ಈ ರಾಶಿಗೆ ಇಂದು ಶುಭವಾರ್ತೆ ದೊರೆಯಲಿದೆ

Dina Bhavishya june 21
Highlights

ಈ ರಾಶಿಗೆ ಇಂದು ಶುಭವಾರ್ತೆ ದೊರೆಯಲಿದೆ

ಮೇಷ
ಧನಾತ್ಮಕವಾದ ಆಲೋಚನೆಗಳನ್ನು ರೂಢಿಸಿ
ಕೊಳ್ಳಿ. ನಿಮ್ಮ ಕೆಲಸಗಳಲ್ಲಿ ಈಗ ಯಶಸ್ಸು
ದೊರೆಯಲಿದೆ. ನೆಮ್ಮದಿ ಸಿಗುವ ದಿನ.

ವೃಷಭ
ಖರ್ಚುವೆಚ್ಚಗಳಲ್ಲಿ ಹೆಚ್ಚಿನ ಬದಲಾವಣೆ.
ಮನೆಯ ವಾತಾವರಣವು ಪ್ರಶಾಂತವಾಗಿದೆ.
ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವ ದಿನವಿದು.

ಮಿಥುನ
ನಿಮ್ಮ ಸ್ವಂತ ಊರಿಂದ ಶುಭ ಸುದ್ದಿ ಬರಲಿದೆ.
ಸೋಮಾರಿಗಳಾಗಿದ್ದ ನಿಮ್ಮನ್ನು ಎಬ್ಬಿಸಲಿದೆ.
ನಿಮ್ಮ ಮನಸ್ಸಿಗೆ ಖುಷಿ ತರುವ ದಿನವಿದು.

ಕಟಕ
ದೂರ ಪ್ರಯಾಣದ ಯೋಗ. ಆರೋಗ್ಯ
ತಪಾಸಣೆ ಮಾಡಿಸಿಕೊಳ್ಳಿ. ಯೋಚಿಸಿ ನಿರ್ಧಾರ
ಕೈಗೊಳ್ಳಿ. ದುಡುಕುವುದು ಸರಿಯಲ್ಲ.

ಸಿಂಹ
ಹಣಕಾಸಿನ ಬಗ್ಗೆ ಚಿಂತಿಸದೇ ಇರುವುದೇ
ಕ್ಷೇಮ. ಅದರ ಹಿಂದೆ ಬೀಳದಿರಿ. ಅದೇ
ನಿಮ್ಮತ್ತ ಬರಲಿದೆ. ಅವಸರ ಒಳ್ಳೆಯದಲ್ಲ

ಕನ್ಯಾ
ಸ್ವಂತ ಉದ್ಯೋಗದಲ್ಲಿ ಪ್ರಗತಿಯಾಗಲಿದೆ.
ಭಿನ್ನಾಭಿಪ್ರಾಯಗಳು ದೂರಾಗಿ ಸಾಮರಸ್ಯ
ಉಂಟಾಗಲಿದೆ. ಎಚ್ಚರಿಕೆಯಿಂದ ವ್ಯವಹರಿಸಿ.

ತುಲಾ 
ಸಮಾಜ ಸೇವೆಯಲ್ಲಿ ತೊಡಗಲಿದ್ದೀರಿ. ಹಿತ
ಚಿಂತಕರ ಆಗಮನವಾಗಲಿದೆ. ಮನಸ್ಸಿಗೆ
ಉಲ್ಲಾಸ ಸಿಗುವ ದಿನವಿದು. ಧನಾಗಮನ.

ವೃಶ್ಚಿಕ
ಆರೋಗ್ಯವು ಸುಧಾರಿಸಲಿದೆ. ಮನೆಯ
ವಾತಾವರಣವು ನಿಮಗೆ ಪೂರಕವಾಗಿದೆ.
ಖರ್ಚುವೆಚ್ಚಗಳಲ್ಲಿ ಬದಲಾವಣೆಯಾಗಲಿದೆ. 

ಧನುಸ್ಸು
ವಯಸ್ಸಾದವರು ಮನೆಯಲ್ಲಿದ್ದು ನಿಮ್ಮಿಂದ
ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ನಿಮ್ಮ
ಸಾಂತ್ವನದ ಮಾತುಗಳು ಅಗತ್ಯವಾಗಿದೆ.

ಮಕರ
ಕಲಹ-ವಿರಸಗಳಿಗೇನು ಕಡಿಮೆ ಇಲ್ಲ. ಆದರೆ
ಮುಂಗೋಪಿಗಳಾದ ನಿಮಗಿದು ಹೊಸತಲ್ಲ.
ಮನಸ್ಸನ್ನು ಹತೋಟಿಗೆ ತರಲು ಪ್ರಯತ್ನಿಸಿ.

ಕುಂಭ
ಹೊಸ ಥರದ ಆಲೋಚನೆಗಳು ನಿಮ್ಮನ್ನು
ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ
ನೆಮ್ಮದಿ ಹೊಂದುತ್ತೀರಿ. ಖುಷಿಯ ದಿನ.

ಮೀನ 
ರೈತಾಪಿ ಬಂಧುಗಳಿಗೆ ಹಾಗೂ ವ್ಯಾಪಾರಸ್ಥರಿಗೆ
ಲಾಭ ಹೆಚ್ಚು ಸಿಗದಿದ್ದರೂ ಅಂಥ ನಷ್ಟವೇನೂ
ಕಾಣದು. ಆದರೂ ಸ್ವಲ್ಪ ತಾಳ್ಮೆಯಿಂದಿರಿ

loader