Asianet Suvarna News Asianet Suvarna News

ಈ ರಾಶಿಗೆ ಅದೃಷ್ಟದ ದಿನ : ಉಳಿದ ರಾಶಿಗೆ..?

ಈ ರಾಶಿಗೆ ಅದೃಷ್ಟದ ದಿನ  : ಉಳಿದ ರಾಶಿಗೆ..?

Special Bhavishya 26 November 2018
Author
Bengaluru, First Published Nov 26, 2018, 6:58 AM IST
  • Facebook
  • Twitter
  • Whatsapp

ಈ ರಾಶಿಗೆ ಅದೃಷ್ಟದ ದಿನ  : ಉಳಿದ ರಾಶಿಗೆ..?

26-11-18 - ಸೋಮವಾರ

ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಕೃಷ್ಣ ಪಕ್ಷ
ಚತುರ್ಥಿ ತಿಥಿ 
ಆರ್ದ್ರ ನಕ್ಷತ್ರ 

ರಾಹುಕಾಲ  07.50 ರಿಂದ 09.16
ಯಮಗಂಡ ಕಾಲ  10.41 ರಿಂದ 12.07
ಗುಳಿಕ ಕಾಲ  01.32 ರಿಂದ 02.58
 

ಮೇಷ - ಸಹೋದರಿಯಿಂದ ಸ್ವಲ್ಪ ಕಿರಿಕಿರಿ, ಪ್ರಯಾಣದಲ್ಲಿ ಓರ್ವ ಆಗಂತುಕನಿಂದ ಸಮಸ್ಯೆ, ಮಾನಸಿಕ ತೊಳಲಾಟ, ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀಯರಿಂದ ಸಹಾಯ, ಉದ್ಯೋಗದಲ್ಲಿ ಏರುಪೇರು.   

ದೋಷ ಪರಿಹಾರ : ಹತ್ತಿರದ ನಾಗ ದೇವಸ್ಥಾನಕ್ಕೆ ಹೋಗಿಬನ್ನಿ

ವೃಷಭ - ಸ್ತ್ರೀಯರ ಆರೋಗ್ಯದಲ್ಲಿ ಕೊಂಚ ಏರುಪೇರು, ತಾಯಿಯಿಂದ ಧನ ಸಹಾಯ, ದಾಂಪತ್ಯದಲ್ಲಿ ಕಲಹ, ಪರಸ್ಪರ ವಾಗ್ವಾದಗಳಾಗುವ ಸಾಧ್ಯತೆ, ಕಾಲು ಹಾಗೂ ಕೈ ಮೂಳೆಗಳಲ್ಲಿ ಸ್ವಲ್ಪ ನೋವು ಸಂಭವಿಸಲಿದೆ. 

ದೋಷ ಪರಿಹಾರ : ಶನೈಶ್ಚರ ಪ್ರಾರ್ಥನೆ ಮಾಡಿ 

ಮಿಥುನ : ನಿಮ್ಮ ವ್ಯಾಪಾರದಲ್ಲಿ ನಷ್ಟ ಸಂಭವ, ಮೋಸ ಹೋಗುವ ಸಾಧ್ಯತೆ ಇದೆ, ನೀವು ಸ್ನೇಹವಿಟ್ಟವರು ನಿಮ್ಮನ್ನ ನಂಬಿಸಿ ಮೋಸ ಮಾಡುವ ಸಾಧ್ಯತೆ ಇದೆ, ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಅದೃಷ್ಟ ಖುಲಾಸೆಯಾಗಲಿದೆ. 

ದೋಷ ಪರಿಹಾರ : ಶನಿದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ

ಕಟಕ : ದೇಹಾರೋಗ್ಯದಲ್ಲಿ ವ್ಯತ್ಯಯ, ಮಾನಸಿಕವಾಗಿ ಗುಗ್ಗುತ್ತೀರಿ, ನಿಮ್ಮ ಮನಸ್ಸಿಗೆ ಭಾವನೆಗಳಿಗೆ ಬೆಲೆ ಇಲ್ಲವಾಗುತ್ತದೆ, ಉದ್ಯೋಗ ಸ್ಥಳದಲ್ಲಿ ಅಸಮಧಾನ, ಮಿತ್ರರಿಂದ ಸಮಾಧಾನ.

ದೋಷ ಪರಿಹಾರ : ಕುಜ ಪ್ರಾರ್ಥನೆ ಹಾಗೂ ದುರ್ಗಾ ಪ್ರಾರ್ಥನೆ ಮಾಡಿ

ಸಿಂಹ : ಮನೆ ಖರೀದಿ ಮಾಡುವ ಆಲೋಚನೆ, ಧನದ ಮೂಲ ವಿಸ್ತಾರವಾಗಲಿದೆ, ಅಂದುಕೊಂಡ ಯೋಜನೆಗಳಿಗೆ ಹಿರಿಯರ ಸಹಕಾರ ದೊರೆಯಲಿದೆ, ಮನೆ ದೇವರ ಪ್ರಾರ್ಥನೆ ಮಾಡಿ.  

ದೋಷ ಪರಿಹಾರ : ಬುಧ ಗ್ರಹ ಸ್ಮರಣೆ ಮಾಡಿ

ಕನ್ಯಾ : ಸಹೋದರರಲ್ಲಿ ಭಿನ್ನಾಭಿಪ್ರಾಯ, ಸ್ವಲ್ಪ ಮಟ್ಟಿಗೆ ಕಲಹ ಸಂಭವ, ಮನೆ, ಕ್ಷೇತ್ರಗಳಲ್ಲಿ ವಂಚನೆ ಹೋಗುವ ಸಾಧ್ಯತೆ, ಮಕ್ಕಳಿಂದ ಸ್ವಲ್ಪ ನೋವು ಅನುಭವಿಸುವ ದಿನ, ಎಚ್ಚರಿಕೆಯಿಂದ ಇರಿ.  

ದೋಷ ಪರಿಹಾರ :  ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಪಠಿಸಿ

ತುಲಾ : ಸ್ತ್ರೀಯರಿಗೆ ಉತ್ತಮ ದಿನ, ನಂಬಿದ ವ್ಯಕ್ತಿಗಳಿಂದ ಉತ್ತಮ ಸಹಕಾರ, ನಿಮ್ಮ ಸಾಧನೆಗೆ ಹಿರಿಯರ ಸಹಕಾರ ದೊರೆಯಲಿದೆ, ನೀವು ಸಂಪಾದಿಸಿದ ಹಣ ವ್ಯಯವಾಗುತ್ತದೆ, ನೀವು ಖರೀದಿಸಿದ ಸ್ಥಳದಲ್ಲಿ ತೊಂದರೆ ಸಂಭವಿಸುತ್ತದೆ. ಎಚ್ಚರ ವಿರಲಿ. 

ದೋಷ ಪರಿಹಾರ : ಶನಿ ಪ್ರಾರ್ಥನೆ ಮಾಡಿ 

ವೃಶ್ಚಿಕ : ನಿಮ್ಮ ಸಾಧನೆಗೆ ಮನೆಯಲ್ಲಿ ಸಹಕಾರ ದೊರೆಯುತ್ತದೆ, ನಿಮ್ಮ ಮನೆಯಲ್ಲಿರುವ ಮೂರು ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಮಾತು ಕಠೋರವಾಗಿ ಪರಿಸ್ಥಿತಿ ಪ್ರಕೋಪಕ್ಕೆ ಹೋಗುವ ಸಾಧ್ಯತೆ ಇದೆ.  

ದೋಷ ಪರಿಹಾರ :  ಸುಬ್ರಹ್ಮಣ್ಯ ಸ್ವಾಮಿ ಜೇನು ಸಮರ್ಪಣೆ ಮಾಡಿ

ಧನಸ್ಸು : ದೇಹಾಯಾಸ, ಕಾರ್ಯ ಮಾಡುವಾಗ ಆಲಸ್ಯ, ನಿಮ್ಮ ಕೆಲಸಗಳು ವಿಳಂಬವಾಗುತ್ತವೆ, ಸರ್ಕಾರಿ ನೌಕರರಿಂದ ಕಿರಿಕಿರಿ ಸಂಭವಿಸುತ್ತದೆ, ಮನೆಯಲ್ಲೂ ನಿಮಗೆ ಅಸಹಕಾರ, ಬೇಸರದ ದಿನವಾಗಿರಲಿದೆ. 

ದೋಷ ಪರಿಹಾರ : ಮಹಾ ಗಣಪತಿ ಪ್ರಾರ್ಥನೆ ಮಾಡಿ

ಮಕರ :  ನಿಮ್ಮ ಕಾಲಿನ ಭಾಗದಲ್ಲಿ ನೋವು ಕಾಣುವ ಸಾಧ್ಯತೆ, ಪ್ರಾರಂಭ ಮಾಡಿದ ಕೆಲಸ ಅರ್ಧಕ್ಕೆ ನಿಲ್ಲಲಿದೆ, ಕೂಡಿಟ್ಟ ಹಣ ಕೈಚೆಲ್ಲಿಹೋಗುತ್ತದೆ, ದಾಂತ್ಯದಲ್ಲಿ ಭಿನ್ನಾಭಿಪ್ರಾಯ ಬಂದು ಪ್ರಮಾದ ಸಂಭವಿಸಲಿದೆ. 

ದೋಷ ಪರಿಹಾರ : ಶಿವನಿಗೆ ಸಾಷ್ಟಾಂಗ ಪ್ರಣಾಮ ಮಾಡಿ 

ಕುಂಭ : ದೇಹಕ್ಕೆ ಪುಟ್ಟಗಾಯವಾಗುವ ಸಾಧ್ಯತೆ, ಬೆಂಕಿಯಿಂದ ಅವಘಡ ಮಾಡಿಕೊಳ್ಳುತ್ತೀರಿ, ಮಕ್ಕಳಿಂದ ಸ್ವಲ್ಪ ಬೇಸರ ಸಂಭವ,  ನಿಮ್ಮ ಸಂತೋಷದಲ್ಲಿ ಮಿತ್ರರ ಭಾಗಿತ್ವ, ಉದ್ಯೋಗದಲ್ಲಿ ಅನುಕೂಲದ ದಿನ


ದೋಷ ಪರಿಹಾರ : ಆಂಜನೇಯ ಪ್ರಾರ್ಥನೆ ಮಾಡಿ.   

ಮೀನ : ಸಂತೋಷದ ದಿನ, ಭಾಗ್ಯವೃದ್ಧಿ, ಉದ್ಯೋಗದಲ್ಲಿ ಏಳಿಗೆ ಉತ್ತಮರ ಸಹಕಾರ, ಮಕ್ಕಳಿಂದ ಸ್ವಲ್ಪ ಅಸಮಧಾನ, ಮಿತ್ರರ ಸಹಕಾರದಿಂದ ಪ್ರಯಾಣ ಸಂಭವ, ಮನೆಯಲ್ಲಿ ಸ್ತ್ರೀಯರ ಸಹಾಯ.  

ದೋಷ ಪರಿಹಾರ : ದತ್ತಾತ್ರೇಯ ಸ್ವಾಮಿಗೆ ಪುಷ್ಪ ಸಮರ್ಪಣೆ ಮಾಡಿ. 


ವಾಞ್ಮಯೀ.

Follow Us:
Download App:
  • android
  • ios