ಜ್ಯೋತಿಷ್ಯದ ಪ್ರಕಾರ ರಾಹು ಕಾಲವನ್ನು (Rahu Kalam) ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಹೊಸ ಕಾರ್ಯಗಳನ್ನು ಪ್ರಾರಂಭಿಸಬಾರದು. ಹಾಗಾದರೆ, ದಂಪತಿಗಳ ಮಿಲನಕ್ಕೆ ಈ ನಿಯಮ ಅನ್ವಯಿಸುತ್ತದೆಯೇ?
ರಾಹು ಕಾಲ ಪ್ರತಿ ದಿನವೂ ಇರುತ್ತೆ. ಆಗ ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಹೊಸ ಚಟುವಟಿಕೆ ಪ್ರಾರಂಭಿಸಲು, ಶುಭ ಕಾರ್ಯ ನಡೆಸಲು ಅನುಕೂಲಕರ ಅಲ್ಲ ಎಂದು ಪರಿಗಣಿಸಲಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಯಾವುದೇ ಕೆಲಸವಾಗಲಿ, ಶುಭಕಾರ್ಯವಾಗಲಿ ಪ್ರಾರಂಭಿಸುವ ಮೊದಲು ಮುಹೂರ್ತಕ್ಕೆ ಆದ್ಯತೆ. ಶುಭಘಳಿಗೆಯಲ್ಲಿ ಮಾಡುವ ಯಾವುದೇ ಕಾರ್ಯ ಸುಸೂತ್ರ ಎಂಬ ನಂಬಿಕೆ ಇದೆ. ಅದರಲ್ಲೂ ಮುಹೂರ್ತದಲ್ಲಿ ಮುಖ್ಯವಾಗಿ ಪರಿಗಣಿಸುವುದೇ ರಾಹುಕಾಲವನ್ನು. ಸಾಮಾನ್ಯವಾಗಿ ಇದನ್ನು ಅಶುಭ ಸಮಯ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಗಂಡ- ಹೆಂಡತಿಯ ಮಿಲನ ಕೂಡ ರಾಹುಕಾಲದಲ್ಲಿ ಕೂಡದೇ? ಜ್ಯೋತಿಷ್ಯ ಏನೆನ್ನುತ್ತದೆ? ನೋಡೋಣ.
ರಾಹು ಕಾಲವು ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಸುಮಾರು 90 ನಿಮಿಷಗಳ ಕಾಲ ಇರುತ್ತದೆ. ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳಲ್ಲಿ ಒಂದು ಎಂದು ರಾಹುವನ್ನು ಪರಿಗಣಿಸಲಾಗಿದೆ, ರಾಹುವನ್ನು ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ವಾರದ ಒಂದು ದಿನವನ್ನು ಇತರ ಏಳು ಗ್ರಹಗಳಿಗೆ ಮೀಸಲಿಟ್ಟರೆ, ಪ್ರತಿದಿನ ಸುಮಾರು 90 ನಿಮಿಷಗಳನ್ನು ರಾಹು ಕಾಲ ಎಂದು ಪರಿಗಣಿಸಲಾಗುತ್ತದೆ. ಪುರಾಣ ಕತೆಯ ಪ್ರಕಾರ ರಾಹುವು ಸ್ವರ್ಭಾನು ಎಂಬ ರಾಕ್ಷಸನ ಕತ್ತರಿಸಿದ ತಲೆ. ಗ್ರಹಣವನ್ನು ಉಂಟುಮಾಡುವವನು. ಪ್ರತಿಮಾಶಾಸ್ತ್ರದಲ್ಲಿ, ರಾಹುವನ್ನು ಮಾನವ ತಲೆ ಮತ್ತು ಹಾವಿನ ದೇಹದಿಂದ ಚಿತ್ರಿಸಲಾಗಿದೆ. ರಾಹುವಿನ ಇನ್ನೊಂದು ಹೆಸರು ಭಯಾನಕ.
ಜ್ಯೋತಿಷ್ಯ ಪ್ರಕಾರ ರಾಹುಕಾಲವು ಮಂಗಳಕರ ಸಮಯವಲ್ಲ. ಮುಹೂರ್ತಗಳನ್ನು ನೋಡುವಾಗ ಈ ಅವಧಿಯನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ.ನಂಬಿಕೆಯ ಪ್ರಕಾರ, ಈ ಸಮಯದಲ್ಲಿ ಮಾಡಿದ ಶುಭ ಕಾರ್ಯಗಳು ಎಂದಿಗೂ ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ. ಈ ಅವಧಿಯಲ್ಲಿ ಜನ ಹೊಸ ಉದ್ಯಮಗಳು, ಮದುವೆ ಪ್ರಸ್ತಾಪಗಳು, ಪ್ರಯಾಣಗಳು, ವ್ಯಾಪಾರಗಳು, ಸಂದರ್ಶನಗಳು, ವ್ಯಾಪಾರಗಳು, ವ್ಯಾಪಾರ ವ್ಯವಹಾರಗಳು, ಆಸ್ತಿಗಳ ಮಾರಾಟ ಅಥವಾ ಖರೀದಿ ಮತ್ತಿತರ ಯಾವುದೇ ಪ್ರಮುಖ ಕೆಲಸ ಪ್ರಾರಂಭಿಸುವುದಿಲ್ಲ.
ರಾಹು ಕಾಲವು ಈಗಾಗಲೇ ಇರುವ ಉದ್ಯಮಗಳನ್ನು ಪ್ರಾರಂಭಿಸಲು ಮಾತ್ರ ಅನ್ವಯಿಸುತ್ತದೆ, ಯಾವುದೇ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಮಾತ್ರ ರಾಹುಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮಂಗಳಕರ ಸಮಯದಲ್ಲಿ ಈಗಾಗಲೇ ಪ್ರಾರಂಭಿಸಿದ ದಿನನಿತ್ಯದ ಕಾರ್ಯಗಳನ್ನು ಯಾವಾಗಲೂ ರಾಹುಕಾಲದಲ್ಲಿ ಮುಂದುವರಿಸಬಹುದು. ಉದಾಹರಣೆಗೆ, ರಾಹುಕಾಲದ ಮೊದಲು ಕಾರ್ಯ ಅಥವಾ ಪ್ರಯಾಣವನ್ನು ಪ್ರಾರಂಭಿಸಿದರೆ, ಅದು ರಾಹುಕಾಲದಲ್ಲಿ ಮುಂದುವರಿಯಬಹುದು ಮತ್ತು ಯಾವುದೇ ಆತಂಕವಿಲ್ಲದೆ ರಾಹುಕಾಲದ ನಂತರವೂ ಪೂರ್ಣಗೊಳ್ಳಬಹುದು. ರಾಹುಕಾಲದಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಬೇಡಿ ಅಥವಾ ಯಾವುದೇ ಹೊಸ ದಾಖಲೆಗಳಿಗೆ ಸಹಿ ಮಾಡಬೇಡಿ.
ರಾಹುಕಾಲದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವುದು ಅಥವಾ ಮಾರುವುದು ನಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ರಾಹುಕಾಲದ ಸಮಯದಲ್ಲಿ ಶುಭ ಗ್ರಹಗಳ ಸಲುವಾಗಿ ಯಜ್ಞ ಯಾಗಾದಿಗಳನ್ನು ಇಟ್ಟುಕೊಂಡರೆ ಅದಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ರಾಹು ಕಾಲದಲ್ಲಿ ಅಪ್ಪಿತಪ್ಪಿಯೂ ಮನೆ, ವಾಹನ, ಕಂಪ್ಯೂಟರ್, ಮೊಬೈಲ್, ಟೆಲಿವಿಷನ್, ಆಭರಣಗಳು ಸೇರಿದಂತೆ ಇತ್ಯಾದಿ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸುವುದು ಒಳ್ಳೆಯದಲ್ಲ.
ಹಾಗಾದರೆ ಏನನ್ನು ಮಾಡಬಹುದು?
ರಾಹುಕಾಲದಲ್ಲಿ ರಾಹುವಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಿದರೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ರಾಹುಕಾಲದಲ್ಲಿ ರಾಹು ಗ್ರಹದ ಶಾಂತಿಗಾಗಿ ಯಜ್ಞಯಾಗಾದಿಗಳನ್ನು ಮಾಡುವುದರಿಂದ ಉತ್ತಮ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಕಾಳಸರ್ಪ (Kala sarpa) ದೋಷವಿದ್ದು ಅದರ ಪರಿಹಾರಕ್ಕಾಗಿ ಅನುಷ್ಠಾನ ಮಾಡ ಬಯಸಿದರೆ, ಅದಕ್ಕೆ ರಾಹುಕಾಲವು ಅತ್ಯಂತ ಸೂಕ್ತ ಸಮಯವಾಗಿರುತ್ತದೆ. ಇದರಿಂದ ಅಂದುಕೊಂಡ ಕಾರ್ಯ ಸಫಲವಾಗುತ್ತದೆ. ರಾಹು ಗ್ರಹದ ಶಾಂತಿಗಾಗಿ ಪಶು ಪಕ್ಷಿಗಳಿಗೆ ಆಹಾರ ತಿನ್ನಿಸುವುದುದಾದರೆ ಅದಕ್ಕೆ ರಾಹುಕಾಲ ಸೂಕ್ತವಾಗಿರುತ್ತದೆ.
ಇದನ್ನೆಲ್ಲ ನೋಡಿದಾಗ ತಿಳಿಯುವುದೇನೆಂದರೆ, ಗಂಡ- ಹೆಂಡತಿಯ ಮಿಲನಕ್ಕೆ ಕೂಡ ರಾಹುಕಾಲ ಸೂಕ್ತಸಮಯವಲ್ಲ. ಆದರೆ, ರಾಹುಕಾಲಕ್ಕಿಂತ ಮುಂಚೆಯೇ ಪ್ರಯಾಣ ಹೊರಟಿದ್ದರೆ ಅಥವಾ ಶುಭಕಾರ್ಯಕ್ಕೆ ಮುಂದಾಗಿದ್ದರೆ, ನಂತರ ಬರುವ ರಾಹುಕಾಲದಲ್ಲಿ ಆ ಕೆಲಸವನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಸರಸ ಸಲ್ಲಾಪಕ್ಕೂ ಇದನ್ನು ಅನ್ವಯಿಸಬಹುದು. ರಾಹುಕಾಲ ಬರುವ ಮುನ್ನವೇ ನೀವು ಪ್ರಣಯದಲ್ಲಿ ತೊಡಗಿದ್ದರೆ, ನಂತರ ಬರುವ ರಾಹುಕಾಲದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
