ವಿಶೇಷ ಭವಿಷ್ಯ : ಈ ರಾಶಿಯವರು ಎಚ್ಚರಿಕೆ ವಹಿಸುವುದು ಸೂಕ್ತ

ವಿಶೇಷ ಭವಿಷ್ಯ : ಈ ರಾಶಿಯವರು ಎಚ್ಚರಿಕೆ ವಹಿಸುವುದು ಸೂಕ್ತ


12-11-18 - ಸೋಮವಾರ


ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ಪಂಚಮಿ ತಿಥಿ
ಪೂರ್ವಾಷಾಢ ನಕ್ಷತ್ರ 

ರಾಹುಕಾಲ  07.44 ರಿಂದ 09.11
ಯಮಗಂಡ ಕಾಲ  10.37 ರಿಂದ 12.04
ಗುಳಿಕ ಕಾಲ  01.30 ರಿಂದ 02.56
 

ಮೇಷ ರಾಶಿ : ತಂದೆ ಜೊತೆಗಿನ ವ್ಯಾಪಾರದಲ್ಲಿ ಭಿನ್ನಾಭಿಪ್ರಾಯ ಬರಲಿದೆ, ಮಡದಿ ಹೇಳುವ ಮಾತು ಸರಿ ಎನ್ನಿಸುತ್ತದೆ, ಮರದ ತುಂಡಿನಿಂದ ಪೆಟ್ಟು ಬೀಳುವ ಸಾಧ್ಯತೆ ಇದೆ, ಅದೃಷ್ಟ ಕೈತಪ್ಪಿಹೋಗಲಿದೆ, ಮಿಶ್ರ ಫಲ.

ದೋಷಪರಿಹಾರ : ಆದಿತ್ಯ ಹೃದಯ ಪಠಿಸಿ

ವೃಷಭ : ಆರೋಗ್ಯ ವೃದ್ಧಿ, ಸ್ನೇಹಿತರಿಂದ ದೊಡ್ಡಮಟ್ಟದ ಸಹಾಯವನ್ನು ನಿರೀಕ್ಷಿಸಬಹುದು, ದಾಂಪತ್ಯದಲ್ಲಿ ಆತ್ಮೀಯತೆ ಹೆಚ್ಚುತ್ತದೆ, ಹಿರಿಯರ ಆಶೀರ್ವಾದದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ. 
      
ದೋಷ ಪರಿಹಾರ : ಕನಕಧಾರಾ ಸ್ತೋತ್ರವನ್ನು ಪಠಿಸಿ

ಮಿಥುನ : ಆರೋಗ್ಯದಲ್ಲಿ ಚೇತರಿಕೆ, ಇತರರು ವಿಶ್ವಾಸದಿಂದ ನಿಮ್ಮನ್ನು ಸೋಲಿಸುವ ತಂತ್ರ ಹೂಡುತ್ತಾರೆ. ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ದೇವಿ ದೇವಸ್ಥಾನಕ್ಕೆ ಮಂಗಲದ್ರವ್ಯಗಳನ್ನು ಕೊಟ್ಟುಬನ್ನಿ.
ದೋಷ ಪರಿಹಾರ : ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ಪಠಿಸಿ

ಕಟಕ : ದೇಹಾಯಾಸ, ಸೋಮಾರಿತನ ಕಾಡಲಿದೆ, ಆದರೆ ಇಂದು ನಿಮ್ಮ ಪಾಲಿಗೆ ಜವಾಬ್ದಾರಿಯುತವಾದ ಕಾರ್ಯಗಳು ಬಂದೆರಗಲಿವೆ. ವಾಹನದಲ್ಲಿ ಸಂಚರಿಸುವಾಗ ಅಥವಾ ಓಡಾಡುವಾಗ ಸ್ವಲ್ಪ ಜಾಗ್ರತೆ ಇರಲಿ. ದೇಹಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ. 
  
ದೋಷ ಪರಿಹಾರ : ದುರ್ಗಾ ಕವಚ ಪಠಿಸಿ

ಸಿಂಹ :  ನಿಮಗೂ ಪಕ್ಕದ ಮನೆಯವರಿಗೂ ವಾಗ್ವಾದ, ನಿಮ್ಮ ಹೆಣ್ಣುಮಕ್ಕಳು ಸ್ವಲ್ಪ ತೊಂದರೆ ಕೊಡುವ ಸಾಧ್ಯತೆ ಇದೆ, ಶತ್ರುಗಳಿಗೆ ಹೆದರುವ ಪ್ರಸಂಗ, ಸ್ತ್ರೀಯರಲ್ಲಿ ವ್ಯವಹರಿಸುವಾಗ ಎಚ್ಚರವಾಗಿದ್ದರೆ ಒಳಿತು.

ದೋಷ ಪರಿಹಾರ : ಶಿವಾಷ್ಟೋತ್ತರವನ್ನು ಪಠಿಸಿ

ಕನ್ಯಾ : ನಿಮ್ಮ ಪ್ರರಾಕ್ರಮಕ್ಕೆ ಶತ್ರುಗಳ ಕಾಟ, ಹೃದಯವಂತಿಕೆಯೇ ನಿಮ್ಮನ್ನು ಮುಟ್ಹಾಳರನ್ನಾಗಿಮಾಡುತ್ತದೆ, ಬಂಧುಗಳಲ್ಲಿ ವ್ಯವಹರಿಸುವಾಗ ಮೋಸಹೋಗುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಎಚ್ಚರಿಕೆ ಇರಲಿ. 
  
ದೋಷ ಪರಿಹಾರ : ಓಂ ನಮೋ ನಾರಾಯಣಾಯ ಮಂತ್ರವನ್ನು ಪಠಿಸಿ

ತುಲಾ : ಸ್ತ್ರೀಯರಿಂದ ಅನುಕೂಲ, ಸಂಗಾತಿ ಹಾಗೂ ನಿಮ್ಮ ಮಕ್ಕಳಿಗಾಗಿ ಸ್ವಲ್ಪ ಕಷ್ಟಪಡಬೇಕಾಗುತ್ತದೆ, ಮಧ್ಯಾಹ್ನದೊಳಗೆ ಸ್ವಲ್ಪ ಧನಾಗಮನ, ನಿಮ್ಮ ಮಿತ್ರರಿಂದ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.  

ದೋಷ ಪರಿಹಾರ : ದುರ್ಗಾ ದೇವಿಗೆ ನಾರಿಕೇಳ ಸಮರ್ಪಣೆ ಮಾಡಿ

ವೃಶ್ಚಿಕ :  ಕೈಲಾಗದ್ದನ್ನು ಮಾಡುವ ಪ್ರಯತ್ನ ಮಾಡುತ್ತೀರಿ, ಆದರೆ ಹಿರಿಯರ ಸಲಹೆ ಕೇಳಿ, ವೃಥಾ ಗಾಳಿಯಲ್ಲಿ ಗುದ್ದುವ ಸಾಹಸ ಬೇಡ, ನಿಮ್ಮ ಮನಸ್ಸಿಗೆ ಹಿತವಾಗುವ ಕಾರ್ಯದಲ್ಲಿ ಸ್ವಲ್ಪ ತೊಡಕು ಉಂಟಾಗಲಿದೆ.    

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ಜೇನು ಸಮರ್ಪಿಸಿ

ಧನಸ್ಸು :  ಇಂದು ಮಾನಸಿಕ ಬೇಸರ ಕೊಂಚ ತಗ್ಗಲಿದೆ, ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳು ಎಣ್ಣೆಯ ದೀಪ ಹಚ್ಚಿಬನ್ನಿ, ಸಾಧ್ಯವಾದರೆ ನಿಮ್ಮ ಮನೆ ಪಕ್ಕದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋಗಿ ಗರಿಕೆ ಸಮರ್ಪಣೆ ಮಾಡಿ

ದೋಷ ಪರಿಹಾರ : ಓಂ ವಿಕಟಾಯ ನಮ: ಮಂತ್ರವನ್ನು 21 ಬಾರಿ ಪಠಿಸಿ

ಮಕರ : ಖಂಡಿನ ಧನವ್ಯಯ ಮಾಡಿಕೊಳ್ಳುವ ಸಾಧ್ಯತೆ ಇದೆ, ಬೆಳಗ್ಗೆ ಎದ್ದಕೂಡಲೇ ದುರ್ಗಾ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿಬನ್ನಿ. ನಿಮ್ಮ ಪರಿಚಿತ ಸ್ತ್ರೀಯರೊಬ್ಬರ ಮಾರ್ಗದರ್ಶನ ಸಿಗಲಿದೆ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ದಿನ.
  
ದೋಷ ಪರಿಹಾರ : ಗಣಪತಿಗೆ ಗರಿಕೆ ಸಮರ್ಪಿಸಿಬನ್ನಿ.

ಕುಂಭ :   ಮನಸ್ಸಿನ ಭಾವನೆಗಳು ಕಾರ್ಯರೂಪಕ್ಕೆ ಬರಲಿವೆ, ಅಕ್ಕಪಕ್ಕದವರೇ ನಿಮ್ಮ ಮೇಲೆ ಆಪಾದ ಹೊರಿಸಿ ಸುಮ್ಮನಾಗುತ್ತಾರೆ. ಜಾಗ್ರತೆ ಇರಲಿ, ನಿಮ್ಮ ಹಿತ ಶತ್ರುಗಳು ನಿಮ್ಮ ಬೆನ್ನಹಿಂದೆಯೇ ಇರುತ್ತಾರೆ ಯಾರನ್ನೂ ನಂಬುವ ಮುನ್ನ ಹತ್ತು ಸಲ ಯೋಚಿಸಿ.

ದೋಷ ಪರಿಹಾರ : ಶಿವ ನಾಮಸ್ಮರಣೆ ಮಾಡಿ
  
ಮೀನ : ನಿಮ್ಮ ಪಾಲಿಗೆ ಸುದಿನ, ಆದರೆ ಸ್ವಲ್ಪ ಮಟ್ಟಿಗೆ ಧನ ವ್ಯಯವಾಗಲಿದೆ, ಅಂದುಕೊಂಡ ಕಾರ್ಯದಲ್ಲಿ ಮಿತ್ರರ ಸಹಾಯ, ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ, ಕಚೇರಿಯಲ್ಲಿರುವ ನಿಮ್ಮ ಸ್ತ್ರೀ ಉದ್ಯೋಗಿಗಳೊಳದಿಗೆ ಎಚ್ಚರಿಕೆ ಬೇಕು, ಸ್ತ್ರೀಯರಿಗೆ ಅನುಕೂಲದ ದಿನ
  
ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ವಾಞ್ಮಯೀ.