Asianet Suvarna News Asianet Suvarna News

ಕೌಟುಂಬಿಕ ಬಾಂಧವ್ಯ ಕಡಿಮೆಗೆ ಯಾಂತ್ರಿಕ ಜೀವನ ಕಾರಣ: ಸಿದ್ದಲಿಂಗ ಶ್ರೀ

  • ಕೌಟುಂಬಿಕ ಬಾಂಧವ್ಯ ಕಡಿಮೆಗೆ ಯಾಂತ್ರಿಕ ಜೀವನ ಕಾರಣ
  • ಆನಂದಪುರದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಡಾ. ಸಿದ್ದಲಿಂಗ ಶ್ರೀ ಅಭಿಮತ
Mechanical life is the reason for less family attachment rav
Author
First Published Nov 23, 2022, 8:18 PM IST | Last Updated Nov 23, 2022, 8:18 PM IST

ಆನಂದಪುರ (ನ.23) : ಯಾಂತ್ರಿಕೃತ ಜೀವನದಲ್ಲಿ ಮುಳುಗಿರುವ ಮನುಷ್ಯನಲ್ಲಿ ಕೌಟುಂಬಿಕ ಬಾಂಧವ್ಯ ಕಡಿಮೆಯಾಗುತ್ತಿದೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲಾಗದೇ ಮನುಷ್ಯನ ಆಲೋಚನಾ ಕ್ರಮಗಳು ದಿಕ್ಕು ತಪ್ಪುತ್ತಿದ್ದು, ಮಠಮಂದಿರಗಳ ಆಧ್ಯಾತ್ಮಿಕ ನೆಲೆ ಮಾತ್ರ ಮನುಷ್ಯನ ಮನಸ್ಸನ್ನು ಏಕತೆಯತ್ತ ಕೇಂದ್ರೀಕರಿಸುವ ಶಕ್ತಿ ಹೊಂದಿದೆ ಎಂದು ಗೋಣಿಬೀಡು ಶಿವಯೋಗಾಶ್ರಮದ ಡಾ. ಸಿದ್ದಲಿಂಗ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಮುರುಘಾ ಮಠದಲ್ಲಿ ಬುಧವಾರ ಶರಣ ಸಾಹಿತ್ಯ ಸಮ್ಮೇಳನ, 560ನೇ ಶಿವಾನುಭವ ಗೋಷ್ಠಿ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಬದಲಾದ ಸನ್ನಿವೇಶಗಳಲ್ಲಿ ಮನುಷ್ಯನಿಗೆ ಮಠಮಂದಿರಗಳ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗಿದೆ. ಬದುಕಿನ ಜೊತೆ ಅದರಾಚೆ ಯೋಚಿಸುವ ಶಕ್ತಿ ಬೆಳೆಸುವ ಅಧ್ಯಾತ್ಮದ ಸಾಂಗತ್ಯ ಮನುಷ್ಯನನ್ನು ಆರೋಗ್ಯಪೂರ್ಣ ಆಗಿಸುತ್ತದೆ. ತಾನು ತನ್ನಿಂದ ಎನ್ನುವುದನ್ನು ಬಿಟ್ಟು ಸಮಷ್ಟಿಬಗ್ಗೆ ಚಿಂತನೆ ಪ್ರಸ್ತುತ ಹೆಚ್ಚು ಪೂರಕವಾಗುತ್ತದೆ ಎಂದು ಹೇಳಿದರು.

Jana Sankalpa Yatre: ವರ್ಷದೊಳಗೆ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ: ಸಿಎಂ ಬೊಮ್ಮಾಯಿ...

ಶಿವಮೊಗ್ಗ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮಿಗಳು ಮಾತನಾಡಿ, ಶರಣರ ತತ್ವಾದರ್ಶಗಳು ಕಾಲಕಾಲಕ್ಕೆ ಮನುಷ್ಯನನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಊರುಗೋಲಾಗಿರುತ್ತವೆ. ನೊಂದು ಬೆಂದಿರುವ ಮನಸ್ಸಿಗೆ ಮಠ -ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ನವೋಲ್ಲಾಸವನ್ನು ನೀಡುತ್ತದೆ. ಮುರುಘಾ ಮಠದಲ್ಲಿ ನಡೆಯುವ ಕಾರ್ತಿಕ ದೀಪೋತ್ಸವ ಸಂದರ್ಭದ ಶರಣ ಸಾಹಿತ್ಯ ಸಮ್ಮೇಳನ ಭಕ್ತರನ್ನು ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕಿನತ್ತ ಕರೆದೊಯ್ಯುವ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕೌಟುಂಬಿಕ ಕಲಹ: ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಹಲ್ಲೆ

ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿರಾಳಕೊಪ್ಪ ವಿರಕ್ತ ಮಠದ ಸಿದ್ದೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಳಗುಪ್ಪ ಕೂಡ್ಲಿಮಠದ ಶ್ರೀ ಸಿದ್ದವೀರ ಸ್ವಾಮಿಗಳು, ಜಡೆ ಮಠದ ಡಾ.ಮಹಾಂತ ಸ್ವಾಮಿಗಳು, ರಾಮದುರ್ಗ ಮಠದ ಶ್ರೀ ಶಾಂತವೀರ ಸ್ವಾಮಿಗಳು, ಶ್ರೀ ಪ್ರಭುಕುಮಾರ ಸ್ವಾಮಿಗಳು, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀಪತಿ ಪಂಡಿತಾರಾಧ್ಯ ಸ್ವಾಮಿಗಳು, ಶ್ರೀ ನೀಲಕಂಠ ಸ್ವಾಮಿಗಳು, ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು, ಪ್ರಮುಖರಾದ ಹಾಜಿರಾಬಿ, ಬಿ.ಎ.ಇಂದೂಧರ ಗೌಡ ಇನ್ನಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಕೆ.ಆರ್‌. ರಾಜು ಸ್ವಾಗತಿಸಿದರು. ಕೆರೆಹಿತ್ಲು ಗಿರೀಶ್‌ ಕಾರ್ಯಕ್ರಮ ನಿರೂಪಿಸಿದರು.

Latest Videos
Follow Us:
Download App:
  • android
  • ios