ಮೇಷ: ಶಾಂತ ಮನಸ್ಸಿನಿಂದ ಸಕಲ ಕಾರ್ಯಗಳಲ್ಲೂ ಯಶಸ್ಸು ಕಾಣುವಿರಿ. ದಿನದಂತ್ಯದಲ್ಲಿ ತಲೆನೋವಿನ ವಿಚಾರಗಳು ಎದುರಾಗಲಿದೆ.

ವೃಷಭ: ಓದಿನ ವಿಚಾರದಲ್ಲಿ ದುಡುಕು ನಿರ್ಧಾರದಿಂದ ಎಚ್ಚರ. ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಆರೋಗ್ಯದಲ್ಲಿ ಕೊಂಚ ಏರುಪೇರು.

ಮಿಥುನ: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ. ಮೌನ ಸಿದ್ಧಿ.

ಕಟಕ: ದುಶ್ಚಟಗಳಿಂದ ನಿಮಗೂ ಹಾಗೂ ನಿಮ್ಮವರಿ ಗೂ ಮಾರಕವಾಗಬಹುದು. ಅದರಿಂದ ದೂರ ಇರುವುದು ಒಳಿತು. ವ್ಯಾಪಾರಿಗಳಿಗೆ ಲಾಭ.

ಸಿಂಹ: ಮುಗ್ಧರಾಗಿದ್ದರೆ ನಿಮ್ಮನ್ನು ದುರಪಯೋಗಪಡಿಸಿಕೊಳ್ಳಬಹುದು. ಕಟುವಾದ ಮಾತು ನೋವು ತರುವ ಸಾಧ್ಯತೆ. ಎಚ್ಚರ ಇರಲಿ

ಕನ್ಯಾ: ಸ್ನೇಹಿತರಿಂದ ಸಂತಸ. ದೂರ ಪ್ರಯಾಣ ಸಾಧ್ಯ. ದಿನದಂತ್ಯದಲ್ಲಿ ಶುಭ ಸುದ್ದಿ. ಶುಭ ದಿನ. ಮಾತಿನಲ್ಲಿ ಎಚ್ಚರಿಕೆ ಇರಲಿ.

ತುಲಾ: ಎಷ್ಟೋ ದಿನದ ನಿಮ್ಮ ಶ್ರಮ ಫಲಿಸಲಿದೆ. ಮಹಿಳೆಯರಿಗೆ ಕಂಕಣ ಭಾಗ್ಯ. ಕಟ್ಟಡ ತುಲಾ ಕಾರ್ಮಿಕರಿಗೆ ಲಾಭ. ಆರೋಗ್ಯ ವೃದ್ಧಿ.

ವೃಶ್ಚಿಕ: ಎಂದೋ ನಡೆದ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳದಿರಿ. ದೂರಾದವರು ಹತ್ತಿರವಾಗಲಿ ದ್ದಾರೆ. ಶುಭ ದಿನ ನಿಮ್ಮ ಪಾಲಿಗೆ ಇದಾಗಲಿದೆ.

ಧನುಸ್ಸು: ಮನುಷ್ಯ ರೂಪದ ವಿಷಜಂತುಗಳಿಂದ ದೂರ ಇರುವುದು ನಿಮ್ಮ ಬದುಕಿಗೆ ಉತ್ತಮ. ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಲಾಭ.

ಮಕರ: ಯಾರಿಗೂ ಎದುರು ಮಾತನಾಡದಿರುವುದು ಉತ್ತಮ. ಕೆಲಸದ ವಿಚಾರದಲ್ಲಿ ಕಿರಿ-ಕಿರಿ ಯಾದರೂ ದುಡುಕದೆ ಬಗೆಹರಿಸುವಿರಿ.

ಕುಂಭ: ಯಾರದೋ ತಪ್ಪಿನಿಂದ ನಿಮಗೆ ಶಿಕ್ಷೆಗಳು ಎದುರಾಗಬಹುದು. ಸಮಸ್ಯೆ ಎದುರಾದರೂ ಧೈರ್ಯದಿಂದ ಎದುರಿಸಲಿದ್ದೀರಿ.

ಮೀನ: ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಬಾಧೆಗಳು ಮೀನ ಎದುರಾದರೂ ಅದನ್ನು ನಿವಾರಿಸಲಿದ್ದೀರಿ.