ಮೇಷ: ಸುಖವನ್ನು ಅರಸಿ ಹೋಗುವುದು ಬೇಡ. ಅದು ನಿಮ್ಮ ಬಳಿಯೇ ಇದೆ. ಆತ್ಮೀಯರಿಗೆ ನೋವಾಗದಂತೆ ನಡೆದುಕೊಳ್ಳಿ. ಶುಭಫಲ.

ವೃಷಭ: ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ಆಸಕ್ತಿ ಹುಟ್ಟಲಿದೆ. ನಗರ ವಾಸಿಗಳಿಗೆ ಆದಾಯದಲ್ಲಿ ಹೆಚ್ಚಳ. ತಾಯಿ ಮಾತಿಗೆ ಹೆಚ್ಚು ಬೆಲೆ ನೀಡಿ.

ಮಿಥುನ: ಸೋಮಾರಿತನದಿಂದ ಹೊರಗೆ ಬರಲಿದ್ದೀರಿ. ಟೈಂ ಟೇಬಲ್ ಸಿದ್ಧ ಮಾಡಿಕೊಂಡು ಅದರ ಪ್ರಕಾರ ನಡೆದುಕೊಳ್ಳಲಿದ್ದೀರಿ. ಶುಭ ಫಲ.

ಕಟಕ: ನೀವಿರುವ ಸ್ಥಳ, ಸಂದರ್ಭವನ್ನು ನೋಡಿ ಕೊಂಡು ನಿಮ್ಮ ಅಭಿಪ್ರಾಯ ಹೇಳಿ. ನಿಮ್ಮ ಉತ್ಸಾಹ ಮತ್ತೊಬ್ಬರಿಗೆ ತೊಂದರೆ ನೀಡಬಾರದು

ಸಿಂಹ: ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಗುವಿನಂತಾಗಲಿದೆ ನಿಮ್ಮ ಇವತ್ತಿನ ಸ್ಥಿತಿ. ಸಂಜೆ ವೇಳೆಗೆ ಎಲ್ಲವೂ ನಿರಾಳವಾಗಲಿದೆ.

ಕನ್ಯಾ: ಸಮಯ ಸಾಧಕರು, ಸ್ವಾರ್ಥಿಗಳು ನಿಮ್ಮ ಸುತ್ತಲೂ ಇದ್ದಾರೆ. ಅವರನ್ನು ಗುರುತಿಸುವ ಜಾಣ್ಮೆ ಬೆಳೆಸಿಕೊಳ್ಳಿ. ಹೊಸ ಯಶದ ಸಾಧ್ಯತೆ.

ತುಲಾ: ನಿಮ್ಮ ಆಲೋಚನೆಗಳ ಮೇಲೆ ಮತ್ತೊಬ್ಬರು ಸವಾರಿ ಮಾಡದಂತೆ ಎಚ್ಚರ ವಹಿಸಿ. ಹೊಸ ತುಲಾ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗುವಿರಿ.

ವೃಶ್ಚಿಕ: ಮನೆ ಮಂದಿಯ ಯಶಸ್ಸಿಗೆ ನೀವು ಶ್ರಮ ಹಾಕಲಿದ್ದೀರಿ. ನಿಮಗೆ ಸಂಬಂಧಪಡದ ವಿಚಾರಗಳ ಕಡೆಗೆ ಗಮನ ನೀಡುವುದು ಬೇ

ಧನುಸ್ಸು: ಆತ್ಮಗೌರವ ಹೆಚ್ಚಾಗಲಿದೆ. ವಿಚಾರ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದೀರಿ. ಆರ್ಥಿಕ ವಾಗಿ ತುಸು ಹೊರೆಯಾಗುವ ದಿನವಿದು.

ಮಕರ: ಕಂಡದ್ದೆಲ್ಲವೂ ಸತ್ಯವಲ್ಲ. ಪೂರ್ಣವಾಗಿ ತಿಳಿದುಕೊಳ್ಳದೇ ಪ್ರತಿಕ್ರಿಯೆ ನೀಡದಿರಿ. ಮಾತಿಗಿಂತ ಕೆಲಸದಲ್ಲಿ ತೊಡಗಿಸಿಕೊಳ್ಳಿ.

ಕುಂಭ: ಹೊಸ ವ್ಯವಹಾರದ ಸಾಧ್ಯತೆಗಳು ನಿಮ್ಮ ಮುಂದೆ ಬರಲಿವೆ. ಸೀಮಿತ ಆದಾಯದ ಗುಂಪಿಗೆ ಇಂದು ಶುಭವಾಗಲಿ

ಮೀನ: ಬೆಳಿಗ್ಗೆಯಿಂದಲೇ ಹೆಚ್ಚು ಕ್ರಿಯಾಶೀಲವಾಗಿ ದುಡಿಯಲಿದ್ದೀರಿ. ಪ್ರಜ್ಞಾವಂತಿಕೆ ಮೀನ ಬೆಳೆಯಲಿದೆ. ಆರೋಗ್ಯ ಚೇತರಿಕೆಯಾಗಲಿ