ಆಚರಣೆ ಹೇಗಿರಬೇಕು?

ಕೆಲವರ ನಂಬಿಕೆಯಂತೆ ಹರಿ ಹೆಸರು ಹೇಳಿ ಯಾವ ಕೆಲಸ ಮಾಡಿದರೂ, ಅವನಿಗೆ ನೇರವಾಗಿ ಸಲ್ಲುತ್ತದೆ ಎಂಬುವುದು ನಂಬಿಕೆ. ಅಷ್ಟೇ ಅಲ್ಲದೆ ಇಂದು ಸತ್ತವರು ಏಳು ದ್ವಾರಗಳನ್ನು ದಾಟಿ ನೇರವಾಗಿಯೇ ಆ ವಿಷ್ಣುವಿನ ಪಾದ ತಲುಪುತ್ತಾರೆಂದೇ ಭಾವಿಸುತ್ತಾರೆ. ಇಂದು ಉಪವಾಸ ಮಾಡಿದರೆ ವರ್ಷದಲ್ಲಿ ಬರುವ 23 ಏಕಾದಶಿಗೆ ಸಮವಾಗಿದ್ದು, ಹಿಂದೂಗಳಿಗೆ ವಿಶೇಷವಾದ ಈ ದಿನವನ್ನು ಜೈನರೂ ಆಚರಿಸುತ್ತಾರೆ.

ಪೌರಾಣಿಕ ಹಿನ್ನೆಲೆ ಏನು?

ಪದ್ಮ ಪುರಾಣದಲ್ಲಿ ಉಲ್ಲೇಖಿಸಿದಂತೆ ಭಗವಾನ್ ವಿಷ್ಣುವು ಸ್ತ್ರೀ ಶಕ್ತಿ ರೂಪವನ್ನು ಹೊಂದಿ ಈ ದಿನ ಮುರಾನ್ ಎಂಬ ಅಸುರನನ್ನು ವಧಿಸಿದ್ದ. ಆ ಮೂಲಕ ದೇವತೆಗಳನ್ನು ರಕ್ಷಿಸಿದ್ದ. ಅದಕ್ಕೆ ಏಕಾದಶಿ ದಿನದಂದು ಉಪವಾಸ ಮಾಡಿದರೆ, ನೇರವಾಗಿ ವೈಕುಂಠಕ್ಕೇ ಹೋಗುತ್ತಾರೆಂಬ ನಂಬಿಕೆ ಇದೆ. ಮುರ ಅಸುರನು ಅಕ್ಕಿಯಲ್ಲಿ ಅಡಗಿ ಕುಳಿತಿದ್ದ ಎಂಬ ನಂಬಿಕೆಯಿದ್ದು, ಆ ಕಾರಣಕ್ಕೆ ಈ ದಿನ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಬಾರದು.

  • ಹರಿಯನ್ನು ಜಪಿಸಿ... ವೇದ ಪುರಾಣದ ಪ್ರಕಾರ ಕಲಿಯುಗದಲ್ಲಿ ಶ್ರೀ ಕೃಷ್ಣನನ್ನು ಜಪಿಸಿದರೆ, ಶ್ರೇಷ್ಠ ಎಂಬ ನಂಬಿಕೆ ಇದೆ. ಈ ಮಂತ್ರ ಜಪಿಸುವುದರಿಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಹಾಗೂ ಮಾನಸಿಕವಾಗಿ ಮನುಷ್ಯನನ್ನು ಗಟ್ಟಿಯಾಗಿಸುತ್ತದೆ.
  • ಭಗವದ್ ಗೀತ ಓದ ಬೇಕು ಗೀತಾ ಜಯಂತಿಯೂ ವೈಕುಂಠ ಏಕಾದಶಿ ದಿನವೇ ಬರುತ್ತದೆ. ಗೀತ ಜಯಂತಿ ಆಚರಿಸಲು ಕಾರಣ ಏನೆಂದರೆ ಈ ದಿನದಂದು ಶ್ರೀ ಕೃಷ್ಣ ಅರ್ಜುನನಿಗೆ ಆಧ್ಯಾತ್ಮಕ ಜ್ಞಾನ ಕಲ್ಪಿಸುತ್ತಾನೆ.
  • ವಿಷ್ಣುವನ್ನು ದರ್ಶಿಸಿ.... ಇಂದು ವಿಷ್ಣುವಿನ ದೇವಸ್ಥಾನ ಅಥವಾ ಅವನ ಅವತಾರದಲ್ಲಿ ಒಂದಾಗಿರುವ ಗುಡಿಗೆ ಭೇಟಿ ನೀಡಬೇಕು. ದೇವಾಲಯದೊಳಗೆ ಪ್ರವೇಶಿಸಿದಾಕ್ಷಣ ದ್ವಾರವನ್ನು ದಾಟಿ ಹೊರ ಬರಬೇಕು.
  • ಉಪವಾಸ ಕಡ್ಡಾಯ ನೀವು ನಾಸ್ತಿಕರಾದರೂ ಈ ದಿನ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಉಪವಾಸ ಮಾಡುವರು ಕೆಲವೊಂದು ಆಹಾರವನ್ನು ಮಾತ್ರ ಸೇವಿಸಬೇಕು. ಅಕ್ಕಿ, ಬೇಳೆ ಹಾಗೂ ಭೂಮಿ ಕೆಳಗೆ ಬೆಳೆಯುವ ಆಹಾರ ಸೇವನೆ ಈ ದಿನ ವರ್ಜ್ಯ.