದ್ದಾಗ ಎಲ್ಲವೂ ಸರಿಹೋಗಲಿದೆ. ಹಾಗಾಗಿ ಗುರು ದರ್ಶನ ಅಥವಾ ಗುರು ಸೇವೆ ಮಾಡಿ. 

ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ

ಮಕರ :  ನೀವು ಬಯಸಿದ್ದು ತಪ್ಪಿಹೋಗುವ ಸಾಧ್ಯತೆ ಇದೆ. ಅಂದುಕೊಂಡದ್ದು ಕೈಗೆಟುಕುವುದಿಲ್ಲ. ಉಪಕಾರಕ್ಕೆ ಅಪಕಾರ ಎದುರಾಗಬಹುದು. ನಿಮ್ಮ ಕಷ್ಟಗಳಿಗೆ ಸ್ಪಂದನೆ ಸಿಗಬೇಕಾದರೆ ತೀರ್ಥ ಸ್ನಾನ ಮಾಡಿ. 
  
ದೋಷ ಪರಿಹಾರ : ಶ್ರೀಧರ ಸ್ವಾಮಿಗಳ ದರ್ಶನ ಮಾಡಿ. ಕ್ಷೇತ್ರ ದರ್ಶನವೂ ಶುಭವೇ. 

ಕುಂಭ :   ನಿಮ್ಮ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಹೊಸ ಕಾರ್ಯಗಳು ನಿಮ್ಮನ್ನು ಅರಸಿ ಬರುತ್ತವೆ. ಉತ್ತಮ ಸಹಕಾರ ದೊರೆಯುತ್ತದೆ. ನಿಮ್ಮ ವ್ಯಾಪಾರ, ಪ್ರಯಾಣದಲ್ಲಿ ಅನುಕೂಲವಿದೆ.   

ದೋಷ ಪರಿಹಾರ : ಶನಿ ಪ್ರಾರ್ಥನೆ ಮಾಡಿ
  
ಮೀನ : ನಿಮ್ಮ ಕಾರ್ಯ ಸ್ಥಳದಲ್ಲಿ ಅನುಕೂಲ, ಯಾವ ಕಾರ್ಯ ಅಸಾಧ್ಯವೋ ಅದೆಲ್ಲವೂ ಸಾಧ್ಯವಾಗುವ ಕಾಲ ಸನ್ನಿಹಿತವಾಗಿದೆ. ಅನ್ಯರಿಂದ ಉಪಯೋಗವಾಗಲಿದೆ.   
  
ದೋಷ ಪರಿಹಾರ : ಗಾಣಗಾಪುರಕ್ಕೆ ಹೋಗಿಬನ್ನಿ. 

ವಾಞ್ಮಯೀ.