ಇಂದು ಈ ರಾಶಿಗೆ ಸ್ವಲ್ಪ ಲಾಭ-ಸ್ವಲ್ಪ ನಷ್ಟ

ಮೇಷ ರಾಶಿ : ಹೃದಯ ಭಾಗದಲ್ಲಿ ತೊಂದರೆ, ಮನಸ್ಸಿಗೆ ಅಸಮಧಾ, ತಾಯಿ ಆರೋಗ್ಯದಲ್ಲಿ ಏರು ಪೇರು. ಮನೆಯಲ್ಲಿ ಹೆಚ್ಚಿನ ಕೆಲಸಕಾರ್ಯಗಳು. ದೇಹಾಯಾಸವಾಗುವ ಸಾಧ್ಯತೆ. ಹೆಣ್ಣುಮಕ್ಕಳಿಂದ ಸ್ವಲ್ಪ ಕಿರಿಕಿರಿಯಾಗಬಹುದು. 

ದೋಷಪರಿಹಾರ : ಓಂ ಷಡಾನನಾಯ ನಮ: ಮಂತ್ರವನ್ನು 21 ಬಾರಿ ಹೇಳಿಕೊಳ್ಳಿ.

ವೃಷಭ : ಇಂದು ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನದ ದಿನ, ನಿಮ್ಮ ಹೊಸ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಗಲಿದೆ. ಜೊತೆಗೆ ಇಂದು ತಂದೆಯಿಂದ ಹಾಗೂ ಸರ್ಕಾರಿ ಕಾರ್ಯಗಳಿಂದ ಅನುಕೂಲವಾಗಲಿದೆ. ಸ್ವಲ್ಪ ಧನ ವ್ಯಯವೂ ಇದೆ.    

ದೋಷ ಪರಿಹಾರ : ಲಕ್ಷ್ಮೀ ಹೃದಯ ಸ್ತೋತ್ರ ಪಠಿಸಿ.

ಮಿಥುನ : ಇಂದು ನಿಮ್ಮ ದಿನ ಸ್ವಲ್ಪ ಲಾಭ-ಸ್ವಲ್ಪ ನಷ್ಟದಿಂದ ಕೂಡಿರುತ್ತದೆ. ನಿಮ್ಮ ಪ್ರತಿಭೆಗೆ ಪುರಸ್ಕಾರ ದೊರೆಯಲಿದೆ. ಆರೋಗ್ಯ ಸಮಸ್ಯೆ ನಿಮ್ಮನ್ನು  ಕಾಡಲಿದೆ. ಒಲ್ಲದ ಮನಸ್ಸಿನಿಂದ ಹಣ ವ್ಯಯ ಮಾಡಬೇಕಾದ ಅನಿವಾರ್ಯತೆ ಇದೆ.

ದೋಷ ಪರಿಹಾರ : ಹರಿವಂಶ ಪಠಿಸಿ

ಕಟಕ : ನಿಮ್ಮ ಶ್ರಮದಿಂದ ನಿಮಗೆ ಲಾಭ. ಉದ್ಯೋಗ ಸ್ಥಳದಲ್ಲಿ ಉತ್ತಮ ದಿನ ಆದರೆ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆಯೂ ಇದೆ. ಹಾಲು ವ್ಯಾಪಾರಿಗಳಿಗೆ ತೊಂದರೆ, ಹಸುಗಳಿಗೆ ಬಾಧೆ. ಅಸಮಧಾನ.
  
ದೋಷ ಪರಿಹಾರ : ಸತ್ಯನಾರಾಯಣ ಪೂಜೆ ಮಾಡಿಸಿ

ಸಿಂಹ : ನಿಮ್ಮ ಶ್ರಮಕ್ಕೆ ದ್ವಿಗುಣ ಲಾಭ ಸಿಗಲಿದೆ. ಸಾಲ ಬಾಧೆ ನಿಮ್ಮನ್ನು ಸ್ವಲ್ಪ ಬಾಧಿಸಲಿದೆ. ಉದ್ಯೋಗಾಧಿಪತಿ ಜನ್ಮದಲ್ಲಿರುವುದರಿಂದ ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ. ವ್ಯಾಪಾರಿಗಳಿಗೆ ಲಾಭ ನಷ್ಟ ಸಂಭವ. ಎರಡೂ ರೀತಿಯ ಫಲಗಳನ್ನು ಅನುಭವಿಸುತ್ತೀರಿ. 

ದೋಷ ಪರಿಹಾರ : ಆದಿತ್ಯ ಹೃದಯ ಪಾರಾಯಣ ಮಾಡಿ

ಕನ್ಯಾ : ಇಂದು ಕೆಲವರಿಗೆ ಉದ್ಯೋಗ ಪ್ರಾಪ್ತಿ ಹಾಗೂ ಬಡ್ತಿ ಎರಡೂ ಲಭ್ಯ. ವಿದೇಶ ಪ್ರಯಾಣದ ಸಾಧ್ಯತೆ. ಸ್ತ್ರೀಯರಿಗೆ ಉತ್ತಮ ದಿನ. ಸ್ವಲ್ಪ ಧನ ನಷ್ಟವಾಗುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಜಾಗೃತವಾಗಿರಿ.
  
ದೋಷ ಪರಿಹಾರ : ಸುಮಂಗಲೆಯರಿಗೆ ವಸ್ತ್ರ ದಾನ ಮಾಡಿ 

ತುಲಾ :  ಇಂದು ನಿಮಗೆ ಶೀತ ಬಾಧೆ ಕಾಡಲಿದೆ. ತಲೆ ಸಿಡಿತದಂಥ ಅಪಾಯವಿದೆ. ಸೊಂಟ ಭಾಗವೂ ತೊಂದರೆಯಾಗಿ ಕಾಡಬಹುದು. ಆದರೆ ಶುಭ ಫಲಗಳು ನಿಮ್ಮ ದೇಹಾಯಾಸವನ್ನು ಕಡಿಮೆ ಮಾಡಿ ಸಮಾಧಾನತರಲಿದೆ.  

ದೋಷ ಪರಿಹಾರ : ವಾಗೀಶ್ವರಿ ಪ್ರಾರ್ಥನೆ ಮಾಡಿ 

ವೃಶ್ಚಿಕ : ಇಂದು ಹೆಂಡತಿಯಿಂದ ಸಹಾಯ, ಗೆಳೆಯ-ಗೆಳತಿಯರಿಂದ ನಿಮ್ಮ ಮನಸ್ಸಿಗೆ ಸಮಾಧಾನ,  ವ್ಯಾಪಾರಿಗಳಿಗೆ ಬರುವ ಲಾಭದಲ್ಲಿ ಕತ್ತರಿಯಾಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಯೂ ಆಗುವ ಸಾಧ್ಯತೆ ಇದೆ. ಜಾಗ್ರತೆಯಿಂದ ಇರುವುದು ಒಳಿತು.

ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ

ಧನಸ್ಸು : ಉತ್ತಮ ದಿನ ನಿಮ್ಮದಾಗಿರಲಿದೆ, ಮನೆಯಲ್ಲಿ ಉತ್ತಮ ಬಾಂಧವ್ಯ, ಆಹ್ಲಾದ ವಾತಾವರಣವಿರಲಿದೆ. ನಿಮ್ಮ ದೇಹದಲ್ಲಿ ಸ್ವಲ್ಪ ಏರುಪೇರು. ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ ಇದೆ.  

ದೋಷ ಪರಿಹಾರ : ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಕರ :  ಇಂದು ಹೆಣ್ಣುಮಕ್ಕಳಿಂದ ಸಹಾಯ, ನಿಮ್ಮ ಮಕ್ಕಳೂ ಕೂಡ ನಿಮ್ಮ ಸಹಾಯಕ್ಕೆ ಬರುತ್ತಾರೆ. ಶತ್ರುಗಳ ಬಾಧೆ ಸ್ವಲ್ಪ ಮಟ್ಟಿಗೆ ಹಿಂಸೆಕೊಡಲಿದೆ. ಉದ್ಯೋಗ ಸ್ಥಳದಲ್ಲಿ ನೀವು ಕೊಟ್ಟ ಸಾಲ ವಾಪಸ್ಸಾಗುವ ಸಾಧ್ಯತೆ ಇದೆ.  
  
ದೋಷ ಪರಿಹಾರ : ಶಿವಾನಂದ ಲಹರಿ ಪಠಿಸಿ

ಕುಂಭ :  ನಿಮ್ಮ ತಾಯಿ  ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಆದರೆ ಸಮಸ್ಯೆ ನಿವಾರನೆಯೂ ಆಗಲಿದೆ. ಇಂದು ನಿಮ್ಮ ಕಾರ್ಯ ಸ್ಥಳದಲ್ಲಿ ಕೆಲಸಕ್ಕೆ ಹೆಚ್ಚು ಅಡೆತಡೆಗಳಿರಲಿವೆ. ಮನಸ್ಸಿಗೆ ಸ್ವಲ್ಪ ಆತಂಕದ ಭಾವ.    

ದೋಷ ಪರಿಹಾರ : ಶನಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ
  
ಮೀನ : ಅನುಕೂಲದ ದಿನ, ಕಾರ್ಯ ವೈಖರಿ ಬದಲಾಗಲಿದೆ, ಅದೃಷ್ಟ ಬದಲಾಗಲಿದೆ, ಆರೋಗ್ಯದಲ್ಲಿ ಸದೃಢತೆ, ಉತ್ತಮ ಕಲಾರ್ಯಗಳಲ್ಲಿ ಆಸಕ್ತಿ, ಗುರುಗಳ ಭೇಟಿಯಿಂದ ಗೊಂದಲ ನಿವಾರಣೆ.
  
ದೋಷ ಪರಿಹಾರ : ನಾರಾಯಣ ಸ್ಮರಣೆ ಮಾಡಿ


ವಾಞ್ಮಯೀ.