ಈ ರಾಶಿಗೆ ಧನ ಸಮೃದ್ಧಿಯ ದಿನ : ಉಳಿದ ರಾಶಿ ಹೇಗಿದೆ..?

03-12-18 - ಮಂಗಳವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ದ್ವಾದಶಿ
ಸ್ವಾತಿ

ರಾಹುಕಾಲ : 03.00 ರಿಂದ 04.26
ಯಮಗಂಡ ಕಾಲ : 09.19 ರಿಂದ 10.45
ಗುಳಿಕ ಕಾಲ : 12.10 ರಿಂದ 01.35

ಮೇಷ ರಾಶಿ : ಮನೆಯಲ್ಲಿ ಸಂಗಾತಿಯಿಂದ ಕಲಹ, ಎರಡು ವಿಷಯಗಳಿಗೆ ಅಥವಾ ಸ್ತ್ರೀ ವಿಷಯವಾಗಿಯೇ ಕಲಹಗಳಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು, ಆದರೆ ಶೀಘ್ರ ಗುಣಮುಖರಾಗುತ್ತೀರಿ. 

ದೋಷಪರಿಹಾರ : ಅನ್ನಪೂರ್ಣೇಶ್ವರಿ ಧ್ಯಾನ ಮಾಡಿ

ವೃಷಭ : ಸ್ತ್ರೀ ವಿರೋಧಕಟ್ಟಿಕೊಳ್ಳಬೇಕಾದ ಸಮಯ ಎದುರಾಗುತ್ತದೆ. ನಿಮ್ಮ ಸಂಗಾತಿಯಿಂದ ಬೋಧನೆ, ಉದ್ಯೋಗದಲ್ಲಿ ಕಟುಮಾತು ಕೇಳಬೇಕಾಗುತ್ತದೆ, ಶತ್ರುಗಳ ಕಾಟವೂ ಇರಲಿದೆ, ಸಮಾಧಾನ ಇರಲಿ. 

ದೋಷ ಪರಿಹಾರ : ದುರ್ಗಾದೇವಿಗೆ ದೀಪ ಸಮರ್ಪಣೆ ಮಾಡಿ

ಮಿಥುನ : ಶತ್ರಗಳೇ ಮಿತ್ರರಾಗಲಿದ್ದಾರೆ, ತಂದೆಯಿಂದ ಮನಸ್ಸಿಗೆ ಬೇಸರ, ನಿಮ್ಮ ವ್ಯಾಪಾರದಲ್ಲಿ ಅಮನಸ್ತಾಪದಿಂದ ಲಾಭ ನಷ್ಟ, ನಿಮ್ಮ ಕುಟುಂಬದವರಲ್ಲಿ ಭಿನ್ನಾಭಿಪ್ರಾಯ, ಉದ್ಯೋಗದಲ್ಲಿ ಹಿರಿಯರಿಂ ಕಿರಿಕಿರಿ, ಆದರೆ ಸಮಾಧಾನವೂ ಸಿಗಲಿದೆ. 

ದೋಷ ಪರಿಹಾರ : ಶ್ರೀನಿವಾಸ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿಸಿ

ಕಟಕ : ವಾಹನದಲ್ಲಿ ಸಂಚರಿಸುವಾಗ ಕಿರಿಕಿರಿ ಅನುಭವಿಸುತ್ತೀರಿ, ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳ ಮಧ್ಯೆ ಸ್ವಲ್ಪ ಕಲಹಗಳಾಗುವ ಸಾಧ್ಯತೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ದಿನವಾಗಿರಲಿದೆ. 
  
ದೋಷ ಪರಿಹಾರ : ಶ್ರೀಸೂಕ್ತ ಮಂತ್ರ ಪಠಿಸಿ

ಸಿಂಹ : ನಿಮ್ಮ ಗೃಹದಲ್ಲಿ ಮೂರುಜನರಿಂದ ವಾಗ್ವಾದ, ಹಿರಿಯರ ಮಾತು ನಡೆಯುವುದಿಲ್ಲ, ನಿಮ್ಮ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ, ಉದ್ಯೋಗ ಕ್ಷೇತ್ರದಲ್ಲೇ ಆರೋಗ್ಯ ಕೆಡುವ ಸಾಧ್ಯತೆ ಇದೆ. ಎಚ್ಚರ ವಹಿಸಿ.  

ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ 

ಕನ್ಯಾ : ಸ್ತ್ರೀಯರಿಂದ ಧನ ಸಂಪಾದನೆ, ಸುಖ ಭೋಜನ ಪ್ರಾಪ್ತಿ, ಕುಟುಂಬದಲ್ಲಿ ಹೆಣ್ಣುಮಕ್ಕಳ ಪಾರುಪತ್ಯದಿಂದ ಬೇಸರ ಸಾಧ್ಯತೆ, ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹಿರಿಯರ ಸಹಾಯ, ಸ್ವಲ್ಪ ಮಟ್ಟಿಗೆ ಒಳ ಜಗಳಗಳೂ ಇವೆ. 
  
ದೋಷ ಪರಿಹಾರ :  ವೆಂಕಟೇಶ್ವರನಿಗೆ ಕೊಬ್ಬರಿ ತುಲಾಭಾರ ಮಾಡಿಸಿ 

ತುಲಾ :  ಹೆಣ್ಣುಮಕ್ಕಳಿಗೆ ಉತ್ತಮ ದಿನ, ಸ್ತ್ರೀಯರು ಕೈಗೊಳ್ಳುವ ನಿರ್ಧಾರ ಊರ್ಜಿತವಾಗುತ್ತದೆ, ಕುಟುಂಬದವರ ಸಹಕಾರ, ಉತ್ತಮ ದಿನವಾಗಿರಲಿದೆ, ಮಂಗಳಕಾರ್ಯದಲ್ಲಿ ಭಾಗಿಯಾಗುವ ದಿನ.

ದೋಷ ಪರಿಹಾರ : ಲಕ್ಷ್ಮೀ ದೇವಸ್ಥಾನಕ್ಕೆ ಹಾಲು ಸಮರ್ಪಣೆ ಮಾಡಿ 

ವೃಶ್ಚಿಕ : ನಿಮ್ಮ ಕುಟುಂಬದಲ್ಲಿ ವಾಗ್ವಾದಗಳಾಗುವ ಸಾಧ್ಯತೆ, ಬಿರುಸು ಮಾತಿನಿಂದ ನಿಮಗೆ ತೊಂದರೆಯಾಗುವ ಸಾಧ್ಯತೆ, ವಾಹನದಲ್ಲಿ ಹೊಲ, ಗದ್ದೆಗಳ ಜಾಗದಲ್ಲಿ ತೊಂದರೆಯಾಗುವ ಸಾಧ್ಯತೆ.     

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು :  ಸಹೋದರರಿಂದ ಕಾರ್ಯಗಳಿಗೆ ಅಡೆತಡೆ, ಮನೆಯಲ್ಲಿ ಕಾರ್ಯಗಳಿಗೆ ವಿಘ್ನ, ನಿಮ್ಮ ಮಾತು ಮನೆಯಲ್ಲೂ ಊರ್ಜಿತವಾಗುವುದಿಲ್ಲ. ಮಾನಸಿಕ ಬೇಸರ, ಅಸಮಧಾನ ಕಾಡಲಿದೆ.   

ದೋಷ ಪರಿಹಾರ : ಕಡಲೆ ದಾನ ಮಾಡಿ 

ಮಕರ :  ಇಂದು ಶತ್ರುಗಳಿಂದ ಧನವ್ಯಯ, ಕುಟುಂಬದವರಿಗೆ ಆರೋಗ್ಯ ವ್ಯತ್ಯಯ, ಇಂದು ಓರ್ವ ಸ್ತ್ರೀಯಿಂದ ಸೌಭಾಗ್ಯ ಯೋಗ್ಯ, ನಿಮ್ಮ ಮನಸ್ಸಿಗೆ ಸಂತೋಷವೂ ಸಿಗಲಿದೆ, ಹಳೆ ಮಿತ್ರರ ಸಂಗಮ.   
  
ದೋಷ ಪರಿಹಾರ : ರುದ್ರ ಮಂತ್ರ ಪಠಿಸಿ

ಕುಂಭ : ಅನುಕೂಲದ ದಿನ, ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯ,  ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ, ನಿಮ್ಮ ಮಾತಿಗೆ ಯಾರೂ ಮರು ಮಾತನಾಡುವುದಿಲ್ಲ, ಧನಾಗಮನ, ಸಹೋದರರ ಸಹಾಯವೂ ಇದೆ.

ದೋಷ ಪರಿಹಾರ : ಶ್ರೀಚಕ್ರ ಪೂಜೆ ಮಾಡಿ
  
ಮೀನ  : ಉತ್ತಮರ ಸಂಗ, ಪ್ರಧಾನ ಕಾರ್ಯಕ್ಕೆ ಚಾಲನೆ, ಸೌಭಾಗ್ಯ ಯೋಗ ಲಭಿಸಲಿದೆ, ನಿಮ್ಮ ಉದ್ಯೋಗದಲ್ಲೂ ನಿಮಗೆ ಅನುಕೂಲ, ಕೋರ್ಟು ಕಚೇರಿ ವಿಷಯದಲ್ಲಿ ಸ್ವಲ್ಪ ಅನಾನುಕೂಲ, ಆದರೆ ನಿಮಗೆ ಅನುಕೂಲದ ದಿನವೇ ಆಗಿರಲಿದೆ.   
  
ದೋಷ ಪರಿಹಾರ : ಹಸುವಿನ ಸೇವೆ ಮಾಡಿ


ವಾಞ್ಮಯೀ.