ಬೆಂಗಳೂರಿನಲ್ಲಿ ಫೆಬ್ರವರಿ 2027ರಲ್ಲಿ ಹಲವು ಕಂಪನಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಹಲವರು ತಾತ್ಕಾಲಿಕವಾಗಿ ತವರಿಗೆ ಅಥವಾ ಬೇರೆಡೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಈ ಕುರಿತು ಖ್ಯಾತ ಜ್ಯೋತಿಷಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಹಲವರು ಈ ಭವಿಷ್ಯ ನಿಜವಾಗಲಿದೆ ಎಂದಿದ್ದಾರೆ.

ಬೆಂಗಳೂರು (ಅ.14) ಸಾಮಾನ್ಯವಾಗಿ ಜ್ಯೋತಿಷಿಗಳು ಸ್ಫೋಟಕ ಭವಿಷ್ಯ ನುಡಿದ ಬೆನ್ನಲ್ಲೇ ಪರ ವಿರೋಧಗಳು ಹೆಚ್ಚಾಗಲಿದೆ. ಹಲವರು ಹೌದು ಎಂದರೆ ಮತ್ತೆ ಕೆಲವರು ಅಂಕಿ ಅಂಶ ಸಮೇತ ನಿರಾಕರಿಸುತ್ತಾರೆ. ಆದರೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಈ ಬಾರಿ ನುಡಿದ ಭವಿಷ್ಯವನ್ನು ಬಹತೇಕರು ಇದು ಸಾಧ್ಯ ಎಂದಿದ್ದಾರೆ. 2027ರ ಫೆಬ್ರವರಿಯಲ್ಲಿ ಬೆಂಗಳೂರು ಸಮಸ್ಯೆ ಸುಳಿಗೆ ಸಿಲುಕಲಿದೆ. ಫೆಬ್ರವರಿಯಲ್ಲಿ ಬೆಂಗಳೂರಿನ ಐಟಿ ಸೇರಿದಂತೆ ಹಲವು ಕಂಪನಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಹಲವರು ತವರು ಹಾಗೂ ಇತರೆಡೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ಪ್ರಶಾಂತ್ ಕಿಣಿ ಭವಿಷ್ಯ ನಿಜವಾಗಲಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಫೆಬ್ರವರಿಯಲ್ಲಿ ಏನಾಗಲಿದೆ ಬೆಂಗಳೂರು?

ಪ್ರಶಾಂತ್ ಕಿಣಿ ಈ ಬಾರಿ ನುಡಿದ ಭವಿಷ್ಯ ಹಲವರು ನಿಜ ಎಂದಿದ್ದಾರೆ. ಕಾರಣ ಫೆಬ್ರವರಿ 2027ರಲ್ಲಿ ಬೆಂಗಳೂರಿನಲ್ಲಿ ಭಾರಿ ನೀರಿನ ಸಮಸ್ಯೆ ಕಾಡಲಿದೆ ಎಂದಿದ್ದಾರೆ. ನೀರಿನ ಕೊರತೆಯಿಂದ ಬೆಂಗಳೂರು ಒಂದು ದಿನ ಸಾಗುವುದು ಅಸಾಧ್ಯವಾಗಲಿದೆ. ಹಲವು ಐಟಿ ಕಂಪನಿಗಳು ತಮ್ಮ ಕಚೇರಿಯನ್ನು ತಾತ್ಕಾಲಿಕ ಬಂದ್ ಮಾಡಲಿದೆ. ನೀರಿನ ಕೊರತೆಯಿಂದ ಬೆಂಗಳೂರಿನ ಹಲವು ಕಂಪನಿಗಳು ತಾತ್ಕಾಲಿಕ ಸ್ಥಗಿತಗೊಳ್ಳಲಿದೆ. ಪಿಜಿಗಳು ಬಾಗಿಲು ಮುಚ್ಚಲಿದೆ. ಹಲವರು ತವರಿಗೆ ಸ್ಥಳಾಂತರಗಳೊಳ್ಳಲಿದ್ದಾರೆ. ಮತ್ತೆ ಕೆಲವರು ಬೇರೆಡೆಗೆ ಸ್ಥಳಾಂತರವಾಗಲಿದ್ದಾರೆ ಎಂದು ಪ್ರಶಾಂತ್ ಕಿಣಿ ಹೇಳಿದ್ದಾರೆ.

ನೀರಿನ ಬಾಟಲಿಗೂ ಬರ

ಬೆಂಗಳೂರಿನಲ್ಲಿ ಜಲಮಂಡಳಿ ಸರಬರಾಜು ಸಮಸ್ಯೆ ಮಾತ್ರವಲ್ಲ, 10 ರೂಪಾಯಿ, 20 ರೂಪಾಯಿ ಸೇರಿದಂತೆ ದುಡ್ಡು ಕೊಟ್ಟ ಖರೀದಿ ಮಾಡುವ ಬಾಟಲಿ ನೀರು ಕೂಡ ಕೊರತೆಯಾಗಲಿದೆ. ದೇಶಾದ್ಯಂತ ನೀರಿನ ಕೊರತೆ ಎದುರಾಗಲಿದೆ. ಹೀಗಾಗಿ ಪೂರೈಕೆಯಲ್ಲಿ ಸಮಸ್ಯೆ ತೀವ್ರವಾಗಲಿದೆ. ಕುಡಿಯಲು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಲಿದೆ ಎಂದು ಪ್ರಶಾಂತ್ ಕಿಣಿ ಹೇಳಿದ್ದಾರೆ.

ಬೆಂಗಳೂರು ಸಮಸ್ಯೆ ನಿಜ ಎಂದ ನೆಟ್ಟಿಗರು

ಬೆಂಗಳೂರಿನಲ್ಲಿ ಈಗಾಗಲೇ ನೀರಿನ ಸಮಸ್ಯೆಗಳಿವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಹಲವು ಅಪಾರ್ಟ್‌ಮೆಂಟ್, ಬಿಲ್ಡರ್ ಹೌಸ್‌ಗಳು ಈಗಾಗಲೇ ಟ್ಯಾಂಕರ್ ಮೂಲಕ ನೀರು ತರಿಸುತ್ತಿದೆ. ನೀರಿನ ಸಮಸ್ಯೆಗಳು ಎಲ್ಲೆಡೆ ತಲೆದೋರಿದೆ. ಬೆಂಗಳೂರಿನ ಬಹುತೇಕ ಕಡೆ ನೀರಿನ ಕೊರತೆ ತೀವ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಶಾಂತ್ ಕಿಣಿ ಅವರ ಭವಿಷ್ಯ ಹೆಚ್ಚಾಗಿ ಗಮನಿಸಿಲ್ಲ, ಆಧರೆ ಈ ಭವಿಷ್ಯ ನಿಜವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಮೆಂಟ್ಸ್ ಮಾಡಿದ್ದಾರೆ.

ಎಲ್ ನಿನೋ ಪರಿಣಾಮದಿಂದ ಈ ಬಾರಿ ಭಾರಿ ಮಳೆ ಕೊರತೆ ಎದುರಾಗಿದೆ. ಬೆಂಗಳೂರಿನ ಪ್ರಮುಖ ನೀರು ಮೂಲ ಕಾವೇರಿ ಈ ಬಾರಿ ತುಂಬಿ ಹರಿದ ದಿನ ಕಡಿಮೆ. ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಇದರ ನಡುವೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆಯೂ ಇದೆ. ಇತ್ತ ಕರ್ನಾಟಕದ ಬಹುತೇಕ ಜಲಾಶಗಳಲ್ಲಿ ಈಗಾಗಲೇ ನೀರಿನ ಕೊರತೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ಬರಗಾಲವಿದೆ. ನೀರಿನಲ್ಲ, ಬೆಳೆ ಇಲ್ಲ,ಜಾನುವಾರುಗಳಿಗೆ ಮೇವಿಲ್ಲದ ಸಮಸ್ಯೆ ತೀವ್ರವಾಗುತ್ತಿದೆ. ಹೀಗಾಗಿ ಫೆಬ್ರವರಿವರೆಗೆ ಕಾಯಬೇಕಿಲ್ಲ, ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ತೀವ್ರವಾಗಲಿದೆ ಎಂಬ ಮಾತುಗಳು ಕೇಳಿಬಂದಿದೆ.