Asianet Suvarna News Asianet Suvarna News

ಗಂಡ-ಹೆಂಡ್ತಿ ಜೊತೆಯಾಗಿ ಮಲಗೋ ಮಂಚದ ಕೆಳಗೆ ಈ ವಸ್ತುಗಳನ್ನು ಇರಿಸಬಾರದು!

ಮನೆ ಎಷ್ಟೇ ದೊಡ್ಡದಾಗಿದ್ದರೂ ಅದು ಭವಿಷ್ಯದಲ್ಲಿ ಚಿಕ್ಕದಾಗುತ್ತದೆ. ಹಾಗಾಗಿ ಮನೆಯಲ್ಲಿ ಖಾಲಿ ಸ್ಥಳ ನೋಡಲು ಸಿಗೋದಿಲ್ಲ. ಬಹುತೇಕರು ಮಂಚದ ಕೆಳಗಿನ ಸ್ಥಳದಲ್ಲಿ ನಿರುಪಯುಕ್ತ ವಸ್ತುಗಳನ್ನು ಇರಿಸುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಮಂಚದ ಕೆಳಗೆ ಕಲವೊಂದು ವಸ್ತುಗಳನ್ನು ಇರಿಸಬಾರದು.

don t keep these things under cot as per vastu shastra mrq
Author
First Published May 29, 2024, 3:05 PM IST | Last Updated May 29, 2024, 3:05 PM IST

ದಿನನಿತ್ಯದ ಜೀವನದಲ್ಲಿ ವಾಸ್ತುಶಾಸ್ತ್ರ (Vastu Shastra) ಹಾಸುಹೊಕ್ಕಾಗಿದೆ. ಮನೆ ಕಟ್ಟೋದಕ್ಕೆ ಮಾತ್ರವಲ್ಲ, ಜೀವನ (Life) ಹೇಗೆ ನಡೆಸಬೇಕು ಎಂಬುದನ್ನು ಸಹ ವಾಸ್ತುಶಾಸ್ತ್ರ ಹೇಳುತ್ತದೆ. ಮನೆಯಲ್ಲಿಯ ವಾಸ್ತು ಚೆನ್ನಾಗಿದ್ದರೆ ಜೀವನ ಸರಳವಾಗಿ ಯಾವುದೇ ತೊಂದರೆ ಇಲ್ಲದೇ ನಡೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ವಾಸ್ತುಶಾಸ್ತ್ರ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಬಾಗಿಲು, ಕಿಟಕಿ, ದೇವರಕೋಣೆ, ಮಲಗುವ ಕೋಣೆ  ಸೇರಿದಂತೆ ಮನೆಯಲ್ಲಿಯ ವಸ್ತುಗಳ ಯಾವ ದಿಕ್ಕಿನಲ್ಲಿ ಕ್ರಮಬದ್ಧವಾಗಿ ಇರಿಸಬೇಕು ಎಂಬುದನ್ನು ವಾಸ್ತುಶಾಸ್ತ್ರ ವಿವರಿಸುತ್ತದೆ. ಮನೆ ಎಷ್ಟೇ ದೊಡ್ಡದಾಗಿದ್ದರೂ ಅದು ಭವಿಷ್ಯದಲ್ಲಿ ಚಿಕ್ಕದಾಗುತ್ತದೆ. ಹಾಗಾಗಿ ಮನೆಯಲ್ಲಿ ಖಾಲಿ ಸ್ಥಳ ನೋಡಲು ಸಿಗೋದಿಲ್ಲ. ಬಹುತೇಕರು ಮಂಚದ ಕೆಳಗಿನ ಸ್ಥಳದಲ್ಲಿ ನಿರುಪಯುಕ್ತ ವಸ್ತುಗಳನ್ನು ಇರಿಸುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಮಂಚದ ಕೆಳಗೆ ಕಲವೊಂದು ವಸ್ತುಗಳನ್ನು ಇರಿಸಬಾರದು.

ಗಂಡ-ಹೆಂಡತಿ ಮಲಗುವ ಮಂಚದ ಕೆಳಗೆ ಕೆಲವೊಂದು ವಸ್ತುಗಳನ್ನು ಇರಿಸಬಾರದು. ಮಂಚದ ಕೆಳಗ ಕೆಲ ವಸ್ತುಗಳಿದ್ದರೆ ದಾಂಪತ್ಯದಲ್ಲಿ ವಿರಸ ಉಂಟಾಗಿ ಕಲಹ ಉಂಟಾಗುತ್ತದೆ. ಇದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ಒಂದು ವೇಳೆ ನಿಮ್ಮ ಮನೆಯ ಮಂಚದ ಕೆಳಗೆ ಈ ವಸ್ತುಗಳಿದ್ದರೆ ಇಂದೇ ತೆಗೆದುಬಿಡಿ. 

1.ಬಹುತೇಕರ ಮನೆಗಳಲ್ಲಿ ಮಂಚದ ಕೆಳಗೆ ಹಳೆಯ ಪೆಟ್ಟಿಗೆಗಳನ್ನು ಇಟ್ಟಿರುತ್ತಾರೆ. ಹಳೆಯ ಪೆಟ್ಟಿಗೆ ಅಥವಾ ಟ್ರಂಕ್‌ಗಳನ್ನು ವಾಸ್ತುಶಾಸ್ತ್ರದ ಪ್ರಕಾರ  ಮಂಚದ ಕೆಳಗೆ ಇರಿಸಬಾರದು. ಒಂದು ವೇಳೆ ಪೆಟ್ಟಿಗೆಯಲ್ಲಿ ದೇವರ ಫೋಟೋಗಳಿದ್ದರೆ ಇದು ವಾಸ್ತುಶಾಸ್ತ್ರದ ಪ್ರಕಾರ ದೋಷ. ಅದೇ ರೀತಿ ಸಾವನ್ನಪ್ಪಿದವರ ಫೋಟೋಗಳನ್ನು ಸಹ ಇರಿಸಬಾರದು. ಮಂಚದ ಕೆಳಗಿನ ಪೆಟ್ಟಿಗೆಗಳಲ್ಲಿ ಚಿನ್ನ-ಬೆಳ್ಳಿಯನ್ನು ಸಹ ಇರಿಸಬಾರದು. ಚಿನ್ನ-ಬೆಳ್ಳಿ ಇರಿಸುವ ಜಾಗ ಪ್ರತ್ಯೇಕವಾಗಿರಬೇಕು. ಹೀಗೆ ಮಾಡೋದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. 

2.ಮಂಚದ ಕೆಳಗೆ ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಇರಿಸಬಾರದು. ದಿನನಿತ್ಯ ಬಳಕೆಯ ಹಳೆಯ ಪಾತ್ರೆಗಳನ್ನು ಸಹ ಗಂಡ-ಹೆಂಡತಿ ಮಲಗುವ ಮಂಚದ ಕೆಳಗೆ ಇರಿಸೋದರಿಂದ ಆರ್ಥಿಕ ಮುಗ್ಗಟ್ಟು ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತೆ ಎಂದು ವಾಸ್ತುಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.  

ಗಂಡ ಹೆಂಡತಿ ವೈಮನಸ್ಯ ತೊಲಗಿಸಿ, ಅದೃಷ್ಟದ ಬಾಗಿಲೂ ತೆರೆಸುತ್ತೆ ದಾಸವಾಳ!

3.ಮಂಚದ ಕೆಳಗೆ ಆಹಾರ ಸಾಮಾಗ್ರಿಗಳನ್ನು ಸಹ ಇರಿಸಬಾರದು. ಕೆಲವರು ಮಂಚದ ಕೆಳಗೆ ಅಕ್ಕಿ, ಜೋಳ, ರಾಗಿ, ದವಸ-ಧಾನ್ಯಗಳ ಮೂಟೆಗಳನ್ನು ಇರಿಸಿರುತ್ತಾರೆ. ಮಂಚದ ಕೆಳಗೆ ಆಹಾರ ಸಾಮಾಗ್ರಿ ಇದ್ರೆ ಮಲಗಿದ್ದ ವೇಳೆ ಆಲೋಚನೆಗಳು ತಪ್ಪು ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇರುತ್ತದೆ. 

4.ಕೆಲವರು ಭದ್ರತೆಗಾಗಿ ಹಾಸಿಗೆ ಅಥವಾ ಮಂಚದ ಕೆಳಗೆ ಹಣ ಇರಿಸುತ್ತಾರೆ. ಇದು ಸಹ ವಾಸ್ತು ಪ್ರಕಾರ ತಪ್ಪು. ಹೀಗೆ ಮಾಡೋದರಿಂದ ಲಕ್ಷ್ಮಿದೇವಿಯ ಕೋಪಕ್ಕೆ ತುತ್ತಾಗಿ ಜೀವನದಲ್ಲಿ ಸಾಲು ಸಾಲು ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ನೀಲಿ ಬಣ್ಣವು ಏನನ್ನು ಸಂಕೇತಿಸುತ್ತದೆ? ಈ ಬಣ್ಣವನ್ನು ಇಷ್ಟಪಡುವವರು ಈ 5 ವಿಶೇಷ ವಿಷಯಗಳನ್ನು ತಿಳಿದಿರಬೇಕು

5.ಮಂಚದ ಕೆಳಗೆ ಪೊರಕೆ ಸಹ ಇರಿಸಬಾರದು. ಪೊರಕೆ ಮಂಚದ ಮೇಲೆ ಮಲಗುವ ಜನರ ಮನದಲ್ಲಿ ನಕಾರಾರತ್ಮಕ ಆಲೋಚನೆಗಳನ್ನು ಪಸರಿಸುತ್ತದೆ. ಹಾಗಾಗಿ ಮಂಚದಡಿಯಲ್ಲಿ ಪೊರಕೆ, ಚಪ್ಪಲಿ, ಶೂಗಳು, ಒಡೆದ ಗಾಜಿನ ಸಾಮಾಗ್ರಿಗಳು ಇರಿಸೋದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. 

6.ಹರಿದ ಬಟ್ಟೆಗಳು, ಹರಿದ ಹಾಸಿಗೆಗಳು ಗೃಹಬಳಕೆ ಬರುತ್ತವೆ ಎಂದು ಮಂಚದ ಕೆಳಗೆ ಮೂಟೆಯಲ್ಲಿ ಕಟ್ಟಿ ಇಡಲಾಗುತ್ತದೆ. ಹರಿದ ಬಟ್ಟೆಗಳು ಮನೆಯಲ್ಲಿ ನಕಾರಾತ್ಮಕ ಅಂಶವನ್ನು ಹರಡುತ್ತವೆ. ಮಂಚದಡಿಯಲ್ಲಿ ಇರಿಸೋದರಿಂದ ಮಾನಸಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ವಾಸ್ತುದೋಷ ಮನೆಯ ಸುಖ ಶಾಂತಿಯನ್ನು ಹಾಳು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

Latest Videos
Follow Us:
Download App:
  • android
  • ios