ಈ ರಾಶಿಗೆ ಶುಭವಿಚಾರ ಸಿಗುವ ದಿನ : ಉಳಿದ ರಾಶಿ ಹೇಗಿದೆ..?

8-11-18 - ಬುಧವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ಪುಷ್ಯ ನಕ್ಷತ್ರ

ಮೇಷ ರಾಶಿ : ವಾಹನ ಸಂಚಾರ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೇದು. ನಿಮ್ಮ ಮಡದಿಯಿಂದ ಸಹಾಯವಾಗುವ ದಿನ, ಹೊಸ ಕಾರ್ಯಕ್ಕೆ ಮುನ್ನುಗ್ಗುವ ಮನೋಸ್ಥೈರ್ಯ ಬರಲಿದೆ. ಮನೆಯಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. 

ದೋಷ ಪರಿಹಾರ - ಶನೈಶ್ಚರ ದೇವಾಲಯಕ್ಕೆ ಹೋಗಿ 7 ನಮಸ್ಕಾರ ಹಾಕಿ  

ವೃಷಭ : ಸ್ತ್ರೀಯರಲ್ಲಿ ಆಸಕ್ತಿ ಹೆಚ್ಚಾಗಲಿದೆ, ಸಂಯಮ ಇದ್ದರೆ ಒಳಿತು, ಜಾಗ್ರತೆಯಿಂದ ಇರಿ. ಸಹೋದರಿಯರೊಂದಿಗೆ ಹೆಚ್ಚು ವಾದ ಬೇಡ. ಸ್ತ್ರೀಯರು ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಿ. ನಿಮ್ಮ ಮಕ್ಕಳಿಗೆ ಸ್ತ್ರೀಯರಿಂದ ಅಪವಾದ ಸಂಭವ. 

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ದರ್ಶನ ಮಾಡಿ. 

ಮಿಥುನ : ಉದ್ಯೋಗದಲ್ಲಿ ಪ್ರಶಂಸೆ, ಮಕ್ಕಳಿಂದ ಉದ್ಯೋಗಕ್ಕೆ ಸಹಾಯ, ಓರ್ವ ಸ್ತ್ರೀಯಿಂದ ಧನಾಗಮನ, ತಾಯಿಯಿಂದ ಅನುಕೂಲವಾಗಲಿದೆ. ಜೀವನ ಸುಗಮ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ಕಟಕ : ಸಹೋದರಿಯರಿಂದ ಸ್ವಲ್ಪ ಕಿರಿಕಿರಿ, ದ್ವೇಷ ಸಾಧನೆಗೆ ಅವಕಾಶವಿಲ್ಲ, ಹೆಚ್ಚು ಚಿಂತೆ ಬೇಡ. ಮಾನಸಿಕವಾಗಿ ಸ್ವಲ್ಪ ಹತಾಶರಾಗುವ ಸಾಧ್ಯತೆ ಇದೆ, ಉದ್ಯೋಗಿಗಳಿಗೆ ಅಸಮಾಧಾನದ ದಿನ.

ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಹೋಗಿ ಮೃತ್ಯುಂಜಯ ಮಂತ್ರ ಪಠಿಸಿ

ಸಿಂಹ : ಸ್ವಲ್ಪ ಧನ ನಷ್ಟವಾಗುವ ಸಂಭವ ಇದೆ. ಆರೋಗ್ಯ ವೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಮಿತ್ರ ಸಹಾಯ, ಆದರೆ ದಾಂತ್ಯದಲ್ಲಿ ಮನಸ್ತಾಪ ಸಂಭವ. ಎಚ್ಚರವಾಗಿ ಮಾತನಾಡಿ.  

ದೋಷ ಪರಿಹಾರ : ಲಕ್ಷ್ಮಿಗೆ ಹಾಲಿನ ಅಭಿಷೇಕ ಮಾಡಿ.

ಕನ್ಯಾ : ಕುಟುಂಬದಲ್ಲಿ ಹಿರಿಯರಿಂದ ಸಲಹೆ. ಸಲಹೆ ಪಾಲಿಸಿದರೆ ಒಳಿತು. ಉದ್ಯೋಗದಲ್ಲಿರುವವರಿಗೆ ಉತ್ತಮ ಪ್ರಗತಿ. ಮಾತಿನಿಂದ ಕಾರ್ಯ ಸಾಧನೆ ಮಾಡುವ ದಿನ, ಮಕ್ಕಳಿಂದ ಚಿಂತೆ. 

ದೋಷ ಪರಿಹಾರ : ನಾಗ ದೇವರಿಗೆ 5 ಪ್ರದಕ್ಷಿಣೆ ಹಾಕಿ

ತುಲಾ : ಉದ್ಯೋಗದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸ್ವಲ್ಪ ಜಾಗರೂಕರಾಗಿರಿ. ಸಹೋದರರು ಸಹಾಯ ಮಾಡುತ್ತಾರೆ. ಧೈರ್ಯದ ಮನಸ್ಸಿರುವುದಿಲ್ಲ. 

ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ವೃಶ್ಚಿಕ : ನಿಮ್ಮಲ್ಲಿ ಅಂತ:ಶಕ್ತಿ ಪ್ರಕಟವಾಗುತ್ತದೆ, ಹೊಸ ಕಾರ್ಯಕ್ಕೆ ಮುನ್ನುಗ್ಗುತ್ತೀರಿ, ಆದರೆ ಸ್ವಲ್ಪ ಕಟು ಮಾತುಗಳನ್ನಾಡಿ ಜಗಳ ಮಾಡಿಕೊಳ್ಳುವ ಸಂದರ್ಭವೂ ಇದೆ. ಸಮಾಧಾನದಿಂದ ಕಾರ್ಯ ಸಾಧಿಸಿ. 

ದೋಷ ಪರಿಹಾರ : ಶನೈಶ್ಚರನಿಗೆ 7 ಪ್ರದಕ್ಷಿಣೆಹಾಕಿ. 

ಧನಸ್ಸು : ನೀವು ಕೂಡಿಟ್ಟ ಹಣ ವ್ಯಯವಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಯ, ಸಂಗಾತಿಯಲ್ಲಿ ಮನಸ್ತಾಪ, ಸಾಧಾರಣದಿನವಾಗಿರಲಿದೆ, ಉದ್ಯೋಗ ಕ್ಷೇತ್ರದಲ್ಲಿ ಹಿರಿಯರಿಂದ ಕಿರಿಕಿರಿ ಅನುಭವಿಸುತ್ತೀರಿ. 

ದೋಷ ಪರಿಹಾರ : ಇಷ್ಟ ದೇವರ ಪ್ರಾರ್ಥನೆ ಮಾಡಿ.

ಮಕರ : ವಾಹನ ಚಲಾಯಿಸುವಾಗ ಎಚ್ಚರದಿಂದಿರಿ. ಸ್ವಲ್ಪ ಅಪಾಯವಾಗುವ ಸಾಧ್ಯತೆ ಇದೆ. ಮುಖದಲ್ಲಿ ಗಾಯ ಸಂಭವ,  ಗಂಡ-ಹೆಂಡಿರಲ್ಲಿ ವೈಮನಸ್ಸಾಗುವ ಸಾಧ್ಯತೆ. ನಂಬಿಕೆ ಇರಲಿ. ವಾಗ್ವಾದಕ್ಕೆ ದಾರಿ ಮಾಡಿಕೊಡಬೇಡಿ.

ದೋಷ ಪರಿಹಾರ : ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ಕುಂಭ : ಇಂದು ನಿಮಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ. ನಿರ್ಲಕ್ಷಿಸದೆ  ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೇದು. ಉಳಿದಂತೆ ಹೆಚ್ಚು ತೊಂದರೆ ಇಲ್ಲ. ಉದ್ಯೋಗದಲ್ಲಿರುವವರಿಗೆ ಮಹತ್ತರ ಬದಲಾವಣೆ ಸಾದ್ಯತೆ. 

ದೋಷ ಪರಿಹಾರ : ಸಂಜೀವಿನಿ ಮಂತ್ರ ಪಠಿಸಿ 

ಮೀನ : ಗಂಡ-ಹೆಂಡಿರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ, ಉದ್ಯೋಗ ಸ್ಥಾನದಲ್ಲಿ ಬದಲಾವಣೆ, ಉತ್ತಮ ಸಹಕಾರ. ವಾಹನ ಸೌಖ್ಯವಿದೆ, ನಿಮ್ಮ ಮನೆಯ ಹೆಣ್ಣುಮಕ್ಕಳಿಂದ ಸ್ವಲ್ಪ ಮಾನಸಿಕ ಬೇಸರ. ಅನುಕೂಲವೂ ಇದೆ. 

ದೋಷ ಪರಿಹಾರ : ಗಣಪತಿ ಪ್ರಾರ್ಥನೆ ಮಾಡಿ

ವಾಞ್ಮಯೀ