ಕೆಲವರಿಗೆ ಕೃಪಾದೃಷ್ಟಿ, ಹಲವರಿಗೆ ವಕ್ರದೃಷ್ಟಿ: ಬಿಗಿಯಾದ ಶನಿದೇವನ ಮುಷ್ಟಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 6:31 PM IST
God Shani is going to influence on some sunscience in August
Highlights

ಆಗಸ್ಟ್‌ನಲ್ಲಿ ಶನಿದೇವನ ಕೃಪೆ ಯಾರ ಮೇಲೆ?! ಯಾವ ರಾಶಿಗೆ ಏನು ಲಾಭ ತರಲಿದ್ದಾನೆ ಶನಿದೇವ? ಶನಿದೇವನ ವಕ್ರದೃಷ್ಟಿ ಯಾರ ಮೇಲೆ?! ಯಾರ ಮೇಲೆ ಕೃಪಾದೃಷ್ಟಿ ಬೀರಲಿದ್ದಾನೆ ಶನಿದೇವ? 

ಆಗಸ್ಟ್ 1 ರಿಂದ ಶನಿದೇವರು ರಾಶಿಗಳ ಮೇಲೆ ತನ್ನ ಪ್ರಭಾವ ಬೀರಲು ಪ್ರಾರಂಭಿಸಿದ್ದಾನೆ. ಈ ರಾಶಿಗಳಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಈ ತಿಂಗಳು ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಜ್ಯೋತಿಷ್ಯ ಶಾಸ್ತ್ರಜ್ಞರ ಅಂಬೋಣ.

ಹಾಗಾದರೆ ಯಾವ್ಯಾವ ರಾಶಿಗಳ ಮೇಲೆ ಶನಿದೇವರ ಪ್ರಭಾವ ಇರುತ್ತದೆ ಎಂಬುದನ್ನು ನೋಡುವುದಾದರೆ..

ಮೇಷ: ಈ ರಾಶಿಯ ಜನರಿಗೆ ಶನಿದೇವರ ಕೃಪಾ ದೃಷ್ಟಿ ತುಸು ಹೆಚ್ಚೇ ಇದೆ. ಅದರಲ್ಲೂ ವ್ಯಾಪಾರಿ ವರ್ಗಕ್ಕೆ ಶನಿದೇವರು ಸಿಹಿ ಸುದ್ದಿ ಹೊತ್ತು ತಂದಿದ್ದಾನೆ. ಅಲ್ಲದೇ ಬಹಳ ದಿನಗಳಿಂದ ಬಾಕಿ ಉಳಿದ ಕೆಲಸ ಕಾರ್ಯಗಳು ಈ ತಿಂಗಳಲ್ಲಿ ಪೂರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಸಿಂಹ: ಈ ರಾಶಿಯ ಜನರ ಆರ್ಥಿಕ ಪರಿಸ್ಥಿತಿ ತುಂಬ ಉತ್ತಮವಾಗಿರಲಿದೆ. ಅಲ್ಲದೇ ತೀರ್ಥಯಾತ್ರೆಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಖಂಡಿತ ಸಫಲವಾಗಲಿದೆ. ಶನಿದೇವರ ಕೃಪಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಎಲ್ಲಾ ಸಂಕಷ್ಟಗಳು ಮಾಯವಾಗಲಿವೆ.

ಕನ್ಯಾ: ಈ ರಾಶಿಯ ಜನರಿಗೂ ಶನಿದೇವರ ಕೃಪಾ ದೃಷ್ಟಿ ಈ ತಿಂಗಳಲ್ಲಿ ಇರಲಿದ್ದು, ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಗಳು ಎದುರಾಗಲಿವೆ. ಶೈಕ್ಷಣಿಕ ನಿರ್ಧಾರಗಳು ಖಂಡಿತವಾಗಿ ಫಲಕಾರಿಯಾಗಲಿವೆ.

ವೃಶ್ಛಿಕ: ಉದ್ಯೋಗಸ್ಥರಿಗೆ ಈ ತಿಂಗಳಲ್ಲಿ ಹಲವು ಸಿಹಿ ಸುದ್ದಿಗಳು ದೊರಕಲಿವೆ. ಬಡ್ತಿ, ವೇತನ ಹೆಚ್ಚಳ ಮುಂತಾದ ಸೌಲಭ್ಯಗಳು ಈ ತಿಂಗಳಲ್ಲಿ ಸುಲಭವಾಗಿ ದೊರಕಲಿವೆ.

ಕುಂಭ: ಆರ್ಥಿಕ ಲಾಭ, ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಗುವ  ಸಂಭವ ಹೆಚ್ಚು. ಅಲ್ಲದೇ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಕೂಡ ದೊರೆಯಲಿದೆ.

ವೃಷಭ: ಈ ರಾಶಿಯ ವ್ಯಕ್ತಿಗಳು ಈ ತಿಂಗಳಲ್ಲಿ ತುಸು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರಮುಖವಾಗಿ ಆರೋಗ್ಯ ಸಂಬಂಧಿ ವಿಚಾರದಲ್ಲಿ ಹೆಚ್ಚಿನ ಜಾಗೃತಿ ಅಗತ್ಯ. 

ಮಿಥುನ: ಈ ರಾಈಯ ಜನರ ಜೀವನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದಿದ್ದರೂ, ಮನೆಗೆ ಸಂಬಂಧಿಕರ ಭೇಟಿ ಹೆಚ್ಚಾಗಲಿದೆ. ಇದರಿಂದ ತುಸು ಕಿರಿಕಿರಿಯಾಗುವುದು ಖಚಿತ.

ಕರ್ಕ: ಈ ರಾಶಿಯ ಜನರಿಗೆ ಈ ತಿಂಗಳು ತುಂಬ ಸವಾಲಿನಿಂದ ಕೂಡಿರುತ್ತದೆ. ಅಲ್ಲದೇ ಮಹಿಳೆಯ ಕಾರಣದಿಂದ ಸಂಕಷ್ಟಗಳನ್ನು ಎದುರಿಸಬೇಕಾದ ಪ್ರಸಂಗ ಬರಬಹುದು. ಪ್ರಮುಖವಾಗಿ ಪ್ರೇಮ ಪ್ರಕರಣಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ.

ತುಲಾ: ಈ ರಾಶಿಯ ಜನರು ಈ ತಿಂಗಳನ್ನು ಅತ್ಯಂತ ಸಂತೋಷದಿಂದ ಕಳೆಯಲಿದ್ದಾರೆ. ಗೆಳೆಯರೊಂದಿಗೆ ಪ್ರವಾಸ ಕೈಗೊಳ್ಳುವ ಸಂಭವ ಹೆಚ್ಚು. ಇಷ್ಟೇ ಅಲ್ಲದೇ ಆಧ್ಯಾತ್ಮಿಕತೆಯೆಡೆಗೆ ಮನಸ್ಸು ತುಡಿಯಲಿದೆ.

ಧನು: ಶಾರೀರಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗಲಿದೆ. ನೀವು ಮಾಡುವ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಫಲ ಸಿಗದೇ ಹೋಗಬಹುದು.

ಮಕರ: ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ತುಸು ಕಷ್ಟವಾಗಲಿದೆ. ವ್ಯಾಪಾರಿಗಳಿಗೆ ಆರ್ಥಿಕ ನಷ್ಟದ ಆತಂಕ ಇರಲಿದೆ.

ಮೀನ: ಅಂದುಕೊಂಡ ಕಾರ್ಯ ಕೈಗೂಡಲಿದೆ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಮತ್ತೊಬ್ಬರ ಮೇಲೆ ನಂಬಿಕೆ ಇಡುವುದು ಸಲ್ಲ. ಅಲ್ಲದೇ ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರುವ ಸಾಧ್ಯತೆ ಇದೆ.

loader